ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಚಟುವಟಿಕೆಗಳಿಗೆ ಆಕ್ಷನ್ ಪ್ಲಾನ್ ತಯಾರಿಸಲು ಪಂಚಾಯಿತಿ ಸದಸ್ಯರುಗಳನ್ನು ಕೂರಿಸಿಕೊಂಡು ಆಕ್ಷನ್ ಪ್ಲಾನ್ ಮಾಡದೆ, ಡಮ್ಮಿ ಆಕ್ಷನ್ ಪ್ಲಾನ್ ಮಾಡಿ ಎಂದು ಅಧಿಕಾರಿಗಳೇ ಸೂಚನೆ ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ; BPL ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ಈ ತರಬೇತಿಗೆ ಅರ್ಜಿ ಆಹ್ವಾನ

ಅಧಿಕಾರಿಗಳು ಈ ತರಹದ ವರ್ತನೆ ಹೊಂದಿದ್ದು ಪಂಚಾಯಿತಿ ಅಭಿವೃದ್ಧಿ ಆಗ್ಬೇಕು ಅಂದ್ರೆ ಹೇಗೆ ಸಾಧ್ಯ ಇಂತಹ ಅಧಿಕಾರಿಗಳನ್ನ ಇಟ್ಕೊಂಡು. ಇಂತಹ ಅಧಿಕಾರಿಗಳನ್ನ ಉಳಿಸಿ ಬೆಳೆಸುತ್ತಿರುವ ಶಾಸಕರು ಇದಕ್ಕೆ ಉತ್ತರಿಸಬೇಕು ಎಂದು ಶೃಂಗೇರಿಯ ವಿದ್ಯಾರಣ್ಯಪುರ ಹಾಗೂ ಮರ್ಕಲ್ ಗ್ರಾಮ ಪಂಚಾಯಿತಿ ಸದಸ್ಯರುಗಳು ಕಿಡಿಕಾರಿದ್ದಾರೆ.
ರಾಘವೇಂದ್ರ ಎಂಬ ಅಧಿಕಾರಿಯು ಈ ತರಹದ ಸೂಚನೆಯನ್ನು ವಾಟ್ಸಾಪ್ ಗ್ರೂಪ್ ನಲ್ಲಿ ನೀಡಿದ್ದು ಇದನ್ನು ಸದಸ್ಯರುಗಳು ಟೀಕಿಸುತ್ತಿದ್ದಾರೆ.
ಇದನ್ನೂ ಓದಿ; ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ; ಪಿಯುಸಿ ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
ಏನಿದೆ ಸೂಚನೆಯಲ್ಲಿ?
ದಯಮಾಡಿ ಎಲ್ಲರೂ ಈ ಗ್ರಾಮ ಸ್ವರಾಜ್ ಪೋರ್ಟಲ್ ನಲ್ಲಿ ಆಕ್ಷನ್ ಪ್ಲಾನನ್ನು ಇಂಡಿಕರಿಸಲು ಕೋರಿದೆ.
ಒಂದು ವೇಳೆ ಒರಿಜಿನಲ್ ಆಕ್ಷನ್ ಪ್ಲಾನ್ ಇಲ್ಲದೆ ಇದ್ದರೆ ದಯಮಾಡಿ ಡಮ್ಮಿ ಆಕ್ಟಿವಿಟೀಸ್ ಗಳನ್ನ ಇಂಡಿಕರಿಸಿ ಆಕ್ಷನ್ ಪ್ಲಾನ್ ಅಪ್ರೂವ್ ಮಾಡಿಕೊಳ್ಳುವುದು ನಂತರದ ದಿನಗಳಲ್ಲಿ ಡಮ್ಮಿ ಆಕ್ಷನ್ ಪ್ಲಾನ್ ಅನ್ನು ರಿವರ್ಟ್ ಮಾಡಿಸಿಕೊಡಲಾಗುವುದು. ದಯಮಾಡಿ ಎಲ್ಲರೂ ಇಂದು 15.10.2024ರ ಸಂಜೆ 4ರ ಒಳಗೆ ಒರಿಜಿನಲ್ ಅಥವಾ ಡಮ್ಮಿ ಆಕ್ಷನ್ ಪ್ಲಾನ್ ಅನ್ನು ಇಂಡಿಕರಿಸಲು ಕೋರಿದೆ. ಎಂದು ಸಂದೇಶವನ್ನು ಕಳಿಸಿದ್ದಾರೆ.
ಇದನ್ನೂ ಓದಿ; ಯಜಮಾನಿಯರಿಗೆ ಭರ್ಜರಿ ಗುಡ್ ನ್ಯೂಸ್; 2 ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ!; ಸೆಪ್ಟೆಂಬರ್ ತಿಂಗಳ ಹಣದ ಕುರಿತು ಬಿಗ್ ಅಪ್ಡೇಟ್












