ಕೊಪ್ಪ ತಾಲ್ಲೂಕು ಕಚೇರಿಯಲ್ಲಿ ಅಂಧಾ ಕಾನೂನು? | ಶೃಂಗೇರಿಯವರಿಗೆ ಕೊಡಲ್ವಂತೆ ಲೈಸೆನ್ಸ್ ।

ಕೊಪ್ಪ ತಾಲ್ಲೂಕು ಏನಾದರೂ ಸಂವಿಧಾನದ ವಿಶೇಷ ಪ್ರಾತಿನಿಧ್ಯ ಪಡೆದಿದೆಯಾ ಎಂಬ ಅನುಮಾನ ಮೂಡುವ ರೀತಿಯ ಕಾರ್ಯವೈಖರಿಯನ್ನು ಕೊಪ್ಪ ತಾಲ್ಲೂಕು ಕಚೇರಿ ಅಧಿಕಾರಿಗಳು ತೋರ್ಪಡಿಸುತ್ತಿದ್ದಾರೆ. ಸಂವಿಧಾನದ ಆಶಯವನ್ನೇ ಗಾಳಿಗೆ ತೂರಿ ಅಧಿಕಾರಿಗಳು ಅಂಧಾ ಕಾನೂನು ಜಾರಿಗೊಳಿಸುತ್ತಿದ್ದಾರ ಎಂಬ ಪ್ರಶ್ನೆ ಮೂಡುವಂತಾಗಿದೆ ಈ ಒಂದು ಬೆಳವಣಿಗೆ

ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ, ಚಿಕ್ಕಮಗಳೂರು ಹಾಗೂ ತೀರ್ಥಹಳ್ಳಿ ಸೇರಿದಂತೆ ಹಲವಾರು ಕಡೆಗಳಲ್ಲಿ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಭಾರತೀಯ ಸಂವಿಧಾನದ ಆರ್ಟಿಕಲ್ 19(1)(g) ರ ಪ್ರಕಾರ ಈ ದೇಶದ ಯಾವುದೇ ಪ್ರಜೆ ದೇಶದ ಯಾವುದೇ ಮೂಲೆಯಲ್ಲಿ ಕಾನೂನಾತ್ಮಕವಾಗಿ ವ್ಯಾಪಾರ ವ್ಯವಹಾರ ಮಾಡುವ ಮೂಲಭೂತ ಹಕ್ಕನ್ನು ಹೊಂದಿದ್ದಾನೆ. ಅದರಂತೆ ಶೃಂಗೇರಿಯಲ್ಲಿ ಕೊಪ್ಪದ ವ್ಯಾಪಾರಸ್ಥರು, ತೀರ್ಥಹಳ್ಳಿಯಲ್ಲಿ ಶೃಂಗೇರಿಯ ಕೆಲವು ವ್ಯಾಪಾರಸ್ಥರು, ಮೂಡಿಗೆರೆಯಲ್ಲಿ ಚಿಕ್ಕಮಗಳೂರಿನ ಕೆಲವು ವ್ಯಾಪಾರಸ್ಥರು ಹೀಗೆ ಹಲವು ಭಾಗಗಳ ವ್ಯಾಪಾರಸ್ಥರು ಹಲವು ಕಡೆಗಳಲ್ಲಿ ಸಮನ್ವಯತೆಯೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದಾರೆ. ಆದರೆ ಕೊಪ್ಪದಲ್ಲಿ ಮಾತ್ರ ಅಘೋಷಿತ ಕಾನೂನು ಜಾರಿಗೆ ಬಂದಿದೆ. ಅದೇನೆಂದರೆ ಸ್ಥಳೀಯರ ಎಲ್ಲ ಅರ್ಜಿಗಳನ್ನು ಜಿಲ್ಲಾಡಳಿತಕ್ಕೆ ವಿಲೇ ಮಾಡಿರುವ ತಾಲ್ಲೂಕು ಆಡಳಿತ ಶೃಂಗೇರಿಯ ಅರ್ಜಿದಾರರೊಬ್ಬರಾದ ಸಚಿನ್ ಎಂಬುವವರ ಅರ್ಜಿಯನ್ನು ಮಾತ್ರ ಉಳಿದ ವ್ಯಾಪಾರಸ್ಥರ ತಕರಾರು ಇದೆ ಎಂಬ ಕಾರಣ ನೀಡಿ ಪೆಂಡಿಂಗ್ ಇರಿಸಲಾಗಿದೆ. ಇದು ಯಾವ ಕಾನೂನಿನ ಅಡಿಯಲ್ಲಿ ತೆಗೆದುಕೊಂಡ ತೀರ್ಮಾನ ಎಂದು ಕೊಪ್ಪದ ತಹಸೀಲ್ದಾರ್ ಲಿಖಿತಾ ಮೋಹನ್ ಅವರೇ ಸ್ಪಷ್ಟಪಡಿಸಬೇಕು.

ಸುಮಾರು 5 ಲಕ್ಷದ ಪಟಾಕಿಗಳನ್ನು ಕೊಂಡುಕೊಂಡು, ಲೈಸೆನ್ಸ್ ಗಾಗಿ ಈಗಾಗಲೇ ಡಿಸಿ ಕಚೇರಿಯಲ್ಲಿ ಚಲನ್ ಕಟ್ಟಿದ್ದರೂ ಕಾನೂನು ಬಾಹಿರವಾಗಿ ಹೀಗೆ ಅನುಮತಿ ಪತ್ರಕ್ಕೆ ತಡೆ ಹಿಡಿದಿರುವುದು ಕೊಪ್ಪ ತಾಲ್ಲೂಕು ಕಚೇರಿಯಲ್ಲಿ ಅಂಧ ದರ್ಭಾರ್ ನಡೆಸಲಾಗುತ್ತಿದೆಯಾ? ಈ ನಷ್ಟಕ್ಕೆ ಹೊಣೆ ಯಾರು ಹಾಗೂ ಇಂತಹ ಸಂಕುಚಿತ ಮನೋಭಾವನೆ ಯಾಕಾಗಿ ಎಂಬ ಪ್ರಶ್ನೆ ಕೇಳಬೇಕಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.