ಆಡಳಿತದಲ್ಲಿ ವಿಫಲವಾದ ಕಾಂಗ್ರೆಸ್ ಕೇಂದ್ರವನ್ನು ದೂರುತ್ತಿದೆ; ಕೋಟ ಶ್ರೀನಿವಾಸ ಪೂಜಾರಿ

ಬಾಳೆಹೊನ್ನೂರು/ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದವನ್ನು ಪಡೆದರು.

 

ಇದನ್ನೂ ಓದಿ; ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಬಿಗ್ ಶಾಕ್; ಇನ್ಮುಂದೆ ಇಂತಹವರಿಗೆ ಇಲ್ಲ ಫ್ರೀ ಕರೆಂಟ್
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜನರು ನನ್ನನ್ನು ಆಯ್ಕೆ ಮಾಡಿದರೆ ಜಿಲ್ಲೆಗೆ ರೈಲ್ವೆ ಯೋಜನೆ ವಿಸ್ತರಣೆ ಸೇರಿದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಂಡು ಪ್ರಚಾರ ಪಡೆಯುವ ದೃಷ್ಟಿಯಿಂದ ಕೆಲವೊಂದು ತಂತ್ರಗಳನ್ನು ಮಾಡುತ್ತಿದೆ. ಅಲ್ಲದೆ ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇದನ್ನೂ ಓದಿ; ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಹಿಂದಿದ್ದಾರೆ ಮಲೆನಾಡಿನ ಇಬ್ಬರು; ಟೋಪಿಯಲ್ಲಿದ್ದ ಕೂದಲಿನಿಂದ ಸಿಕ್ಕಿತು ಮಹತ್ವದ ಸುಳಿವು

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಭಯೋತ್ಪಾದಕರಿಗೆ ರಾಜಧಾನಿ ಯಾವುದು ಎಂದರೆ ಅದು ಕರ್ನಾಟಕ, ಉಗ್ರಗಾಮಿಗಳಿಗೆ ನೆಮ್ಮದಿಯ ತಾಣ ಯಾವುದು ಎಂದರೆ ಅದು ಕರ್ನಾಟಕ ಎಂಬ ಭಾವನೆ ಬಂದಿದೆ. ಕೇಂದ್ರದ ಜೊತೆ ಸಂಘರ್ಷ ವಾತಾವರಣ ನಿರ್ಮಾಣ ಮಾಡಿ ಭಾರತ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದ ರಾಜ್ಯ ಸರ್ಕಾರವಿದ್ದರೆ ಅದು ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಂದು ದೂರಿದರು.

ಇದನ್ನೂ ಓದಿ; ಉಚಿತ ಅಣಬೆ ಬೇಸಾಯ ತರಬೇತಿ ಪಡೆಯಲು ಅರ್ಜಿ ಆಹ್ವಾನ!; ಕೂಡಲೇ ಅರ್ಜಿ ಸಲ್ಲಿಸಿ

ಈ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಎನ್ ಜೀವರಾಜ್, ಮಂಡಲ ಬಿಜೆಪಿ ಅಧ್ಯಕ್ಷ ಎಚ್.ಕೆ ದಿನೇಶ್ ಹೊಸೂರು, ರಾಜ್ಯ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಮಹಾಬಲ ರಾವ್, ಶೃಂಗೇರಿ ಕ್ಷೇತ್ರ ಚುನಾವಣಾ ಸಂಚಾಲಕ ಎಸ್.ಎನ್.ರಾಮಸ್ವಾಮಿ, ರಾಜ್ಯ ಎಸ್‌ಸಿ ಮೋರ್ಚಾ ವಕ್ತಾರ ಶೃಂಗೇರಿ ಶಿವಣ್ಣ, ಹಿಂದುಳಿದ ವರ್ಗದ ಕಾರ್ಯದರ್ಶಿ ರಾಜಪ್ಪ, ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಶೃತಿ, ಪುಣ್ಯಪಾಲ್, ಸತೀಶ್ ಅದ್ದಡ, ಕಿರಣ್ ಮಡಬಳ್ಳಿ, ಮಹಾಂತೇಶ್ ಇದ್ದರು.

IPL ಬೆಟ್ಟಿಂಗ್ ಆಡೋರಿಗೆ ಕವಿತೆ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಿನ್ನೆಯಿಂದ IPL ಪಂದ್ಯಾವಳಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಖಾಕಿ ಫುಲ್ ಅಲರ್ಟ್ ಆಗಿದ್ದು, ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕವಿತೆ ಮೂಲಕ ಡಿಫರೆಂಟ್ ಜಾಗೃತಿ ಮೂಡಿಸಿದೆ.

“ಬೆಟ್ಟಿಂಗ್ ಆಡಿ ಬಿಡ್ಬೇಡ್ರೋ ನಿಮ್ ಊರು, ಸಿಕ್ಕಾಂಕೊಂಡು ಕೆಡಿಸ್ಕೋಬೇಡಿ ನಿಮ್ ಹೆಸರು. ನಮ್ಮ ಕೈಗೆ ಸಿಕ್ರೆ ನಿಮ್ ಜೀವನ ಹುಷಾರು. ಈ ಸಲ ಕಪ್ ನಮ್ದೇ ಎಂಬ ಕೂಗು ಜೋರು. ಸುಮ್ನೆ ಆಟ ಎಂಜಾಯ್ ಮಾಡು ದೇವರು. ಅಭಿಮಾನಕ್ಕೆ ಹೆಸರು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು,” ಎಂದು RCB ಯನ್ನ ಹೊಗಳುತ್ತಲೇ ಬೆಟ್ಟಿಂಗ್ ಚೋರರಿಗೆ ಖಾಕಿ ಬಿಸಿ ಮುಟ್ಟಿಸಿದೆ.

ಇದನ್ನೂ ಓದಿ; ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು!; ಈ ದಾಖಲೆಗಳಿದ್ದರೆ ಸಾಕು…ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

IPL ಬೆಟ್ಟಿಂಗ್ ಕುರಿತು ಪೊಲೀಸರ ಹೊಸ ರೀತಿಯ ಜಾಗೃತಿಗೆ ಜಿಲ್ಲೆಯಾದ್ಯಂತ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.