ಮೂಡಿಗೆರೆ: ಪ್ರತ್ಯೇಕ ಅಕ್ರಮವಾಗಿ ಶ್ರೀಗಂಧ ಹಾಗೂ ಸಾಗುವಾನಿ ಮರ ಸಾಗಾಟ | ಐವರ ಬಂಧನ

ಮೂಡಿಗೆರೆ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ ರಾತ್ರಿ ನಡೆಸಿದ ದಾಳಿಯಲ್ಲಿ ಅಕ್ರಮ ಶ್ರೀಗಂಧ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ.


ಇದನ್ನೂ ಓದಿ: ವಿಂಡೋಸ್ 10 ಬಗ್ಗೆ ಡೊಡ್ಡ ಘೋಷಣೆ; ಏನದು..?


ಮೂಡಿಗೆರೆ ಶಾಖೆ ವ್ಯಾಪ್ತಿಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಸುಜುಕಿ ಕಂಪನಿಯ ಮೋಟಾರ್ ಬೈಕ್ (ನಂ: KA-18-ED-5486) ನಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಯೂಸೂಫ್ ಮತ್ತು ಮನ್ಸೂರ್ ಎಂದು ಗುರುತಿಸಲಾಗಿದೆ.

ಶ್ರೀಗಂಧದ ತುಂಡುಗಳು ಹಾಗೂ ಬೈಕ್‌ನ್ನು ಅಧಿಕಾರಿಗಳು ಸರ್ಕಾರದ ಪರವಾಗಿ ಜಪ್ತಿ ಮಾಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಕ್ರಮ ಸಾಗುವಾನಿ ಮರದ ತುಂಡುಗಳ ಸಾಗಾಟ; ಆರೋಪಿಗಳ ಬಂಧನ:
ಕೊಟ್ಟಿಗೆಹಾರ: ಮಲೆನಾಡಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕತ್ತರಿಸಿ ಸಾಗಿಸುತ್ತಿದ್ದ ಕಳ್ಳರ ಮೇಲೆ ಅರಣ್ಯ ಇಲಾಖೆಯ ಮಿಂಚಿನ ಕಾರ್ಯಾಚರಣೆ ನಡೆದಿದೆ.


ಇದನ್ನೂ ಓದಿ: ಉಚಿತ ಎಲ್‌ಪಿಜಿ ಸಂಪರ್ಕ | ಅರ್ಜಿ ಸಲ್ಲಿಕೆ ಹೇಗೆ?


ಮೂಡಿಗೆರೆ ಪ್ರಾದೇಶಿಕ ಅರಣ್ಯ ವಲಯದ ಭಾರತಿಬೈಲು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಶ್ರೀ ಸುಹಾಸ್ ಅವರ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಖಚಿತ ಮಾಹಿತಿ ಆಧರಿಸಿ ನಡೆಸಿದ ದಾಳಿಯಲ್ಲಿ, ಮಾರುತಿ ಓಮ್ಮಿ ವಾಹನವನ್ನು ಬೆನ್ನಟ್ಟಿ ತಡೆದು ಪರಿಶೀಲನೆ ನಡೆಸಲಾಗಿದ್ದು, ಅದರಲ್ಲಿ ಅಕ್ರಮವಾಗಿ ಕತ್ತರಿಸಲಾದ 05 ಸಾಗುವಾನಿ ತುಂಡುಗಳು ಪತ್ತೆಯಾದವು.

ಸದ್ಯದ ವಾಹನ ಹಾಗೂ ಸಾಗುವಾನಿ ದಿಮ್ಮಿಗಳನ್ನು ಸರ್ಕಾರದ ಪರವಾಗಿ ಜಪ್ತಿ ಮಾಡಲಾಗಿದ್ದು, ಕೆ.ಸಿ. ಸತೀಶ್ (38), ಸುಧೀರ್ ಕೆ.ಎಸ್. (28), ಅಜನ್ ಎಚ್.ಎಸ್. (26) ಮೂರು ಮಂದಿ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸುಹಾಸ್ ಅವರೊಂದಿಗೆ ಅರಣ್ಯ ರಕ್ಷಕರಾದ ಲಕ್ಷ್ಮಣ, ಗಿರೀಶ್ ಮತ್ತು ಸುಧೀರ್ ಶ್ರಮಿಸಿ, ಯಶಸ್ವಿ ಕಾರ್ಯಾಚರಣೆಗೆ ಕಾರಣರಾದರು. ಕಾರ್ಯಾಚರಣೆಯ ದಕ್ಷತೆಯನ್ನು ಪರಿಗಣಿಸಿ, ಅರಣ್ಯ ಇಲಾಖೆಯ ವತಿಯಿಂದ ಸುಹಾಸ್ ಹಾಗೂ ಅವರ ತಂಡಕ್ಕೆ ಉತ್ತೇಜನಕಾರಿ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.


ಇದನ್ನೂ ಓದಿ: ಯುಪಿಐನಲ್ಲಿ ಬರಲಿದೆ ಹೊಸ ಫೀಚರ್; ಯಾವುದು ಈ ಫೀಚರ್‌, ಇಲ್ಲಿದೆ ನೋಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.