ಸೆಪ್ಟೆಂಬರ್ 21 ರಿಂದ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ನಡೆಯಲಿದ್ದು, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಅದ್ದೂರಿ ನವರಾತ್ರಿ ಉತ್ಸವಕ್ಕೆ ಸಜ್ಜಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಶೋಗೆ ಫೈನಲ್ ಆದ 18 ಸ್ಪರ್ಧಿಗಳು ಇವರೇ?

ವಿವಿಧ ಅಲಂಕಾರದಲ್ಲಿ ಕಂಗೊಳಿಸಲಿರುವ ತಾಯಿ ಶಾರದೆಯ ಈ ಅದ್ದೂರಿ ಶರನ್ನವರಾತ್ರಿಯಲ್ಲಿ ಸೇವೆಯನ್ನು ಮಾಡಿಸುವವರು, ಸೇವಾ ಕೌಂಟರ್ ನಲ್ಲಿ ಚೀಟಿಯನ್ನ ಪಡೆಯಬಹುದಾಗಿದೆ. ಸೇವಾ ಡಿಟೈಲ್ಸ್ ಈ ಕೆಳಗೆ ನೀಡಲಾಗಿದೆ.
* ದಿನಾಂಕ:29.09.2025 ಸೋಮವಾರದಂದು ಶ್ರೀ ಶಾರದಾ ಶರನ್ನವರಾತ್ರಿ ಪ್ರಯುಕ್ತ ಶ್ರೀ ಮಠದಲ್ಲಿ ಸರಸ್ವತಿ ಮಹಾಯಾಗ ನಡೆಯಲಿದ್ದು. ಈ ಪ್ರಯುಕ್ತ ಸರಸ್ವತಿ ಹೋಮದ ಕಾಣಿಕೆ ರೂ. 1000.00 ಈ ಸೇವೆಯನ್ನು ಮಾಡಿಸುವವರು ದಿ:28.09.2025ರೊಳಗೆ ರಶೀದಿ ಪಡೆಯಬೇಕು.
ಇದನ್ನೂ ಓದಿ: ಅರಣ್ಯ ಭೂಮಿ ಒತ್ತುವರಿ ತೆರವಿಗೆ SIT ರಚಿಸಿ ಆದೇಶ
* ದಿನಾಂಕ:01.10.2025 ಬುಧವಾರದಂದು ಶ್ರೀ ಶಾರದಾ ಶರನ್ನವರಾತ್ರಿ ಪ್ರಯುಕ್ತ ಶತಚಂಡಿಹೋಮ ನಡೆಯಲಿದ್ದು. ಈ ಪ್ರಯುಕ್ತ ಶತಚಂಡಿ
ಹೋಮದ ಕಾಣಿಕೆ ರೂ. 500.00 ಈ ಸೇವೆಯನ್ನು ಮಾಡಿಸುವವರು ದಿ:30.09.2025ರೊಳಗೆ ರಶೀದಿ ಪಡೆಯಬೇಕು.
* ದಿನಾಂಕ:30.09.2025 ಮಂಗಳವಾರದಂದು ಶ್ರೀ ಶಾರದಾ ಶರನ್ನವರಾತ್ರಿ ಪ್ರಯುಕ್ತ ಹರಾವರಿ ಶ್ರೀ ದುರ್ಗಾಂಬ ಸನ್ನಿಧಿಯಲ್ಲಿ ನವಚಂಡಿಹೋಮ ನಡೆಯಲಿದ್ದು. ಈ ಕೆಳಕಂಡ ಸೇವೆಯನ್ನು ಮಾಡಿಸುವವರು ದಿ:29.09.2025ರೊಳಗೆ ರಶೀದಿ ಪಡೆಯಬೇಕು.
1. ನವಚಂಡಿ ಹೋಮದ ಕಾಣಿಕೆ ರೂ. 500.00.
2. ವಿಶೇಷ ಪೂಜೆ ಮತ್ತು ನವಚಂಡಿ ಹೋಮದ ಕಾಣಿಕೆ ರೂ. 3000.00
ಇದನ್ನೂ ಓದಿ: 10th ಪಾಸ್ ಆದವರಿಗೆ ಜಾಬ್ ಆಫರ್; 23.000 ಸಂಬಳ
* ದಿನಾಂಕ:26.09.2025 ಶುಕ್ರವಾರದಂದು ಶ್ರೀ ಶಾರದಾ ಶರನ್ನವರಾತ್ರಿ ಪ್ರಯುಕ್ತ ಶ್ರೀ ಕಾಳಿಕಾಂಬ ಅಮ್ಮನವರ ಸನ್ನಿಧಿಯಲ್ಲಿ ನವಚಂಡಿಹೋಮ
ನಡೆಯಲಿದ್ದು. ಈ ಪ್ರಯುಕ್ತ ನವಚಂಡಿ ಹೋಮದ ಕಾಣಿಕೆ ರೂ. 500.00 ಈ ಸೇವೆಯನ್ನು ಮಾಡಿಸುವವರು ದಿ: 25.09.2025ರೊಳಗೆ ರಶೀದಿ ಪಡೆಯಬೇಕು.












