ಬಾಳೆಹೊನ್ನೂರು: ಅಕ್ರಮವಾಗಿ ಸಾಗುವಾನಿ ಮರಗಳ ಕಡಿತಲೆ | ಆರೋಪಿಗಳ ಬಂಧನ

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯ ದೇವದಾನ ಮೀಸಲು ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ನಾಲ್ಕು ಸಾಗುವಾನಿ ಮರ ಕಡಿತಲೆ ಮಾಡಿ ನಾಟಾ ಸಂಗ್ರಹ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ.

 

ಇದನ್ನೂ ಓದಿ; ಕರ್ನಾಟಕದ ಕೆಲವು ಭಾಗದಲ್ಲಿ ಭಾರಿ ಮಳೆ ಸಾಧ್ಯತೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ದೇವದಾನ ಎಸ್ಟೇಟ್ ನ ಸೂಪರ್ ವೈಸರ್ ಎ.ಎ.ಇಲಿಯಾಸ್ ಹಾಗೂ ರೈಟರ್ ಸಿ.ಜೆ.ರಿನೋ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ದೇವದಾನ ಮೀಸಲು ಅರಣ್ಯದ ಸರ್ವೇ ನಂಬರ್ 343ರಲ್ಲಿ ನಾಲ್ಕು ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ, 31 ಸೈಜ್ ನಾಟಾವನ್ನು ತಯಾರಿಸಿ, 14 ರೌಂಡ್ ಲಾಗ್ ಗಳನ್ನು ಮಾಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಮೀಸಲು ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿರುವುದು ಕಂಡುಬಂದಿದ್ದು, ಇದರ ಜಾಡು ಹಿಡಿದು ಹೋದಾಗ ಸ್ಥಳೀಯ ಎಸ್ಟೇಟ್ ನಲ್ಲಿ ಸೂಪರ್ ವೈಸರ್, ರೈಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇಲಿಯಾಸ್, ರಿನೋ ಅವರು ಮರವನ್ನು ಕಡಿತಲೆ ಮಾಡಿರುವ ಮಾಹಿತಿ ಲಭ್ಯವಾಗಿದೆ.

 

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-17.10.2023

ಆರೋಪಿಗಳು ಕಡಿತಲೆ ಮಾಡಿರುವ ಮರದಲ್ಲಿ ತಯಾರಿಸಿದ್ದ 31 ಸೈಜ್ ನಾಟಾವನ್ನು ತಮ್ಮ ಮನೆಯಲ್ಲಿ ಉಳಿದ ರೌಂಡ್ ಲಾಗ್ ಗಳನ್ನು ಅರಣ್ಯ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದರು. ಆರೋಪಿಗಳಿಂದ 2.381 ಕ್ಯೂಬಿಕ್ ಮೀಟರ್ ಸಾಗುವಾನಿ ಮರದ ನಾಟಾ, ತುಂಡುಗಳನ್ನು ಹಾಗೂ ಮರ ಕೊಯ್ಯಲು ಬಳಸಿದ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ. ಕಡಿತಲೆ ಮಾಡಿರುವ ಸಾಗುವಾನಿ ಮರಗಳ ಮೌಲ್ಯ 4 ಲಕ್ಷ ರೂ.ಗೂ ಅಧಿಕವಾಗಿದೆ. ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಆರ್.ಎಫ್.ಓ ಎಂ. ಸಂದೀಪ್ ತಿಳಿಸಿದ್ದಾರೆ.

 

ಇದನ್ನೂ ಓದಿ; ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ- 17.10.2023

ಎಸಿಎಫ್ ಚೇತನ್ ಮಂಗಲ್ ಗಸ್ತಿ ಮಾರ್ಗದರ್ಶನದಲ್ಲಿ ಸಂಗಮೇಶ್ವರಪೇಟೆ ಡಿಆರ್‌ಎಫ್‌ಓ ಮಂಜುನಾಥ್, ಸಿಬ್ಬಂದಿಗಳಾದ ಹನುಮಂತ ಲೋನಿ, ಕಾರ್ತಿಕ್, ಚಾಲಕ ಪ್ರಕಾಶ್ ಭಾಗವಹಿಸಿದ್ದರು.

 

ಚಿಕ್ಕಮಗಳೂರು: ವಿಷ ಸೇವಿಸಿ ಅನುಮಾನಾಸ್ಪದ ವ್ಯಕ್ತಿ ಸಾವು

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ವಿಷ ಸೇವಿಸಿ ಅನುಮಾನಾಸ್ಪದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ.

ಮೂಡಿಗೆರೆಯ ಗಂಗನ ಮಕ್ಕಿಯ ಪೆಟ್ರೋಲ್ ಬಂಕ್ ಸಮೀಪ ವಿಷ ಸೇವಿಸಿ ಅನುಮಾನಾಸ್ಪದ ವ್ಯಕ್ತಿ ಸಾವನ್ನಪ್ಪಿದ್ದು, ಆತನ ಶವ ಮೂಡಿಗೆರೆ ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.

ಇನ್ನು ಈತನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.