ಜಯಪುರ: ಧರೆ ಕುಸಿತದ ಭೀತಿಯಲ್ಲಿದ್ದ 8 ಕುಟುಂಬಗಳಿಗೆ ಇಂದು ನಿವೇಶನಕ್ಕಾಗಿ ಜಾಗಗಳನ್ನು ಹಂಚಲಾಯಿತು.
ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ; ಆದೇಶದ ಪ್ರತಿ ಇಲ್ಲಿದೆ ನೋಡಿ

“ಸುಮಾರು ನಾಲ್ಕು ವರ್ಷದಿಂದ ಮಳೆಗೆ ಮನೆ ಹಾನಿಯಾದವರ ಪರವಾಗಿ ಗ್ರಾಮ ಪಂಚಾಯತಿಯ ಸದ್ಯಸರುಗಳ ನಿರಂತರ ಹೋರಾಟದ ಫಲವಾಗಿ ಇಂದು ನಿವೇಶನಗಳಿಗೆ ಜಾಗ ಹಂಚಿಕೆಯಾಗುತ್ತಿರುವುದು ತೃಪ್ತಿ ತಂದಿದೆ”.– ಕೀರ್ತಿ ಸುಂದರರಾಜ್, ಗುಡ್ಡೆತೋಟ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ.
ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿಯಲ್ಲಿ ನಿವೇಶನಗಳಿಗೆ ಜಾಗ ಹಂಚಿಕೆಗಾಗಿ ಇಂದು ವಿಶೇಷ ಗ್ರಾಮಸಭೆಯನ್ನು ಗ್ರಾಮ ಪಂಚಾಯತಿ ಸಂಭಾಗಣದಲ್ಲಿ ನಡೆಸಿ, ಗುಡ್ಡೆತೋಟ ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿ ಧರೆ ಕುಸಿತದ ಭೀತಿಯಲ್ಲಿದ್ದ 8 ಕುಟುಂಬಗಳಿಗೆ ಗುಡ್ಡೆತೋಟದ 153 ಸರ್ವೆ ನಂ ನಲ್ಲಿ ಮತ್ತು 5 ಕುಟುಂಬಗಳಿಗೆ ಭೈರೆದೇವರು ಗ್ರಾಮದ ಸರ್ವೆ ನಂ 189 ರಲ್ಲಿ ನಿವೇಶನಕ್ಕೆ ಸೂಕ್ತ ಜಾಗ ಹಂಚಿಕೆ ಮಾಡಲಾಯಿತು.
ಇದನ್ನೂ ಓದಿ: ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ;ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಒನ್ ಟೈಮ್ ನೋಂದಣಿ ಕಡ್ಡಾಯ
“ಮಳೆಗೆ ಮನೆ ಎದುರು ಧರೆ ಕುಸಿತಗೊಂಡಿದ್ದರಿಂದ ನಮ್ಮನ್ನು ಸ್ಥಳಾಂತರ ಮಾಡುವ ಪರಿಸ್ಥಿತಿ ಎದುರಾಗಿತ್ತು. ಆದರೆ, ಸೂಕ್ತ ಸ್ಥಳವಿರದೆ ಪರದಾಡುವ ಸ್ಥಿತಿ ನಮ್ಮದಾಗಿತ್ತು. ಈಗ ಭೈರೆದೇವರು ಗ್ರಾಮದ ನಾಯ್ಕನಕಟ್ಟೆಯಲ್ಲಿ ನಿವೇಶನಕ್ಕೆ ಜಾಗ ಮಂಜೂರು ಆಗಿರುವುದರಿಂದ ಸಮಾಧಾನ ಆಗಿದೆ”.– ಕಲಾವತಿ w/o ಗಣೇಶ ಗುಡ್ಡೆತೋಟ (ಸಂತ್ರಸ್ತೆ)
ಈ ಸಂದರ್ಭದಲ್ಲಿ ವಸತಿ ಮಾರ್ಗದರ್ಶಿ ಅಧಿಕಾರಿ ಓಂಕಾರಮೂರ್ತಿ, ಗ್ರಾಮ ಪಂಚಾಯತಿ ಪಿಡಿಓ ಶೋಭಾ ಹೆಚ್ ಎಸ್ ಹಾಗೂ ಗ್ರಾಮ ಪಂಚಾಯತಿ ಸದ್ಯಸರುಗಳು, ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಇದ್ದರು.
ಇದನ್ನೂ ಓದಿ: ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಹೆಚ್ಚುವರಿ ಖರೀದಿ ಕೇಂದ್ರ ಸ್ಥಾಪನೆ; ಹೈಕೋರ್ಟ್ ಆದೇಶ












