
ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಿಚರ್ಡ್ ಲೋಬೋ ಅವರ ತೋಟಕ್ಕೆ ಕಾಡಾನೆ ನುಗ್ಗಿ ಬೆಳೆ ಹಾನಿ ಮಾಡಿದೆ. ಗುರುವಾರ ರಾತ್ರಿ ಅರಣ್ಯ ಪ್ರದೇಶದಿಂದ ಕಾಡಾನೆ ಬಂದಿದ್ದು, ಬಾಳೆ, ಏಲಕ್ಕಿ, ಕಾಫಿ ಹಾಗೂ ಇನ್ನಿತರ ಬೆಳೆಗಳು ಹಾನಿ ಉಂಟು ಮಾಡಿದ್ದು, ಸಾವಿರಾರು ಬೆಲೆಯ ಬೆಳೆಯನ್ನು ನಾಶ ಮಾಡಿದೆ.


ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 8000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ

ಈ ಭಾಗದಲ್ಲಿ ಕಾಡಾನೆಗಳು ಪದೇ ಪದೇ ದಾಳಿ ನಡೆಸಿ ಹಾನಿಗೊಳಿಸುತ್ತಿರುವುದರಿಂದ, ಬೆಳೆದಿದ್ದ ಬೆಳೆಗೆ ಪರಿಹಾರ ನೀಡಬೇಕು ಎಂದು ರೈತ ರಿಚರ್ಡ್ ಲೋಬೋ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಕಾಡಾನೆಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಸಹ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)



ಇದನ್ನೂ ಓದಿ: 10th ಪಾಸ್ ಆದ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
ಚಿಕ್ಕಮಗಳೂರು: ಬಿಜೆಪಿ ಫಲಾನುಭವಿ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯರಾಗಿ ಪ್ರವೀಣ್ ಖಾಂಡ್ಯ ನೇಮಕ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಕ್ಷದ ಫಲಾನುಭವಿ ಪ್ರಕೋಷ್ಟದ ರಾಜ್ಯ ಸಮಿತಿಯ ಸದಸ್ಯರನ್ನಾಗಿ ಶ್ರೀ ಪ್ರವೀಣ್ ಕುಮಾರ್ (ಖಾಂಡ್ಯ) ಅವರನ್ನು ನಿಯುಕ್ತಿ ಮಾಡಿ ಆದೇಶಿಸಲಾಗಿದೆ.
ಫಲಾನುಭವಿ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಪ್ರಸನ್ನ ನಾಯ್ಕ ಅವರು ಆದೇಶ ಪತ್ರವನ್ನು ಹಸ್ತಾಂತರ ಮಾಡುವ ನೂತನ ಜವಾಬ್ದಾರಿಯನ್ನು ಘೋಷಿಸಿದರು.
ಪ್ರವೀಣ್ ಖಾಂಡ್ಯ ಈ ಹಿಂದೆ ಬಜರಂಗದಳದ ರಾಜ್ಯ ಮಟ್ಟದ ಮುಖಂಡರಾಗಿ ಜವಾಬ್ದಾರಿ ನಿರ್ವಹಿಸಿದ್ದರು, ಕಳೆದ ಎರಡು ಚುನಾವಣೆಯಿಂದ ಬಿಜೆಪಿ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಂಕರ ಭಾರತಿ ಎಂಬ ಗೋಶಾಲೆಯನ್ನು ಸಹ ನಡೆಸುತ್ತಿದ್ದಾರೆ.













