ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನಲ್ಲಿ ನಡೆದಿದೆ. ಎನ್.ಆರ್ ಪುರ ತಾಲೂಕಿನ ಹಿಳುವಳ್ಳಿ ಗ್ರಾಮದ ಮಧು ಭಂಡಾರಿ (38) ಬಂಧಿತ ಆರೋಪಿ.
ಇದನ್ನೂ ಓದಿ; ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ; ಈ ಯೋಜನೆಯ ಹಣ ಬಂದಿಲ್ವಾ!; ಕೂಡಲೇ ಈ ದಾಖಲಾತಿಗಳನ್ನು ಇವರಿಗೆ ಸಲ್ಲಿಸಿ

ಬಂಧಿತ ಆರೋಪಿಗಳಿಂದ 3000/- ರೂ ನಗದು, ಕಳ್ಳತನದ ಹಣದಿಂದ ತೆಗೆದುಕೊಂಡಿದ್ದ 8500 ರೂ ಬೆಲೆಯ ವಿವೋ ಕಂಪನಿಯ ಒಂದು ಮೊಬೈಲ್, 11000/- ರೂ ಮೌಲ್ಯದ 2 ಗ್ರಾಂ 200 ಮೀಲಿಯ ಚಿನ್ನದ ತಾಳಿ ಸರದ ಕೊಂಡಿಯನ್ನು ವಶಪಡಿಸಿಕೋಂಡಿದ್ದಾರೆ.
ಇದನ್ನೂ ಓದಿ; ಆರೋಗ್ಯ ಸಹಾಯವಾಣಿ 104′ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುತ್ತಾರೆ ಎಂಬ ಯೋಜನೆ ಜಾರಿ; ಇದರ ಸತ್ಯಾಸತ್ಯತೆ ಏನು
ಪ್ರಕರಣದಲ್ಲಿ ಪಿ.ಎಸ್.ಐ ಗುರು ಎ ಸಜ್ಜನ್, ಜ್ಯೋತಿ, ಸಿಬ್ಬಂದಿಗಗಳಾದ ಶಂಕರ್, ಗಿರೀಶ ಕುಮಾರ್, ದೇವರಾಜು, ಅಸೀಫ್ ಇದ್ದರು.
ಶೃಂಗೇರಿ: ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಬೈಕ್ ಗಳಿಗೆ ಡಿಕ್ಕಿ
ಮೆಣಸೆ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಬೈಕ್ ಗಳಿಗೆ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಆಲ್ಟೊ ಕಾರು ಮೆಣಸೆ ಸರ್ಕಾರಿ ಶಾಲೆ ಮುಂಭಾಗದಲ್ಲಿ ನಿಲ್ಲಿಸಿದ್ದ ಸುಮಾರು 9 ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಕಾರು ಹಾಗೂ ಬೈಕ್ ಗಳು ಜಖಂಗೊಂಡಿದೆ. ಈ ಅವಘಡದಲ್ಲಿ ಶಾಲಾ ಮಕ್ಕಳಿಗೂ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಮೆಣಸೆಯ ಸಂಸ್ಕೃತ ಕಾಲೇಜು ಸಮೀಪದಿಂದ ಮೆಣಸೆ ಬಸ್ ಸ್ಟಾಪ್ ವರೆಗೆ ಹಂಪ್ ಹಾಕದಿದ್ದರೆ ವಾಹನದ ವೇಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಪಾಯ ಮತ್ತು ಜೀವ ಹಾನಿ ಆಗುವ ಸಂಭವವಿದೆ ಎನ್ನುತ್ತಾರೆ ಸಾರ್ವಜನಿಕರು.












