
ಕಡೂರು: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಕುಪ್ಪಾಳು -ಮತಿಘಟ್ಟ ಸಮೀಪದ ಕರಿಯನಹಳ್ಳಿಯಲ್ಲಿ ತೋಟದ ಕಾವಲುಗಾರನಾಗಿದ್ದ ವ್ಯಕ್ತಿಯ ಹತ್ಯೆಯಾಗಿದೆ. ಅರಸೀಕೆರೆ ತಾಲ್ಲೂಕು ಜಾವಗಲ್ ಹೋಬಳಿಯ ತಿರುಪತಿಹಳ್ಳಿಯ ಲಕ್ಷ್ಮಣ (52) ಕೊಲೆಯಾದವರು.
ಕರಿಯನಹಳ್ಳಿಯಲ್ಲಿ ಕಲ್ಲೇಶಪ್ಪ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ನ. 5ರ ರಾತ್ರಿ ಎಂದಿನಂತೆ ತೋಟದ ಮನೆಯಲ್ಲಿದ್ದಾಗ ಅಪರಿಚಿತರು ಲಕ್ಷಣ ಅವರ ತಲೆಗೆ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆಗಾರರನ್ನು ಪತ್ತೆ ಮಾಡಬೇಕೆಂದು ಮೃತನ ಅಣ್ಣನ ಮಗ ಟಿ.ಎಸ್. ರವಿಕುಮಾರ ಕಡೂರು ಠಾಣೆಗೆ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ, ಹೆಚ್ಚುವರು ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ತರೀಕೆರೆ ಡಿವೈಎಸ್ಪಿ ಪರುಶುರಾಮಪ್ಪ, ಕಡೂರು ಇನ್ಸ್ಪೆಕ್ಟರ್ ಮಧುಕುಮಾರ್ ಟಿ.ಎಸ್. ಕಡೂರು ಪಿಎಸ್ಐ ಜಿ.ಆರ್. ಸಜಿತ್ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರು, ವಿಧಿವಿಜ್ಞಾನ ತಜ್ಞರು ತಪಾಸಣೆ ನಡೆಸಿದರು.













