ಭಯಾನಕ ಭೂ ಕುಸಿತ: ರಸ್ತೆ ಸಮೇತ ಕೊಚ್ಚಿ ಹೋದ ಭೂಮಿ

ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಸಕಲೇಶಪುರದ ಹಾರ್ಲೆ ಎಸ್ಟೇಟ್ ಮೂಲಕ ನಡಹಳ್ಳಿಗಾಗಿ ದೊಡ್ಡತಪ್ಪಲೆ ಬಳಿ ರಾಷ್ಟ್ರೀಯ ಹೆದ್ದಾರಿ ( ಹಾಸನ -ಮಂಗಳೂರು)ಗೆ ಸಂಪರ್ಕ ಕಲ್ಪಿಸುವ ನಡಹಳ್ಳಿ ರಸ್ತೆಯು ಹಾರ್ಲೆ ಎಸ್ಟೇಟ್ ನ ಬಳಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದೆ.


ಇದನ್ನೂ ಓದಿ: 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್


ರಸ್ತೆ ಕುಸಿದು ಸುಮಾರು 500 ಅಡಿಗಳವರೆಗೂ ಮಣ್ಣು ಕೊಚ್ಚಿ ಹೋಗಿರುವುದಲ್ಲದೆ ಎಸ್ಟೇಟ್ ನ ಒಳಗಿರುವ ಕೆರೆ ಕಟ್ಟೆ ಸಹ ಒಡೆದು ಹೋಗಿದೆ.

ಈ ಮಣ್ಣು ಕುಸಿತ ಆಗಿರುವ ಸ್ಥಳದ ಪಕ್ಕದಲ್ಲೇ ಎತ್ತಿನ ಹೊಳೆ ಪೈಪ್ ಲೈನ್ ಹಾದು ಹೋಗಿದ್ದು ಅದೇ ಕಾರಣದಿಂದ ಭೂಮಿ ಸಡಿಲಗೊಂಡು ಭೂ ಕುಸಿತ ಸಂಭವಿಸಿದೆ ಎಂಬುದು ಸ್ಥಳೀಯರ ಅಭಿಪ್ರಾಯ.


ಇದನ್ನೂ ಓದಿ: ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ


ಮತ್ತೊಂದೆಡೆ ಹೈವೇ ಸಹ ಕುಸಿದು ನಿನ್ನೆ ಸಂಚಾರ ಅಸ್ತವ್ಯಸ್ತವಾಗಿತ್ತು. ಸಕಲೇಶಪುರ ಕಡೆಯಿಂದ ಹೈವೇಗೆ ಸಂಪರ್ಕ ಕಲ್ಪಿಸುವ ಬದಲಿ ರಸ್ತೆಯು ದೊಡ್ಡ ಪ್ರಮಾಣದಲ್ಲಿ ಕುಸಿದಿದೆ.


ಇದನ್ನೂ ಓದಿ: ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.