ಚಿಕ್ಕಮಗಳೂರಿನಲ್ಲಿ ದಾವೂದ್ ಇಬ್ರಾಹಿಂ ವೈಭವೀಕರಿಸುವ ಬರಹ ಪತ್ತೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಪ್ರವಾಸಿ ಬಸ್‌ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ಬರಹ ಪತ್ತೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ.

ಕೇರಳಂನಿಂದ ಬಂದಿದ್ದ ಬಸ್‌ನಲ್ಲಿ ದಾವೂದ್ ರೈಸ್ ಆಫ್ ಡಾನ್ ಮತ್ತು ಎಂಪರರ್ ಸ್ಟೈಕ್ಸ್ ಎಗೈನ್ ಎಂಬ ಬರಹಗಳನ್ನು ಅಂಟಿಸಲಾಗಿತ್ತು. ಇದನ್ನು ಗಮನಿಸಿದ ಅವರು ಚಾಲಕ ಮತ್ತು ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು.

ಚಿಕ್ಕಮಗಳೂರು ನಗರದ ಬೋಳ ರಾಮೇಶ್ವರ ದೇವಾಲಯದ ಸಮೀಪ ಬಸ್ ತಡೆದು ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ರೀತಿಯ ಬರಹಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪೊಲೀಸರು ಬಸ್‌ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ಆರು ತಿಂಗಳ ಹಿಂದೆಯೂ ತಮಿಳುನಾಡಿನಿಂದ ಬಂದಿದ್ದ ಪ್ರವಾಸಿ ಬಸ್‌ನಲ್ಲಿ ಇದೇ ರೀತಿಯ ವಿವಾದಾತ್ಮಕ ಬರಹ ಪತ್ತೆಯಾಗಿತ್ತು. ಇದೀಗ ಕೇರಳ ಮೂಲದ ಮತ್ತೊಂದು ಬಸ್‌ನಲ್ಲೂ ಇಂತಹ ಬರಹ ಕಾಣಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪೊಲೀಸ್ ಇಲಾಖೆಯ ಭದ್ರತಾ ವ್ಯವಸ್ಥೆ ಪ್ರಶ್ನಿಸಿದ್ದಾರೆ. ಹತ್ತಾರು ಚೆಕ್‌ಪೋಸ್ಟ್‌ಗಳನ್ನು ದಾಟಿ ಇಂತಹ ಬರಹಗಳನ್ನು ಹೊಂದಿರುವ ಬಸ್ ನಗರಕ್ಕೆ ಹೇಗೆ ಪ್ರವೇಶಿಸಿದೆ ಎಂಬುವುದು ಪ್ರಶ್ನೆಯಾಗಿದೆ. ದೇಶವಿರೋಧಿ ಕೃತ್ಯಗಳನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಯುವ ಮೋರ್ಚಾ ಎಚ್ಚರಿಕೆ ನೀಡಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.