
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಾಫಿ ಬೆಳೆಗಾರರು, ಸಮಾಜ ಸೇವಕರು, ಉದ್ದಿಮೆದಾರರು, ಕಾಂಗ್ರೆಸ್ ಮುಖಂಡರು ಆದಂತಹ ಕುಂದೂರಿನ ಶ್ರೀ ನಾರ್ಭಟ್ ಸಾಲ್ದಾನ ನಿಧನ ಹೊಂದಿದ್ದಾರೆ.

ಇಂದು (ಶನಿವಾರ) ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಹೃದಯಾಘಾತವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ರವಾನಿಸುವ ದಾರಿ ಮಧ್ಯ ನಿಧನ ಹೊಂದಿದ್ದಾರೆ.

ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ
ನಾರ್ಬಾಟ್ ಸಾಲ್ದಾನ ಅವರು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಕಾಫಿ ಬೆಳೆಗಾರರಲ್ಲಿ ಒಬ್ಬರಾಗಿದ್ದರು. ರಾಜಕೀಯವಾಗಿ ಅವರು ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಮೂಡಿಗೆರೆ ಬೆಳೆಗಾರರ ಸಂಘದ ನಿರ್ದೇಶಕರಾಗಿದ್ದರು. ಕೊಡುಗೈ ದಾನಿಗಳಾಗಿದ್ದ ನಾರ್ಬಾಟ್ ಸಾಲ್ದಾನ ಬಣಕಲ್ ನಝರತ್ ಶಾಲೆಗೆ ಭೂಮಿ ದಾನ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳಿಗೆ, ಸಾಮಾಜಿಕ ಕಾರ್ಯಗಳಿಗೆ ಉದಾರವಾಗಿ ದಾನವನ್ನು ನೀಡಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಶೃಂಗೇರಿ: ರಾಜ್ಯ ಸರ್ಕಾರಿ ನೌಕರರ ಸಂಘದ 2024 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕು ಘಟಕದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಸಂಘ 2024 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಬುಧವಾರ ತಾಲ್ಲೂಕು ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಶೃಂಗೇರಿ ತಾಲ್ಲೂಕು ತಹಸೀಲ್ದಾರ್ ಗೌರಮ್ಮ, ನೌಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ನಾಯ್ಕ್ ಎಸ್, ಸಂಘದ ಕಾರ್ಯದರ್ಶಿ ಶಶಿಧರ್, ರಾಜ್ಯ ಪರಿಷತ್ ಸದಸ್ಯರಾದ ರವೀಂದ್ರ MB, ಖಜಾಂಚಿ ಸೋಮಯ್ಯ, ಉಪಾಧ್ಯಕ್ಷರಾದ ಅಬ್ದುಲ್ ಖಾದರ್, ವೆಂಕಟೇಶ್ BM, ಯಮನಪ್ಪ ತಳವಾರ್ ಹಾಗೂ ನಿರ್ದೇಶಕರಾದ ಅಶ್ವಿನಿ,ADLR ನಂದೀಶ್, ಶಿಕ್ಷಣ ಇಲಾಖೆಯ ಬಸವರಾಜ್, ಕೊಪ್ಪ ವಿಭಾಗದ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಂದೀಶ್ CL, ತಾಲ್ಲೂಕು ವೈದ್ಯಾಧಿಕಾರಿಗಳಾದ ಆಡಿ ದಯಾನಂದ್, ವಲಯ ಅರಣ್ಯಧಿಕಾರಿಗಳಾದ ಅನಿಲ್ ಡಿಸೋಜಾ, ಜೂನಿಯರ್ ಕಾಲೇಜ್ ನ ಪ್ರಚಾರ್ಯರಾದ ಅರುಣ್ ಕುಮಾರ್ ಹಾಗೂ ತಾಲ್ಲೂಕು ಪಂಚಾಯ್ತಿಯ ಸಹಾಯಕ ನಿರ್ದೇಶಕರಾದ ಸುದೀಪ್ ಹಾಗೂ ತಾಲ್ಲೂಕಿನ ಎಲ್ಲಾ ಇಲಾಖೆಯ ನೌಕರರು ಇದ್ದರು.













