ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಗ್ರಾಹಕರೊಬ್ಬರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಯಿಂದ ಅನ್ ಲೈನ್ ಮೂಲಕ ವಂಚನೆಗೆ ಒಳಗಾಗಿ ಕಳೆದುಕೊಂಡಿರುವ ಹಣವನ್ನು ಭರಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.
ಇದನ್ನೂ ಓದಿ: ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ: ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

ಕೊಪ್ಪ ಗುಣವಂತೆ ರಸ್ತೆಯ ರಜನಿ ಎಚ್.ಸಿ.ಸತೀಶ್ ಎಂಬುವವರು ಕೆನರಾ ಬ್ಯಾಂಕ್ ಕೊಪ್ಪ ಶಾಖೆಯಲ್ಲಿ ಖಾತೆ ಹೊಂದಿದ್ದು, ಆನ್ಲೈನ್ ವಂಚನೆಗೆ ಒಳಗಾಗಿ 2.25 ಲಕ್ಷ ರೂ. ಕಳೆದುಕೊಂಡಿದ್ದರು. ಈ ಬಗ್ಗೆ ಬ್ಯಾಂಕ್ನಲ್ಲಿ ವ್ಯವಹರಿಸಿ ಮೊತ್ತವನ್ನು ಹಿಂದಿರುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು. ಆದರೆ, ಬ್ಯಾಂಕ್ ಹಣವನ್ನು ಪಾವತಿಸದೆ ಸೇವಾ ನ್ಯೂನತೆ ಎಸಗಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಜನಿ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಎನ್.ಆರ್.ಚೆನ್ನಕೇಶವ ಮತ್ತು ಸದಸ್ಯೆ ಇ.ಇಂದಿರಾ ಅವರು ಕೆನರಾ ಬ್ಯಾಂಕ್ನಿಂದ 2.25 ಲಕ್ಷ ರೂ.ವನ್ನು ವಾರ್ಷಿಕ ಶೇ.9ರಂತೆ ಬಡ್ಡಿ ಸೇರಿಸಿ, ಪರಿಹಾರವಾಗಿ 15 ಸಾವಿರ ರೂ. ಹಾಗೂ ಪ್ರಕರಣದ ವೆಚ್ಚಕ್ಕಾಗಿ 10 ಸಾವಿರ ರೂ.ವನ್ನು ರಜನಿ ಅವರಿಗೆ ಪಾವತಿಸುವಂತೆ ಆದೇಶ ನೀಡಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 2000 ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ!; ಏನದು? ಇಲ್ಲಿದೆ ನೋಡಿ
ಹಣ ದ್ವಿಗುಣ ಆಮಿಷ:18 ಲಕ್ಷ ರೂ ವಂಚನೆ:
ವ್ಯಕ್ತಿಯೊಬ್ಬರಿಗೆ TELEGRAM APP ನಲ್ಲಿ Spreadex Markets Itd online trading ನಲ್ಲಿ ಹಣವನ್ನು ಹಾಕಿ ದುಪ್ಪಟ್ಟು ಲಾಭಂಶವನ್ನು ಗಳಿಸುವಂತೆ ಮೇಸೆಜ್/ಸಂದೇಶ ಬಂದಿದ್ದು, ಇದನ್ನು ನಂಬಿದ ವ್ಯಕ್ತಿ online trading ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು ಹಣವನ್ನು ಹಾಕಲು ಒಪ್ಪಿ ಸೈಬರ್ ವಂಚಕರು ನೀಡಿದ ಖಾತೆಗೆ ಒಟ್ಟು 18 ಲಕ್ಷ ಹಣವನ್ನು ಹಾಕಿ ಮೋಸ ಹೋಗಿದ್ದಾರೆ. ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ಸ್ಟಾಕ್ ವ್ಯಾಪಾರ, ಕ್ರಿಪ್ಟೋಕರೆನ್ಸಿ ವ್ಯಾಪಾರ ಮತ್ತು ಇತರ ರೀತಿಯ ಆನ್ಲೈನ್ ಹೂಡಿಕೆ ಸೇರಿದಂತೆ ಆನ್ಲೈನ್ ವ್ಯಾಪಾರಗಳಲ್ಲಿ ಮುಗ್ದಜನರನ್ನು ಬಲಿಪಶು ಮಾಡಿ ಮೋಸಗೊಳಿಸುವ ದುರುದ್ದೇಶಪೂರಿತ ವಂಚನೆಯ ವಿಧವಾಗಿದ್ದು, ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.
ಇದನ್ನೂ ಓದಿ: ದ್ವಿತೀಯ PU ಫಲಿತಾಂಶದಲ್ಲಿ ನಿಮ್ಮ ಜಿಲ್ಲೆಗೆ ಯಾವ ಸ್ಥಾನ?
ಅಜ್ಞಾತ ಅನುಮಾನಾಸ್ಪದ ಲಿಂಕ್ , ವಿಷಯ ಅಥವಾ ವಹಿವಾಟುಗಳಿದ್ದಲ್ಲಿ ತಕ್ಷಣವೇ ಸೈಬರ್ ಸಹಾಯವಾಣಿ: 1930 ಅಥವಾ ಹತ್ತಿರದ ಪೊಲೀಸ್ ಠಾಣೆ/ ಅಥವಾ ಸೆನ್ ಪೊಲೀಸ್ ಠಾಣೆಗೆ ದೂರು/ಮಾಹಿತಿಯನ್ನು ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದೆ.












