ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ಸಂಗಮವಾಗುವ ಹೇಮಾವತಿ ನದಿಯಲ್ಲಿ ನೀರಿನ ಅಂಶ ಕ್ಷೀಣಿಸಿದ್ದು, ಜನರಿಗೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗಲಿದೆ. ಇದರ ನಡುವೆ ಬತ್ತಿದ ನೀರಲ್ಲಿ ಬಣಕಲ್ ಸಮೀಪದ ಹೇಮಾವತಿ ನದಿಯಲ್ಲಿ ವಾಹನ ಸವಾರರು ಸಾಲುಗಟ್ಟಿ ತಮ್ಮ ವಾಹನಗಳನ್ನು ತೊಳೆಯುತ್ತಿರುವುದರಿಂದ ನೀರು ಕಲುಷಿತಗೊಂಡು ಜಲಚರಗಳು, ಜೀವ ಸಂಕುಲ ಕೂಡ ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿ; ಮಹಿಳೆಯರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷಗಳ ಸಾಲ!;ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಹೇಮಾವತಿ ನದಿಯಲ್ಲಿ ವಾಹನ ತೊಳೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಆ ದಾರಿಯಲ್ಲಿ ಸೂಚನಾಫಲಕ ಹಾಕಲಾಗುವುದು. ಜನರಿಗೆ ವಾಹನಗಳು ನದಿಗೆ ತೆರಳದಂತೆ ಕ್ರಮ ಕೈಗೊಳ್ಳಲಾಗುವುದು. – ಅತಿಕಾಭಾನು, ಬಣಕಲ್ ಗ್ರಾ.ಪಂ ಅಧ್ಯಕ್ಷೆ
ಪ್ರತಿನಿತ್ಯ ಕಾಫಿನಾಡಲ್ಲಿ ಹೇಮಾವತಿ ನದಿ ಬತ್ತುವ ಹಂತಕ್ಕೂ ತಲುಪಿದ್ದರಿಂದ ಮುಂದೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಇದರ ಮಧ್ಯೆ ವಾಹನ ಸವಾರರ ಹುಚ್ಚಾಟದಿಂದ ಜನರಿಗೆ ರೋಗಗಳಿಗೂ ಆಹ್ವಾನ ನೀಡಿದಂತಾಗಿದೆ. ವರ್ಷ ಕಳೆದಂತೆ ಮಲೆನಾಡಿನ ತಾಪಮಾನ ವಿಪರೀತ ಎನ್ನುವಂತೆ 28 ರಿಂದ 32 ಡಿಗ್ರಿಗೆ ಏರಿದೆ.
ಇದನ್ನೂ ಓದಿ; ಈ ಯೋಜನೆ ಅಡಿಯಲ್ಲಿ ಸಿಗಲಿದೆ 25,000 ಸಹಾಯಧನ!;ಯಾವ ಯೋಜನೆ, ಪ್ರಯೋಜನ ಪಡೆಯುವುದು ಹೇಗೆ?
ಬಣಕಲ್ ಹೇಮಾವತಿ ನದಿಯಲ್ಲಿ ವಾಹನ ತೊಳೆಯುತ್ತಿರುವ ಬಗ್ಗೆ ದೂರು ಬಂದಿದ್ದು ಈಗಾಗಲೇ ಕೆಲವು ವಾಹನಗಳಿಗೆ ಕೇಸು ದಾಖಲಿಸಲಾಗಿದೆ. ನಿಯಮ ಮೀರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ಕೌಶಿಕ್ , ಪಿ.ಎಸ್.ಐ, ಬಣಕಲ್ (ವರದಿ- ತನು ಕೊಟ್ಟಿಗೆಹಾರ)
ಮೂಡಿಗೆರೆ: ಎದುರಿನ ವಾಹನಕ್ಕೆ ರಸ್ತೆ ಬಿಟ್ಟುಕೊಡಲು ಸಾಧ್ಯವಾಗದೇ ಹಳ್ಳಕ್ಕೆ ಬಿದ್ದ ಕಾರು
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಿರಿದಾದ ಸೇತುವೆಯಲ್ಲಿ ಎದುರಿನಿಂದ ಬಂದ ವಾಹನಕ್ಕೆ ರಸ್ತೆಬಿಟ್ಟುಕೊಡಲು ಸಾಧ್ಯವಾಗದೇ ಕಾರೊಂದು ಹಳ್ಳಕ್ಕೆ ಮಗುಚಿ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ-ಗೆಂಡೇಹಳ್ಳಿ ರಸ್ತೆಯ ಕನ್ನಾಪುರ ಸಮೀಪದ ಬೊಮ್ಮೇನಹಳ್ಳಿ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ; ಯಾವುದೇ ಗ್ಯಾರಂಟಿ ಬೇಕಿಲ್ಲ!; ಕೇಂದ್ರ ಸರ್ಕಾರದಿಂದಲೇ ಸಿಗುತ್ತೆ 2 ಲಕ್ಷ ಲೋನ್; ಹೇಗೆ? ಇಲ್ಲಿದೆ ಡಿಟೈಲ್ಸ್
ಅಧಿಕಾರಿಗಳ ನಿರ್ಲಕ್ಷ್ಯ, ಗ್ರಾಮಸ್ಥರ ಆಕ್ರೋಶ:
ಬೊಮ್ಮೇನಹಳ್ಳಿ ಸಮೀಪ ಹರಿಯುತ್ತಿರುವ ಹಳ್ಳಕ್ಕೆ ನಿರ್ಮಾಣ ಮಾಡಿರುವ ಸೇತುವೆ ಬಹಳ ಕಿರಿದಾಗಿದ್ದು, ವಾಹನಗಳು ಏಕಾಏಕಿ ಎದುರಾದಾಗ ಪರಸ್ಪರ ರಸ್ತೆ ಬಿಟ್ಟುಕೊಡಲು ಸಾಧ್ಯವಾಗುತ್ತಿಲ್ಲ. ಸೇತುವೆ ತುಂಬಾ ಕಿರಿದಾಗಿದ್ದು, ಸೇತುವೆಗೆ ಯಾವುದೇ ತಡೆಗೋಡೆಯನ್ನು ಕೂಡ ನಿರ್ಮಾಣ ಮಾಡಿಲ್ಲ. ಏಕಕಾಲದಲ್ಲಿ ಎರಡು ವಾಹನಗಳು ಎದುರಾದಾಗ ಅಪಘಾತಗಳು ಸಂಭವಿಸಿವೆ. ಇತ್ತೀಚೆಗೆ ಈ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ಈ ಸೇತುವೆ ಈಗಿನ ವಾಹನ ದಟ್ಟಣೆಗೆ ಸೂಕ್ತವಾಗಿಲ್ಲ. ಮಳೆಗಾಲದಲ್ಲಿ ಹೊಳೆಯ ನೀರು ಸೇತುವೆಯ ಮೇಲೆಯೇ ಉಕ್ಕಿ ಹರಿಯುತ್ತದೆ. ಜೊತೆಗೆ ಈ ಸೇತುವೆ ತಿರುವಿನಲ್ಲಿ ಇರುವುದರಿಂದ ಎದುರಿನಿಂದ ಬರುವ ವಾಹನಗಳ ಸೂಚನೆಯೂ ತಿಳಿಯುವುದಿಲ್ಲ. ಹಾಗಾಗಿ ಈ ಸೇತುವೆಯನ್ನು ಅಗಲೀಕರಣಗೊಳಿಸಿ ತಡೆಗೋಡೆ ಸಹಿತ ಉತ್ತಮ ಸೇತುವೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಲೇ ಬರುತ್ತಿದ್ದಾರೆ. ಆದರೆ, ಇದರ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿಲ್ಲ. ಈ ಸೇತುವೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ಸ್ಥಳೀಯ ಶಾಸಕರು ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ; ಈ ಯೋಜನೆಯಡಿ ಪ್ರತಿ ತಿಂಗಳು 3000 ಹಣ; ಕೂಡಲೇ ಈ ಕೆಲಸ ಮಾಡಿ












