ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಲೋಕ ಸಭಾ ಚುನಾವಣೆ ಹಿನ್ನೆಲೆ ಮಾಜಿ ಶಾಸಕ ಸಿ. ಟಿ ರವಿ ರಹಸ್ಯವಾಗಿ ಶೃಂಗೇರಿಗೆ ಭೇಟಿ ನೀಡಿದ್ದು ದೇವಸ್ಥಾನದಲ್ಲಿ ಹೋಮ ಮಾಡಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ; ಮಹಿಳೆಯರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷಗಳ ಸಾಲ!;ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ರಹಸ್ಯ ಭೇಟಿ ನೀಡಿದ ಸಿ.ಟಿ ರವಿ:
ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿರುವ ಸಿ. ಟಿ ರವಿ ತಾಯಿ ಶಾರದೆಯ ಮೊರೆ ಹೋಗಿದ್ದು, ಚಂಡಿಕಾ ಹೋಮ ಮಾಡಿಸುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ಇಲ್ಲಿಂದ ಮಂಗಳೂರು ತೆರಳಿ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ; ಈ ಯೋಜನೆ ಅಡಿಯಲ್ಲಿ ಸಿಗಲಿದೆ 25,000 ಸಹಾಯಧನ!;ಯಾವ ಯೋಜನೆ, ಪ್ರಯೋಜನ ಪಡೆಯುವುದು ಹೇಗೆ?
ನಾಳೆ ದೆಹಲಿಯಲ್ಲಿ ನಡೆಯಲಿರುವ ಪಕ್ಷದ ಮಹತ್ವದ ಮೀಟಿಂಗ್ ನಲ್ಲಿ ಸಿ. ಟಿ ರವಿ ಭಾಗಿಯಾಗಲಿದ್ದಾರೆ. ಇದರಲ್ಲಿ ಟಿಕೆಟ್ ಕುರಿತಂತೆ ಚರ್ಚೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಸಿ. ಟಿ ರವಿ ದೆಹಲಿ ಹೋಗುವ ಹಿನ್ನಲೆ ಶೃಂಗೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಸಿಟಿ ರವಿ ದೇವಸ್ಥಾನಕ್ಕೆ ಭೇಟಿ ನೀಡುವ ಸಂದರ್ಭ ಕೇವಲ ಪಕ್ಷದ ಒಂದಿಬ್ಬರು ಮುಖಂಡರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಒಟ್ಟಾರೆ ಸಿ. ಟಿ ರವಿ ರಹಸ್ಯ ಭೇಟಿ ರಾಜಕೀಯ ವಲಯದಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.
ಶೋಭಾ ಕರಂದ್ಲಾಜೆಗೆ ಸಿ. ಟಿ ರವಿ ಟಾಂಗ್
ಉಡುಪಿ-ಚಿಕ್ಕಮಗಳೂರು ಲೋಕಸಭಾ ಟಿಕೆಕ್ ಗಾಗಿ ಶೋಭಾ ಕರಂದ್ಲಾಜೆ ವರ್ಸಸ್ ಸಿ. ಟಿ ರವಿ ಮಧ್ಯೆ ಫೈಟ್ ನಡೆಯುತ್ತಿದ್ದು, ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿ. ಟಿ ರವಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಸೇರಿ ಶೋಭಾ ಕರಂದ್ಲಾಜೆ ಸೋಲಿಸಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ದ್ರೋಹ ಮಾಡಿದರೆ ಅವರವರ ಕರ್ಮ ಅವರ ಬೆನ್ನು ಹಿಡಿದು ಕಾಡುತ್ತದೆ. ನಾನು ಇನ್ನೊಬ್ಬರ ಕಡೆ ಬೊಟ್ಟು ಮಾಡಿ ತೋರಿಸಲು ಹೋಗುವುದಿಲ್ಲ, ಅವರ ಕರ್ಮವನ್ನು ಅವರೇ ಅನುಭವಿಸಬೇಕು. ನನ್ನ ತಪ್ಪಿನಿಂದ ಸೋತಿದ್ದೇನೆಂದು ಈಗಾಗಲೇ ಹೇಳಿಕೊಂಡಿದ್ದೇನೆ. ಯಾರಾದರೂ ಪಕ್ಷದ್ರೋಹ ಕೆಲಸ ಮಾಡಿದ್ದರೆ ಅವರ ಕರ್ಮ ಅವರ ಬೆನ್ನು ಹಿಡಿದು ಕಾಡುತ್ತದೆ ಎಂದು ಮಾಜಿ ಸಚಿವ ಸಿ. ಟಿ ರವಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಮೂಡಿಗೆರೆ: ಎದುರಿನ ವಾಹನಕ್ಕೆ ರಸ್ತೆ ಬಿಟ್ಟುಕೊಡಲು ಸಾಧ್ಯವಾಗದೇ ಹಳ್ಳಕ್ಕೆ ಬಿದ್ದ ಕಾರು
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಿರಿದಾದ ಸೇತುವೆಯಲ್ಲಿ ಎದುರಿನಿಂದ ಬಂದ ವಾಹನಕ್ಕೆ ರಸ್ತೆಬಿಟ್ಟುಕೊಡಲು ಸಾಧ್ಯವಾಗದೇ ಕಾರೊಂದು ಹಳ್ಳಕ್ಕೆ ಮಗುಚಿ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ-ಗೆಂಡೇಹಳ್ಳಿ ರಸ್ತೆಯ ಕನ್ನಾಪುರ ಸಮೀಪದ ಬೊಮ್ಮೇನಹಳ್ಳಿ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ; ಯಾವುದೇ ಗ್ಯಾರಂಟಿ ಬೇಕಿಲ್ಲ!; ಕೇಂದ್ರ ಸರ್ಕಾರದಿಂದಲೇ ಸಿಗುತ್ತೆ 2 ಲಕ್ಷ ಲೋನ್; ಹೇಗೆ? ಇಲ್ಲಿದೆ ಡಿಟೈಲ್ಸ್
ಅಧಿಕಾರಿಗಳ ನಿರ್ಲಕ್ಷ್ಯ, ಗ್ರಾಮಸ್ಥರ ಆಕ್ರೋಶ:
ಬೊಮ್ಮೇನಹಳ್ಳಿ ಸಮೀಪ ಹರಿಯುತ್ತಿರುವ ಹಳ್ಳಕ್ಕೆ ನಿರ್ಮಾಣ ಮಾಡಿರುವ ಸೇತುವೆ ಬಹಳ ಕಿರಿದಾಗಿದ್ದು, ವಾಹನಗಳು ಏಕಾಏಕಿ ಎದುರಾದಾಗ ಪರಸ್ಪರ ರಸ್ತೆ ಬಿಟ್ಟುಕೊಡಲು ಸಾಧ್ಯವಾಗುತ್ತಿಲ್ಲ. ಸೇತುವೆ ತುಂಬಾ ಕಿರಿದಾಗಿದ್ದು, ಸೇತುವೆಗೆ ಯಾವುದೇ ತಡೆಗೋಡೆಯನ್ನು ಕೂಡ ನಿರ್ಮಾಣ ಮಾಡಿಲ್ಲ. ಏಕಕಾಲದಲ್ಲಿ ಎರಡು ವಾಹನಗಳು ಎದುರಾದಾಗ ಅಪಘಾತಗಳು ಸಂಭವಿಸಿವೆ. ಇತ್ತೀಚೆಗೆ ಈ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ಈ ಸೇತುವೆ ಈಗಿನ ವಾಹನ ದಟ್ಟಣೆಗೆ ಸೂಕ್ತವಾಗಿಲ್ಲ. ಮಳೆಗಾಲದಲ್ಲಿ ಹೊಳೆಯ ನೀರು ಸೇತುವೆಯ ಮೇಲೆಯೇ ಉಕ್ಕಿ ಹರಿಯುತ್ತದೆ. ಜೊತೆಗೆ ಈ ಸೇತುವೆ ತಿರುವಿನಲ್ಲಿ ಇರುವುದರಿಂದ ಎದುರಿನಿಂದ ಬರುವ ವಾಹನಗಳ ಸೂಚನೆಯೂ ತಿಳಿಯುವುದಿಲ್ಲ. ಹಾಗಾಗಿ ಈ ಸೇತುವೆಯನ್ನು ಅಗಲೀಕರಣಗೊಳಿಸಿ ತಡೆಗೋಡೆ ಸಹಿತ ಉತ್ತಮ ಸೇತುವೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಲೇ ಬರುತ್ತಿದ್ದಾರೆ. ಆದರೆ, ಇದರ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿಲ್ಲ. ಈ ಸೇತುವೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ಸ್ಥಳೀಯ ಶಾಸಕರು ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ; ಈ ಯೋಜನೆಯಡಿ ಪ್ರತಿ ತಿಂಗಳು 3000 ಹಣ; ಕೂಡಲೇ ಈ ಕೆಲಸ ಮಾಡಿ












