BJP -BSP- Congress ಸ್ಥಳೀಯ ಮೈತ್ರಿ: ಗ್ರಾಮ ಪಂಚಾಯತ್ ಅಧ್ಯಕ್ಷ ತಲೆದಂಡ ಆಗಲಿದೀಯಾ?

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ಹೋಬಳಿ ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸಲು ಸಿದ್ಧತೆ ನಡೆದಿದೆ. ಅರ್ಷಿತ್ ಗೌಡ ಒಂದಿಲ್ಲೊಂದು ಅಭಿವೃದ್ಧಿ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ.


ಇದನ್ನೂ ಓದಿ: PUC ಪಾಸ್‌ ಆದ ವಿದ್ಯಾರ್ಥಿಗಳ ಗಮನಕ್ಕೆ; 25,000 ರೂ ಸ್ಕಾಲರ್ಶಿಪ್‌ ಲಭ್ಯ ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಗ್ರಾಮ ಪಂಚಾಯಿತಿಗಳಲ್ಲಿಯ ವಿದ್ಯಮಾನಗಳನ್ನ ಗಮನಿಸಿದಾಗ ರಾಜ್ಯ ರಾಜಕರಣಕ್ಕಿಂತ ಕಮ್ಮಿ ಏನಿಲ್ಲ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದ ಗ್ರಾಮ ಪಂಚಾಯಿತಿ ಮುಂದಿನ ದಿನಗಳಲ್ಲಿ ಇಂತಹ ಬೆಳವಣಿಗೆಯಿಂದಾಗಿ ಅಭಿವೃದ್ಧಿ ತೊಡಕಾಗುವ ಲಕ್ಷಣಗಳು ಕಂಡುಬರುತ್ತಿವೆ.

ತನ್ನದೇ ಆದ ರೀತಿಯ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿರುವ ಅಧ್ಯಕ್ಷರ ಬದಲಾವಣೆ ಆಗಲಿದೆ ಎಂಬ ಸುದ್ದಿ ಈಗ ಎಲ್ಲೆಡೆ ಹರಡಿದೆ. BSP ಯ ಪಕ್ಷದ ಶಿವಪ್ರಸಾದ್ ಮತ್ತು ಕಾಂಗ್ರೆಸ್ ಪಕ್ಷದ B T ಸುನೀತಾ ಚಿಕ್ಕಮಗಳೂರು ಉಪವಿಭಾಗಾಧಿಕಾರಿಗಳಿಗೆ ಅವಿಶ್ವಾಸ ಗೊತ್ತುವಳಿ ಪತ್ರ ಕಳಿಸಿದ್ದಾರೆ. ಪತ್ರದ ಆಧಾರದ ಮೇಲೆ ಫೆಬ್ರವರಿ 17ರಂದು ಬೆಳಿಗ್ಗೆ 11 ಗಂಟೆಗೆ ಪಂಚಾಯತಿ ಕಚೇರಿಯಲ್ಲಿ ವಿಶೇಷ ಸಭೆಯನ್ನು ಕರೆಯಲಾಗಿದೆ.


ಇದನ್ನೂ ಓದಿ: ಇ-ಖಾತೆ ಪಡೆಯುವುದು ಇನ್ನು ಸುಲಭ; ಈ ದಾಖಲೆಯ ಅಗತ್ಯವಿಲ್ಲ


ಬಿಎಸ್ಪಿ – ಕಾಂಗ್ರೆಸ್ ಮಂಡಿಸಲಿರುವ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿಯೂ ಕೈಜೋಡಿಸಲಿದೆ ಎನ್ನುವ ವದಂತಿಯು ಕೇಳಿಬಂದಿದೆ. ಒಂದೊಮ್ಮೆ ಇದು ನಿಜವಾದಲ್ಲಿ ಎಚ್. ಎಮ್. ಆರ್ಷಿತ್ ಗೌಡರ ತಲೆದಂಡ ಆಗುವುದು ಖಚಿತ ಎನ್ನಲಾಗುತ್ತಿದೆ. (ವರದಿ- ತನು ಕೊಟ್ಟಿಗೆಹಾರ)


ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – 30 ಸಾವು; ಕ್ಷಣಾರ್ಧದಲ್ಲಿ ಸ್ಥಳಕ್ಕೆ ತಲುಪಿದ ಸೇನೆ, ಪೊಲೀಸ್, ಹಾಗೂ ವೈದ್ಯರ ತಂಡ ; ತಪ್ಪಿದ ಮಹಾ ದುರಂತ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.