ಮಲ್ಲಂದೂರು ಪೊಲೀಸ್ ಠಾಣೆಯ ಸಿಬ್ಬಂದಿಗೆ ಹೊಸ ಪೀಕ್ ಕ್ಯಾಪ್ ವಿತರಣೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಹೆಡ್ ಕಾನ್ಸ್ಟೇಬಲ್ ಹುದ್ದೆಯ ಸಿಬ್ಬಂದಿಗೆ ಹೊಸದಾಗಿ ನೀಡಿರುವ ಪೀಕ್ ಕ್ಯಾಪ್ ಅನ್ನು ನಿನ್ನೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ರಂಗನಾಥ್ ಎನ್ ಅವರು ಸಿಬ್ಬಂದಿಗೆ ವಿತರಣೆ ಮಾಡಿದರು.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಕಾನ್ ಸ್ಟೆಬಲ್ ಹಾಗೂ ಹೆಡ್ ಕಾನ್ ಸ್ಟೆಬಲ್‌ಗಳು ಈ ಹಿಂದೆ ಸ್ಲೋಚ್ ಕ್ಯಾಪ್ ಗಳನ್ನು ಧರಿಸುತ್ತಿದ್ದರು. ಆದರೆ ಈ ಟೋಪಿ ಪ್ರತಿಭಟನೆ ಹಾಗೂ ಇನ್ನಿತರ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ಸಮಸ್ಯೆ ಉಂಟುಮಾಡುತ್ತಿತ್ತು. ಈ ಕಾರಣಕ್ಕೆ ಹೊಸ ಮಾದರಿಯ ಪೀಕ್ ಕ್ಯಾಪ್ ಗಳನ್ನು ರಾಜ್ಯ ಸರಕಾರ ಹಸ್ತಾಂತರಿಸಿತ್ತು. ಬೆಂಗಳೂರು ಸಹಿತ ಇತರ ಭಾಗದಲ್ಲಿ ಈಗಾಗಲೇ ಎಲ್ಲರಿಗೂ ವಿತರಣೆ ಕಾರ್ಯ ನಡೆದಿದೆ. ಇದೀಗ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ವಿತರಣೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಠಾಣೆಯ ಪೊಲೀಸ್ ಪಿಎಸ್‌ಐ ರಂಗನಾಥ್, ಎಎಸ್‌ಐ ಪ್ರಕಾಶ್, ಸಿಬ್ಬಂದಿಗಳಾದ ಶರತ್ ಮತ್ತು ಅಭಿಷೇಕ್ ಉಪಸ್ಥಿತರಿದ್ದು, ಹೊಸ ಪೀಕ್ ಕ್ಯಾಪ್‌ನ್ನು ಧರಿಸುವ ಮೂಲಕ ಇಲಾಖೆಯ ಶಿಸ್ತಿನ ಪರಂಪರೆಯನ್ನು ಮತ್ತಷ್ಟು ಬಲಪಡಿಸಿದರು.

ಪೀಕ್ ಕ್ಯಾಪ್ ವಿತರನೆ ಮಾಡಿದ ಬಳಿಕ ಮಾತನಾಡಿ ಪಿಎಸ್‌ಐ ರಂಗನಾಥ್ ಎನ್. ಅವರು, ಪೊಲೀಸ್ ವೇಷಭೂಷಣವು ಇಲಾಖೆಯ ಗೌರವ, ಶಿಸ್ತು ಹಾಗೂ ಗುರುತಿನ ಪ್ರತೀಕವಾಗಿದ್ದು, ಕರ್ತವ್ಯ ನಿರ್ವಹಣೆಯಲ್ಲಿ ಹೆಚ್ಚಿನ ಹೊಣೆಗಾರಿಕೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ ಎಂದರು.

ಇದನ್ನೂ ಓದಿ: ಡ್ರೋನ್ ಪೈಲಟ್ ಆಗಲು ಇಲ್ಲಿದೆ ಸುವರ್ಣಾವಕಾಶ: ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಉಚಿತ ಡ್ರೋನ್ ಪೈಲಟ್ ತರಬೇತಿ

ನಾಲ್ಕೂರಮ್ಮ ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮ:

ನಿನ್ನೆ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ನಾಲ್ಕೂರಮ್ಮ ಸರ್ಕಾರಿ ಪ್ರೌಢ ಶಾಲೆಯ ಅವತಿ ಗ್ರಾಮಕ್ಕೆ ಮಲ್ಲಂದೂರು ಪೊಲೀಸ್ ಠಾಣಾಧಿಕಾರಿ ರಂಗನಾಥ್ ಎನ್. ರವರು ಭೇಟಿ ನೀಡಿ ಮಕ್ಕಳಿಗೆ ಕಾನೂನು ಅರಿವು ಮೂಡಿಸಲಾಯಿತು.

ಇದರ ಜೊತೆಗೆ ಮಕ್ಕಳ ಸಹಾಯವಾಣಿ, ಸೈಬರ್ ಅಪರಾಧ ಮತ್ತು 112 ಸಹಾಯವಾಣಿಯ ಕುರಿತು ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಶಾಲಾ ಮಕ್ಕಳಿಗೆ ತಿಳುವಳಿಕೆ ನೀಡಿದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.