
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಸರಣಿ ಕಳವು ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮೂಲದ ಅಬ್ದುಲ್ ಸತ್ತಾರ್ ಶೇಖ್ (29), ಶಫಿಉಲ್ಲಾ(40) ಬಂಧಿತ ಆರೋಪಿಗಳು.
ಕೂಸುಗೊಳ್ಳಿ ಗ್ರಾಮದಲ್ಲಿಯೂ ಸರಣಿ ಕಳತನಕ್ಕೆ ಪ್ರಯತ್ನ ನಡೆಸಿದ್ದರು. ಈ ಬಗ್ಗೆ ಕೊಪ್ಪ ಹಾಗೂ ಹರಿಹರಪುರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಆರೋಪಿಗಳಿಂದ 40 ಗ್ರಾಂ. ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಬೈಕ್ ಸೇರಿದಂತೆ ₹5.70 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಸಿ.ಟಿ., ಕೊಪ್ಪ ಪೊಲೀಸ್ ಉಪಾಧೀಕ್ಷಕ ತಿಪ್ಪೇಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಭರತ್ ಕುಮಾರ್ ಡಿ.ಆರ್., ಹರಿಹರಪುರ ಸಬ್ ಇನ್ಸ್ಪೆಕ್ಟರ್ ಶ್ರೀಧರ್ ನಾಯ್ಕ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

ಕೊಪ್ಪ ಸಬ್ ಇನ್ಸ್ಪೆಕ್ಟರ್ ಮಧು ಬಿ.ಇ., ಜಯಪುರ ಸಬ್ ಇನ್ಸ್ಪೆಕ್ಟರ್ ರವೀಶ, ಸಿಬ್ಬಂದಿ ನಾಗೇಶಪ್ಪ, ತಿಪ್ಪೇಶ್, ಮಲ್ಲಿಕ್, ಎಲ್ಲೋ, ಅಂಕಿತ್, ಪ್ರಶಾಂತ್, ಯಾಕುಬ್ ತಾಂಬೂಲಿ, ಕೃಷ್ಣನಾಯ್ಕ, ರಮೇಶ, ಪುನೀತ್, ಅಶ್ರಫ್, ಸುಹಾಸ್, ತಾಂತ್ರಿಕ ಸಿಬ್ಬಂದಿ ಅಬ್ದುಲ್ ರಬ್ಬಾನಿ, ನಯಾಜ್ ಅಂಜುಂ ಕಾರ್ಯಾಚರಣೆಯಲ್ಲಿದ್ದರು.













