ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಆಟೊ ರಿಕ್ಷಾದಲ್ಲಿ ಆಯುಧ ಪತ್ತೆಯಾಗಿದ್ದು, ಮಂಗಳೂರು ಮೂಲದ ಶೌಕತ್ ಹಾಗೂ ನೌಫಲ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಣಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ: ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

ಕೊಟ್ಟಿಗೆಹಾರದ ತನಿಖಾಠಾಣೆ ಬಳಿ ಭಾನುವಾರ ಬೆಳಿಗ್ಗೆ ತನಿಖಾ ದಳದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ, ಚಾರ್ಮಾಡಿ ಘಾಟಿ ಕಡೆಯಿಂದ ಬಂದ ಆಟೊವನ್ನು ಪರಿಶೀಲಿಸಲಾಗಿದ್ದು, ಆಟೊದೊಳಗೆ ಚಾಕು ಸೇರಿದಂತೆ ಆಯುಧಗಳು ಪತ್ತೆಯಾಗಿದ್ದರಿಂದ ಆಟೊದಲ್ಲಿದ್ದ ಮಂಗಳೂರು ತಾಲ್ಲೂಕಿನ ತೊಕ್ಕೊಟ್ಟು ಜಂಕ್ಷನ್ ನ ಶೌಕತ್ ಹಾಗೂ ಅರ್ಕುಳದ ನೌಫಲ್ ನನ್ನು ವಶಕ್ಕೆ ಪಡೆದಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 2000 ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ!; ಏನದು? ಇಲ್ಲಿದೆ ನೋಡಿ













