ಮೂಡಿಗೆರೆ: ಹೇಮಾವತಿ ನದಿಗೆ ಮೀನಿನ ತ್ಯಾಜ್ಯ ಸುರಿಯುತ್ತಿರುವ ವ್ಯಾಪಾರಿಗಳು

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೀನು ಮಾರಾಟಗಾರರು ಹಾಗೂ ಗೂಡ್ಸ್ ವಾಹನಗಳು ಹೇಮಾವತಿ ನದಿ ನೀರಿಗೆ ತ್ಯಾಜ್ಯಗಳನ್ನು ಸುರಿಯುತ್ತಿದ್ದು, ಇದರ ವಿರುದ್ಧ ಮೂಡಿಗೆರೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೇಮಾವತಿ ನದಿ ದಡದಲ್ಲಿ ಈ ಘಟನೆ ನಡೆದಿದೆ. ನದಿಗೆ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ಹೇಮಾವತಿ ನದಿ ನೀರಿಗೆ ಸಾಂಕ್ರಾಮಿಕ ರೋಗದ ಭೀತಿ ಸೃಷ್ಟಿಯಾಗಿದೆ.

ಮಂಗಳೂರಿನಿಂದ ಮಾರಾಟಕ್ಕೆಂದು ಮೀನು ತಂದು ಉಳಿದ ಮೀನನ್ನು ವ್ಯಾಪಾರಿಗಳು ನದಿಗೆ ಹಾಕುತ್ತಿದ್ದಾರೆ. ಅಲ್ಲದೇ ಕ್ಲೀನ್ ಮಾಡಿದ ಮೀನಿನ ವೇಸ್ಟನ್ನೂ ನದಿಗೆ ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಣಕಲ್, ಹೇಮಾವತಿ ನದಿ ತಟದಲ್ಲಿ ರಾಶಿ-ರಾಶಿ ಮೀನಿನ ತ್ಯಾಜ್ಯಗಳು ಪತ್ತೆಯಾಗಿವೆ. ವ್ಯಾಪಾರದ ಬಳಿಕ ಮೀನಿನ ತ್ಯಾಜ್ಯ ತಂದು ಹೇಮಾವತಿ ನದಿಗೆ ಸುರಿದು ಗಾಡಿ ತೊಳೆದುಕೊಂಡು ಗೂಡ್ಸ್ ವಾಹನಗಳು ತೆರಳುತ್ತಿವೆ. ಹೀಗೆ ನಿತ್ಯ ಹೇಮಾವತಿ ನದಿ ದಡಕ್ಕೆ ಹತ್ತಾರು ವಾಹನಗಳು ಬಂದು ಹೋಗುತ್ತವೆ.


ಇದನ್ನೂ ಓದಿ: 9 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್; ತಿಂಗಳಿಗೆ ಸಿಗಲಿದೆ 1,000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಹೇಮಾವತಿ ನದಿ ನೀರು ಗೊರೂರು ಡ್ಯಾಂ ಸೇರಿ ಕೆ.ಆರ್.ಎಸ್ ಮೂಲಕ ಬೆಂಗಳೂರು ತಲುಪುತ್ತೆ. ಹಾಸನ ಜಿಲ್ಲೆಯ ಜೀವನಾಡಿಯೇ ಹೇಮಾವತಿ ನದಿಯಾಗಿದೆ. ಮೂಡಿಗೆರೆ ತಾಲೂಕಿನ ನೂರಾರು ಹಳ್ಳಿ, ಸಾವಿರಾರು ಎಕರೆ ಜಮೀನಿಗೆ ಇದೇ ನೀರು ಆಶ್ರಯವಾಗಿದೆ. ಈ ನೀರನ್ನ ಬಳಸಿದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಅನ್ನೋದು ಸ್ಥಳೀಯರ ವಾದವಾಗಿದೆ. ಗೂಡ್ಸ್ ವಾಹನಗಳು, ಮೀನು ಮಾರಾಟಗಾರರ ಮೇಲೆ ಮೂಡಿಗೆರೆ ಜನರು ಕಿಡಿಕಾರುತ್ತಿದ್ದು, ನದಿಯನ್ನು ಕಲುಷಿತಗೊಳಿಸದಂತೆ ಗೂಡ್ಸ್ ವಾಹನಗಳ ಮಾಲೀಕರು, ಚಾಲಕರು ಹಾಗೂ ಮೀನು ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಕಡೂರು: ಸರ್ಕಾರಿ ಕಚೇರಿ ಸೇರಿದಂತೆ ವಿವಿಧೆಡೆ ಪ್ರಿಂಟರ್ ಕಳವು: ಆರೋಪಿ ಬಂಧನ

ಕಡೂರು: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ 3 ಪ್ರಿಂಟರ್ ಕಳವು ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಿವಿಧೆಡೆ ಕಳವು ಮಾಡಿದ್ದ ಪ್ರಿಂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ತುಮಕೂರು, ಹಾಸನ, ಮಂಡ್ಯ ಸೇರಿದಂತೆ ಚಿಕ್ಕಮಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಸರ್ಕಾರಿ ಕಚೇರಿ, ಮೆಸ್ಕಾಂ ಮತ್ತು ಬೆಸ್ಕಾಂ ಕಛೇರಿ, ನ್ಯಾಯಾಲಯ ಮತ್ತು ಕಾಲೇಜುಗಳಿಂದ ಪ್ರಿಂಟರ್ ಗಳನ್ನು ಕಳವು ಮಾಡಿದ್ದು, ಸುಮಾರು 6.22 ಲಕ್ಷ ಬೆಲೆಯ 79 ಪ್ರಿಂಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ತಂಡದಲ್ಲಿ ಸಿಪಿಐ ಕಡೂರು ದುರುಗಪ್ಪ ಕೆ, ಪಿ.ಎಸ್.ಐ ನವೀನ್ ಎನ್. ಪಿ ಮತ್ತು ಪವನ್ ಕುಮಾರ್ ಸಿ . ಸಿ, ಸಿಬ್ಬಂದಿಗಳಾದ ಮಂಜುನಾಥಸ್ವಾಮಿ, ಕುಚೇಲ, ಸ್ವಾಮಿ, ದೇವರಾಜ್, ಬೀರೇಶ, ಮಧು, ಹರೀಶ, ಮಹಮ್ಮದ್ ರಿಯಾಜ್, ಈಶ್ವರಪ್ಪ, ಕಿಶೋರ್, ರವಿ ಕುಮಾರ್, ಧನಪಾಲನನಾಯ್ಕ ಮತ್ತು ಜಯಮ್ಮ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.