ಮೂಡಿಗೆರೆ: ಕಾಣೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣೆ ವ್ಯಾಪ್ತಿಯ ಜಿ.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಸೃಷ್ಟಿ (19) ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ.

 

ಇದನ್ನೂ ಓದಿ; ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಗೆ ಹೊಸ ರೂಪ; 5 ಲಕ್ಷ ರೂಪಾಯಿಯ ಹೆಲ್ತ್ ಕಾರ್ಡ್ ಬೇಕು ಅಂದ್ರೆ ಏನ್ ಮಾಡ್ಬೇಕು?;ಹೆಲ್ತ್ ಕಾರ್ಡ್ ಈ ದಾಖಲೆಗಳು ಕಡ್ಡಾಯ

ಹಾಸನದ ವುಮೆನ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ, ಹಾಸ್ಟೆಲ್ ನಿಂದ ಕಾಲೇಜಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ ವಾರ ಮನೆಗೆ ಬಂದಿದ್ದು, ಡಿಸೆಂಬರ್ 21 ರ ಗುರುವಾರ ಸಂಜೆ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದಳು. ಸೃಷ್ಟಿಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಲಾಗಿತ್ತು ಆದರೆ ಪತ್ತೆಯಾಗಿರಲಿಲ್ಲ.

ಇದನ್ನೂ ಓದಿ; ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ ನಲ್ಲಿ ಉದ್ಯೋಗಾವಕಾಶ; 1603 ತರಬೇತುದಾರರ ನೇಮಕ; ಐಟಿಐ, ಡಿಪ್ಲೊಮ, ಪದವಿ ಪಾಸಾದವರಿಗೆ ಅಪ್ರೆಂಟಿಸ್‌ ಹುದ್ದೆ

ಇಂದು (ಭಾನುವಾರ) ಮುಂಜಾನೆ ಗ್ರಾಮದ ಕುಡಿಯುವ ನೀರಿನ ಮೋಟರ್ ಅಳವಡಿಸಿರುವ ಬಾವಿಯಲ್ಲಿ ಯುವತಿಯ ಶವ ತೇಲುತ್ತಿರುವುದನ್ನು ವಾಟರ್ ಮ್ಯಾನ್ ಗಮನಿಸಿ ಮಾಹಿತಿ ನೀಡಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ದೂರು ದಾಖಲಾಗಿದ್ದು ಶವವನ್ನು ಮೇಲೆತ್ತಲು ತಯಾರಿ ನಡೆಸಲಾಗಿದೆ.

 

ಇದನ್ನೂ ಓದಿ; ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವುದು ಹೇಗೆ?; ಆಯ್ಕೆ ಪ್ರಕ್ರಿಯೆ, ಶೈಕ್ಷಣಿಕ ಅರ್ಹತೆ, ವೇತನ ಕುರಿತು ಮಾಹಿತಿ ಇಲ್ಲಿದೆ

ಇನ್ನು ಸೃಷ್ಟಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

 

ಚಿಕ್ಕಮಗಳೂರು: ಹರಿಹರಪುರ ಶ್ರೀಗಳ ಸಾನಿಧ್ಯದಲ್ಲಿ ಷೋಡಶೋಪಚಾರ ಪೂಜೆ, ಕುಂಕುಮಾರ್ಚನೆ ಕಾರ್ಯಕ್ರಮ

ಚಿಕ್ಕಮಗಳೂರು:  (ನ್ಯೂಸ್ ಮಲ್ನಾಡ್ ವರದಿ) ದಾಸ ಸಾಹಿತ್ಯ ಭಜನಾ ಮಂಡಳಿ ಚಿಕ್ಕಮಗಳೂರು ಇವರಿಂದ, ಶ್ರೀ ಕನಕದಾಸರ ಜಯಂತಿ ಪ್ರಯುಕ್ತ ಸಂಸ್ಕರಣೆ ಕಾರ್ಯಕ್ರಮವನ್ನು ಹರಿಹರಪುರದ ಪೀಠಾಧೀಶ್ವರರಾದ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಅವರ ಸಾನಿಧ್ಯದಲ್ಲಿ, ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಷೋಡಶೋಪಚಾರ ಪೂಜೆ, ಹಾಗೂ ಮಹಿಳೆಯರಿಂದ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಗಾಯತ್ರಿದೇವಿ ಕಲ್ಯಾಣ ಮಂಟಪ ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ; ಗೃಹಲಕ್ಷ್ಮೀ ಯೋಜನೆ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದಿಂದಲೇ ಕ್ಯಾಂಪ್!; ಎಲ್ಲಿ? ಯಾವಾಗ? ಗೃಹಲಕ್ಷ್ಮೀ ಯೋಜನೆಯ ಸಮಸ್ಯೆಗೆ ಕ್ಯಾಂಪ್

ಪೂಜೆ ಹಾಗೂ ಕುಂಕುಮಾರ್ಚನೆಯ ನಂತರ ಮಾತನಾಡಿದ ಶ್ರೀಗಳು, ಸಮಾಜದಲ್ಲಿ ಜಾತಿ ಬೇಧವನ್ನು ತೊಲಗಿಸಿ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅನುಸರಿಸುವ ಮೂಲಕ ಸಾವಿರಾರು ವರ್ಷಗಳ ಸನಾತನ ಧರ್ಮವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ತಿಳಿಸಿದರು. ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಮಠಕ್ಕೆ ಸಂಬಂಧಿಸಿದ ಜಾಗದಲ್ಲಿ ಭವ್ಯವಾದ ಶ್ರೀ ಲಕ್ಷ್ಮೀನರಸಿಂಹ ದೇವಾಲಯವನ್ನು ನಿರ್ಮಿಸುವ ಯೋಜನೆಯನ್ನು ತಿಳಿಸಿದರು.

ಇದನ್ನೂ ಓದಿ; sslc ಪಾಸ್ ಆದವರಿಗೆ ಉದ್ಯೋಗಾವಕಾಶ; ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ಸಾವಿರಾರು ಸಂಖ್ಯೆಯಲ್ಲಿ ಆಸ್ತಿಕ ಭಕ್ತ ಮಹಾಶಯರನ್ನು ಸೇರಿಸಿ ಈ ಕಾರ್ಯಕ್ರಮ ರೂಪಿಸಿದ, ದಾಸ ಸಾಹಿತ್ಯ ಭಜನಾ ಮಂಡಳಿಯ ಸಂಚಾಲಕರಾದ ಶ್ರೀ ಉದಯಸಿಂಹ ಮತ್ತು ಅಧ್ಯಕ್ಷರಾದ ಎಂ. ವಿ. ಸುಬ್ಬರಾವ್ ಅವರನ್ನು ಶ್ಲಾಘಿಸಿದರು.

ಇದನ್ನೂ ಓದಿ; ರೈತರೇ ಗಮನಿಸಿ; FID ಮಾಡಿಸಲು ಇಂದು ಕೊನೆಯ ದಿನಾಂಕ; ಎಫ್.ಐ.ಡಿ ಎಲ್ಲಿ ಮಾಡಿಸಬೇಕು, ಯಾವುದೆಲ್ಲಾ ದಾಖಲೆಗಳು ಬೇಕು?

ಇನ್ನು ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಟಿ ರವಿ, ನಗರಸಭಾಧ್ಯಕ್ಷ ವೇಣುಗೋಪಾಲ್ ಇತರರಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.