ಕಡೂರು: (ನ್ಯೂಸ್ ಮಲ್ನಾಡ್ ವರದಿ) ಹಲವು ಕಡೆ ಬೈಕ್ ಕಳವು ಮಾಡಿದ್ದ ಓರ್ವ ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆಯ ಸಿ.ಪಿ.ಐ ಕಡೂರು ವೃತ್ತ ನೇತೃತ್ವದ ಪೊಲೀಸ್ ತಂಡ ಬಂಧಿಸಿದ್ದಾರೆ. ಕಡೂರು, ತರೀಕೆರೆ, ಬೀರೂರು ಮತ್ತು ಅರಸೀಕೆರೆ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಟ್ಟು 1.38 ಲಕ್ಷ ಬೆಲೆಯ 4 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚಾರಣೆಯಲ್ಲಿ CPI ಕಡೂರು ವೃತ್ತ ದುರುಗಪ್ಪ ಡಿ, PSI ಪವನ್ ಕುಮಾರ್ ಸಿ ಸಿ, PSI ಧನಂಜಯ್ ಎಂ ಆರ್, PSI ನವೀನ್ ಎನ್ ಪಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಧನಪಾಲ್ ನಾಯಕ್, ರಿಯಾಜ್, ಮಧುಕುಮಾರ್, ಹರೀಶ್, ಸ್ವಾಮಿ ಮತ್ತು ಜಯಮ್ಮ ಇದ್ದರು.
ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಪೋಸ್ಟರ್ ಅಭಿಯಾನ; ಯುವಕರ ವಿರುದ್ಧ FIR
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೇಂದ್ರ ಸಚಿವೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಗೆ ಎರಡು ಜಿಲ್ಲೆಯಲ್ಲೂ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಗೋ ಬ್ಯಾಕ್, ಶೋಭಾ ಹಾಠಾವೋ ಎಂದು ಸಿ,ಟಿ.ರವಿ ಬೆಂಬಲಿಗರು ಅಭಿಯಾನ ನಡೆಸಿದ್ದಾರೆ. ಸದ್ಯ ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನ ವಿಚಾರ ಸಂಬಂಧ ಪೋಸ್ಟರ್ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ FIR ದಾಖಲಾಗಿದೆ.
ಸಂಸದೆ ಮತ್ತು ಕೇಂದ್ರ ಸಚಿವ ಆದ ನಂತರ ಶೋಭಾ ಕರಂದ್ಲಾಜೆ ಕ್ಷೇತ್ರವನ್ನು ಮತ್ತು ಅಭಿವೃದ್ಧಿ ಮಾಡೋದನ್ನು ಮರೆತಿದ್ದಾರೆ ಎಂಬ ಕೂಗು ಕಳೆದ ಎರಡ್ಮೂರು ವರ್ಷಗಳಿಂದ ಕೇಳಿ ಬರುತ್ತಿದ್ದು, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶೋಭಾಗೆ ವಿರೋಧದ ಬಿಸಿ ಜೋರಾಗಿಯೇ ತಟ್ಟುತ್ತಿದೆ. ಕಳೆದ ಕೆಲ ದಿನಗಳಿಂದ ಮೀನುಗಾರರು ಶೋಭಾ ಕರಂದ್ಲಾಜೆಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಆ ನಂತರ ಉಡುಪಿ ಬಿಜೆಪಿಯಲ್ಲೂ ಶೋಭಾ ವಿರುದ್ಧ ಅಸಮಾಧಾನ ಬಹಿರಂಗವಾಗಿಯೇ ವ್ಯಕ್ತವಾಗಿತ್ತು.
ಇದನ್ನೂ ಓದಿ; ರೇಷನ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಲೇಟ್ ಕೊಟ್ಟ ಸರ್ಕಾರ; ಇಲ್ಲಿದೆ ಡೀಟೈಲ್ಸ್
ಉಡುಪಿ ನಂತರ ಚಿಕ್ಕಮಗಳೂರಿನಲ್ಲೂ ಶೋಭಾ ಕರಂದ್ಲಾಜೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕ್ಷೇತ್ರದ ಕಡೆ ಮುಖ ಮಾಡಿರುವ ಶೋಭಾ ಕರಂದ್ಲಾಜೆ ವಿರುದ್ಧ ‘ಗೋ ಬ್ಯಾಕ್ ಶೋಭಕ್ಕಾ’ ಅಭಿಯಾನ ಕೇಳಿ ಬಂದಿದೆ. ಜನವರಿ 1 ರಿಂದಲೇ ಗೋ ಬ್ಯಾಕ್ ಅಭಿಯಾನ ಆರಂಭವಾಗಿದ್ದು, ಶೋಭಾ ಕರಂದ್ಲಾಜೆ ವಿರುದ್ಧ ಶೋಭಾಕ್ಕ ಎಲ್ಲಿದ್ದಿರಾ?, ಕಾಣೆಯಾದ ಶೋಭಾಕ್ಕ ಎಂದು ಪೋಸ್ಟರ್ ಅಭಿಯಾನ ಆರಂಭವಾಗಿತ್ತು.
ಇದನ್ನೂ ಓದಿ; ರಾಜ್ಯದ ಜನತೆಗೆ ಗುಡ್ ನ್ಯೂಸ್; ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಸರ್ಕಾರದ ಈ ಯೋಜನೆ
ಇದೀಗ ತರೀಕೆರೆಯಿಂದ ಚಿಕ್ಕಮಗಳೂರು ನಗರದವರೆಗೂ ಶೋಭಾ ಕರಂದ್ಲಾಜೆ ವಿರುದ್ಧ ರಾತ್ರೋರಾತ್ರಿ ಪೋಸ್ಟರ್ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ತರೀಕೆರೆ ಮೂಲದ ಸಂಜು, ಸಂಜಯ್, ವಿಷ್ಣು, ಚಂದ್ರಶೇಖರ್ ವಿರುದ್ಧ FIR ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ನಗರ ಸಭೆ ಪೌರ ಕಾರ್ಮಿಕ ನೀಡಿದ ದೂರಿನ ಮೇರೆಗೆ ದಾಖಲಾಗಿದ್ದ FIR ಅನ್ವಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ; ಸ್ವಂತ ಆಸ್ತಿ ಇದ್ದವರು ತಕ್ಷಣ ಈ ರೀತಿ ಮಾಡಿ; ಇಲ್ಲವಾದರೆ ಸಿಗಲ್ಲ ಈ ಸರ್ಕಾರಿ ಸೌಲಭ್ಯ; ಇಲ್ಲಿದೆ ಮುಖ್ಯ ಮಾಹಿತಿ
ಇನ್ನು ಪೊಲೀಸರು ವಿಚಾರಣೆ ವೇಳೆ ಹಣ ನೀಡಿ ಪೋಸ್ಟರ್ ಅಂಟಿಸಲು ಹೇಳಿದ್ರು ಎಂದು ನಾಲ್ವರು ಯುವಕರು ಹೇಳಿದ್ದು, ಇದೀಗ ಹಣ ನೀಡಿ ಪೋಸ್ಟರ್ ಅಂಟಿಸಲು ಹೇಳಿದ್ದವರ ವಿರುದ್ಧವೂ ಬಸವನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












