ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಒತ್ತುವರಿ ತೆರವನ್ನು ವಿರೋಧಿಸಿ ಮಲೆನಾಡು-ಕರಾವಳಿ ಜನಪರ ಒಕ್ಕೂಟದಿಂದ ಇದೇ ಸೆಪ್ಟೆಂಬರ್ 01 ಕ್ಕೆ ಮಹತ್ವದ ಸಭೆ ಕರೆದಿದೆ.
ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಭರ್ಜರಿ ಸುದ್ದಿ; ಅನ್ನಭಾಗ್ಯ ಯೋಜನೆಯ ಹಣದ ಬದಲಿಗೆ ದಿನಸಿ ಕಿಟ್ ವಿತರಣೆ

ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಾಹಾಭಗವತ್ಪಾಂದಗಳವರ ಸಲಹೆ, ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ, ಅರಣ್ಯ ಒತ್ತುವರಿ ತೆರವಿನಿಂದ ಮಲೆನಾಡಿಗರ ಬದುಕು ಮುಂದೇನು, ಕಾನೂನಾತ್ಮಕ ಪರಿಹಾರಗಳೇನು ಎಂಬುದರ ಕುರಿತು ಮಲೆನಾಡಿಗರ ಮಹತ್ವದ ಸಭೆಯನ್ನು ಬಾಳೆಹೊನ್ನೂರಿನ ರಂಭಾಪುರಿ ಮಠದ ಶ್ರೀ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಸೆಪ್ಟೆಂಬರ್ 01 ಭಾನುವಾರದಂದು ಕರೆಯಲಾಗಿದ್ದು, ವಿಶೇಷ ಆಹ್ವಾನಿತರಾಗಿ ನ್ಯಾಯವಾದಿಗಳು ಹಾಗೂ ಜನಪರ ಹೋರಾಟಗಾರರಾದ ರವೀಂದ್ರನಾಥ್ ನಾಯಕ್ ಆಗಮಿಸಲಿದ್ದರೆ ಎಂದು ಮಲೆನಾಡು ಕರಾವಳಿ ಒಕ್ಕೂಟದ ಪ್ರಧಾನ ಸಂಚಾಲಕರಾದ ಅನಿಲ್ ಹೊಸಕೊಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಈ ಕಂಪನಿಯಲ್ಲಿ 1 ಲಕ್ಷ ಹೂಡಿಕೆ ಮಾಡಿದವರಿಗೆ 35 ಲಕ್ಷ ರೂ ರಿಟರ್ನ್!; ಶೇ. 3,380 ರಷ್ಟು ಲಾಭ ಕೊಟ್ಟ ಈ ಶೇರ್ ಯಾವ ಕಂಪನಿಯದ್ದು…?












