ಮೋಸ್ಟ್ ವಾಂಟೆಡ್ ನಕ್ಸಲ್ ಸಂತೋಷ್ ನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ: ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!; ಶೇ.90 ರಂತೆ ಸಹಾಯಧನ

ತಮಿಳುನಾಡಿನ ಹೊಸೂರು ಧರ್ಮಪುರಿಯಲ್ಲಿ ಕೇರಳದ ಎಟಿಎಸ್ನಿಂದ ಮೋಸ್ಟ್ ವಾಂಟೆಡ್ ನಕ್ಸಲ್ ಸಂತೋಷ್ (ಪೊಲ್ಲಾಚಿ) ನನ್ನು ಬಂಧಿಸಲಾಗಿದ್ದು, ನಿಷೇಧಿತ ಕಮ್ಯುನಿಸ್ಟ್ ಪಾರ್ಟಿಯಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (People’s Liberation Guerrilla Army (PLGA) ಗೆ ಸೇರಿದವನಾಗಿದ್ದಾನೆ. ಮಾಹಿತಿಯ ಪ್ರಕಾರ ಈತ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ. ಸದ್ಯ ನಕ್ಸಲ್ ಸಂತೋಷ್ ನನ್ನು ನಿನ್ನೆ ರಾತ್ರಿ ತಮಿಳುನಾಡು ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಇಂಧನ ಸಚಿವ ಕೊಟ್ರು ಸಿಹಿಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಕರ್ನಾಟಕದಲ್ಲಿ ನಕ್ಸಲ್ ಮುಕ್ತ ರಾಜ್ಯ!:
ಮುಂಡಗಾರು ಲತಾ, ಕುತ್ಲೂರು ಸುಂದರಿ, ಬಾಳೆಹೊಳೆ ವನಜಾಕ್ಷಿ, ಮಾರೆಪ್ಪ ಅರೋಲಿ, ಕೆ. ವಸಂತ, ಟಿ.ಎನ್. ಜೀಶ್ ಜನವರಿ 08 ಬುಧವಾರ ದಂದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು. ಹಾಗೆಯೇ ಕೋಟೆಗೊಂಡ ರವೀಂದ್ರ ಕೂಡ ಮುಖ್ಯ ವಾಹಿನಿಗೆ ಬಂದಿದ್ದರು. ಇದರೊಂದಿಗೆ ಕರ್ನಾಟಕದಲ್ಲಿ ಎರಡೂವರೆ ದಶಕದಿಂದ ಬೇರುಬಿಟ್ಟಿದ್ದ ನಕ್ಸಲ್ ಚಟುವಟಿಕೆ ತೆರೆ ಬಿದ್ದಿದೆ.
ಇದನ್ನೂ ಓದಿ: ಕಾಫಿ ಬೀಜ ಇದೀಗ ಚಿನ್ನಕ್ಕೆ ಸಮ; ಒಂದು ಕಪ್ ಕಾಫಿ ಇನ್ನು ಬಲು ದುಬಾರಿ!












