ಕೊಪ್ಪ:(ನ್ಯೂಸ್ ಮಲ್ನಾಡ್ ವರದಿ) ಕೊಪ್ಪದ ತಾಲ್ಲೂಕು ಕಛೇರಿಯ ಇರುವ ಉಪನೋಂದಣಿ ಕಚೇರಿಯು ಮೇಲ್ಮಹಡಿಯಲ್ಲಿ ಇರುವುದರಿಂದ ಮೆಟ್ಟಿಲು ಹತ್ತಿ ಹೋಗಲು ವಯಸ್ಕರು ಕಷ್ಟಪಡುತ್ತಿರುವುದಾಗಿ ದೂರು ಕೇಳಿಬಂದಿದೆ.
ಈ ಮೊದಲು ಸಬ್ ರಿಜಿಸ್ಟರ್ ಕಚೇರಿ ಪ್ರೈವೇಟ್ ಕಟ್ಟಡದಲ್ಲಿ ಇತ್ತು. ಸರ್ಕಾರಿ ಕಚೇರಿಗಳು ಎಲ್ಲವೂ ಒಂದೇ ಕಡೆ ಇರುವ ಉದ್ದೇಶದಿಂದ ಶ್ರೀಕಂಠಯ್ಯನವರು ಡಿ.ಸಿ ಯಾಗಿದ್ದಾಗ ಅದನ್ನು ತಾಲ್ಲೂಕು ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಆದರೆ ಕೊಪ್ಪದ ಸಬ್ ರಿಜಿಸ್ಟರ್ ಕಚೇರಿ ಮೆಲ್ಮಹಡಿಯಲ್ಲಿ ಇರುವ ಕಾರಣ ವೃದ್ಧರು ಮೆಟ್ಟಿಲು ಹತ್ತಿ ಹೋಗಲು ಪರದಾಡುತ್ತಿದ್ದಾರೆ. ಕಚೇರಿಗೆ ಹೋಗಬೇಕು ಅಂದ್ರೆ ಯಾರಾದರು ಹೊತ್ತುಕೊಂಡು ಹೋಗಿ ಹೊತ್ತುಕೊಂಡೇ ಬರಬೇಕು. ಇಂತಹ ಸ್ಥಿತಿಯಲ್ಲಿ ಅಧಿಕಾರಿಗಳು ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದಾರೆ.
ಕೊಪ್ಪದ ಸಬ್ ರಿಜಿಸ್ಟರ್ ಕಚೇರಿ ನೆಲಮಹಡಿಯಲ್ಲಿ ಮಾಡಿಕೊಡಬೇಕು ಹಾಗೂ ಜಿಲ್ಲಾಧಿಕಾರಿಗಳು ಕೊಪ್ಪಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿನ ಸಮಸ್ಯೆಗಳು ಏನು ಎಂಬುದರ ಬಗ್ಗೆ ಗಮನಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ನವೀನ್ ಕರುವಾನೆ ಒತ್ತಾಯಿಸಿದ್ದಾರೆ.












