ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸ್ಥಳಾಂತರಿಸಿ ಎಂದು ಬಣಕಲ್ ಗ್ರಾಮಸ್ಥ ಮುಖಂಡ ಬಿ. ಎಸ್. ವಿಕ್ರಂ ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಆಸ್ತಿ ಖರೀದಿ, ಮಾರಾಟಗಾರರ ಗಮನಕ್ಕೆ; ಈ ನಿಯಮ ಪಾಲನೆ, ದಾಖಲೆಗಳು ಕಡ್ಡಾಯ!

ವಿದ್ಯುತ್ ಟ್ರಾನ್ಸ್ ಫಾರ್ಮರ್ ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದು ಅದರ ಚೇಂಜ್ ಒವರ್ ಮಾಡುವ ಸಲಾಕೆ ಅನೇಕರಿಗೆ ತಲೆಗೆ ಹೊಡೆದು ಗಾಯಗಳಾಗುತ್ತಿವೆ. ರಸ್ತೆ ವಿಸ್ತರಣೆ ಸಮಯದಲ್ಲಿ ಅದು ಎತ್ತರದಲ್ಲಿ ಇತ್ತು. ಆದರೆ, ರಸ್ತೆ ವಿಸ್ತರಣೆ ನಂತರ ರಸ್ತೆ ಎತ್ತರವಾಗಿರುವುದರಿಂದ ಅನೇಕರಿಗೆ ಇದರಿಂದ ತೊಂದರೆಯಾಗಿದೆ. ಸದಾ ಜನರ ಓಡಾಟದಿಂದ ಈ ಪಾದಚಾರಿ ರಸ್ತೆ ಬಳಕೆಯಾಗುವುದರಿಂದ ಜನರ ಅಡಚಣೆಗೆ ಉಂಟಾಗಿರುವ ಈ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅನ್ನು ಬದಿಗೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥ ಸುರೇಶ್ ಶೆಟ್ಟಿ ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?












