ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ನಲ್ಲಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿರುವ, ಉರಗಗಳನ್ನು ಸಂರಕ್ಷಣೆಯ ಕಾರ್ಯದಲ್ಲಿ ತಲ್ಲೀನರಾಗಿರುವ ಬಣಕಲ್ ನಿವಾಸಿ ಮಹಮ್ಮದ್ ಆರೀಫ್ ಅವರಿಗೆ ಸಮಾಜಮುಖಿ ಸೇವಾ ಸಂಘ ಹಾಗೂ ಕರ್ನಾಟಕ ಶ್ರೀನಿಧಿ ಪೌಂಡೇಶನ್ ವತಿಯಿಂದ ಕರುನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ; SSLC ಪಾಸ್ ಆದವರಿಗೆ ಗುಡ್ ನ್ಯೂಸ್; SSC GD ಕಾನ್ಸ್ ಟೇಬಲ್ ಗೆ ಅರ್ಜಿ ಆಹ್ವಾನ

ದಾರವಾಡದ ರಂಗಾಯಣ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆರೀಫ್ ಅವರಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬಣಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಅಪಘಾತ, ಹಾವುಗಳ ರಕ್ಷಣೆ, ಅನಾಥ ಕೊಳೆತ ಶವ ದೊರೆತರೆ ಪ್ರತಿಯೊಬ್ಬರಿಗೂ ನೆನಪಾಗುವುದು ಬಣಕಲ್ ನಿವಾಸಿ ಸಮಾಜ ಸೇವಕ ಆರೀಫ್.
ವಸತಿ ಪ್ರದೇಶಗಳಲ್ಲಿ ಬರುವ ವಿಷಕಾರಿ ಹಾವುಗಳನ್ನು ಹಿಡಿದು ಸುರಕ್ಷಿತ ಅರಣ್ಯಕ್ಕೆ ಬಿಡುವುದು ಇವರ ನಿತ್ಯದ ಕಾಯಕ. ಅದರಲ್ಲೂ ಚಾರ್ಮಾಡಿ ಘಾಟ್ ನಲ್ಲಿ ಕೊಳೆತ ಶವ ದೊರೆತರೆ ಎದೆಗುಂದದೆ ಸಾಗಿ ಪ್ರಪಾತಗಳಲ್ಲೋ, ಕಂದಕಗಳಲ್ಲಿ ಸಾಗಿ ಅದನ್ನು ಎತ್ತಿ ತಂದು ಪೊಲೀಸರಿಗೆ ನೆರವಾಗುವ ವ್ಯಕ್ತಿ ಎಂದರೆ ಅದು ಮಹಮ್ಮದ್ ಆರೀಫ್.
ಇನ್ನು ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಸಕಾಲಕ್ಕೆ ತನ್ನ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದ ಉದಾಹರಣೆಗಳೇ ಹಲವು. ಅನಾಥ ವ್ಯಕ್ತಿಗಳನ್ನು ಸ್ವಚ್ಛಗೊಳಿಸಿ ಅನಾಥಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆಯುವ ಅನೇಕ ಕಾರ್ಯಗಳನ್ನು ಸಮಾಜ ಸೇವಕ ಕೆ.ಎಚ್.ಮಹಮ್ಮದ್ ಆರೀಫ್ ಮಾಡಿದ್ದಾರೆ. ಇದೆಲ್ಲವನ್ನೂ ಮಾಡಿರುವ ಅವರಿಗೆ ಜನರ ಪ್ರೀತಿ, ಅಪಾರ ವಿಶ್ವಾಸ ದೊರೆತಿದೆ.
ಕನ್ನಡದ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಆರೀಫ್ ಅವರನ್ನು ಗುರುತಿಸಿ ದಾರವಾಡದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜ ಮುಖಿ ಸೇವಾ ಸಂಘ ಹಾಗೂ ಕರ್ನಾಟಕ ಶ್ರೀನಿಧಿ ಪೌಂಡೇಶನ್ ವತಿಯಿಂದ ಇವರ ಸೇವೆಗೆ ಮನ್ನಣೆ ನೀಡಿ ಕರುನಾಡ ರತ್ನ ಪ್ರಶಸ್ತಿ ಇವರಿಗೆ ದಕ್ಕಿದೆ. ಇಂತಹ ಸಮಾಜ ಸೇವಕ ಆರೀಫ್ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಚಿಕ್ಕಮಗಳೂರು: ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸಾವು
ಮೃತ ಅಭಿಷೇಕ್ ಗೆ ಮೂರು ಎಕರೆ ಅಡಿಕೆ ತೋಟವಿದ್ದು, ಅದೇ ತೋಟದಲ್ಲಿ ತೆಂಗಿನ ಮರಗಳು ಕೂಡ ಇದ್ದವು. ನ.26ರ ಭಾನುವಾರ ಸಂಜೆ ತೋಟದಲ್ಲಿ ತೆಂಗಿನಕಾಯಿ ಕೀಳಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ತೋಟದಲ್ಲಿ ಒಂದು ಮರದಿಂದ ಮತ್ತೊಂದು ತೆಂಗಿನ ಮರದ ಬಳಿ ಹೋಗುವಾಗ ಅಲ್ಯುಮಿನಿಯಂ ಏಣಿ ಎತ್ತಿಕೊಂಡು ಹೋಗುವಾಗ ಪ್ರೈಮರಿ ಲೈನ್ (11 ಸಾವಿರ ಕಿಲೋವ್ಯಾಟ್) ವಿದ್ಯುತ್ ತಂತಿಗೆ ಏಣಿ ತಗುಲಿ ಸಾವನ್ನಪ್ಪಿದ್ದಾನೆ. ವಿದ್ಯುತ್ ಶಾಕ್ ನಿಂದ ತೋಟದಲ್ಲೇ ಬಿದ್ದಿದ್ದ ಅಭಿಷೇಕ್ ನನ್ನು ಕೂಡಲೇ ಕಡೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಕೂಡ ತೀವ್ರವಾದ ವಿದ್ಯುತ್ ಶಾಕ್ ನಿಂದ ಅಭಿಷೇಕ್ ಅಸುನೀಗಿದ್ದಾನೆ.
ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












