ಜಯಪುರ: ಬೀದಿ ನಾಯಿ ಜೊತೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನ | ಯುವಕನ ವಿರುದ್ಧ FIR ದಾಖಲು

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಬೀದಿ ನಾಯಿ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪವೊಂದು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ.


ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್‌ ಶಿಪ್‌; ಅರ್ಜಿ ಸಲ್ಲಿಸಲು ಸಿಂಪಲ್‌ ಸ್ಟೆಪ್‌ ಇಲ್ಲಿದೆ ನೋಡಿ


ಏನಿದು ಘಟನೆ:
ಜಯಪುರ ಪಟ್ಟಣದ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ನಾಯಿಯನ್ನು ಹಿಡಿದುಕೊಂಡು ಅದರೊಂದಿಗೆ ಅಸಭ್ಯ ವರ್ತಿಸಿದ್ದಾನೆ. ಬೀದಿ ನಾಯಿಗೆ ಉಪದ್ರವ ಮಾಡುವುದರ ಜೊತೆಗೆ ಪ್ರಾಣಿ ಹಿಂಸೆ ಮಾಡಿರುವುದು ನಿಲ್ದಾಣದಲ್ಲಿರುವ ಜಯಪುರ ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಯುವಕ ಬೀದಿ ನಾಯಿ ಜೊತೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ವಿಡಿಯೋ ಜಯಪುರ‌, ಕೊಪ್ಪ ಭಾಗದಲ್ಲಿ ವೈರಲ್ ಆಗುತ್ತಿದೆ.

ಸಿಸಿ ಕ್ಯಾಮರದಲ್ಲಿ ಸೆರೆಯಾದ ವಿಡಿಯೋ ಪರಿಶೀಲಿಸಿದಾಗ ದಿನಾಂಕ, 18.10.2024 ರಂದು ಬೆಳಗಿನ ಜಾವ ಸುಮಾರು 4.00 ಗಂಟೆ ಸಮಯದಲ್ಲಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.


ಇದನ್ನೂ ಓದಿ; ರೇಷನ್‌ ಕಾರ್ಡ್‌ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಸ್ಥಗಿತವಾಗುತ್ತಾ?; ಏನಂತಾರೆ ಅಧಿಕಾರಿಗಳು?


ಜಯಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಇರುವ ಜಯಪುರ ಎಂಟರ್ ಪ್ರೈಸಸ್ ಎಂದು ಹೆಸರಿರುವ ಅಂಗಡಿಯ ಮುಂಭಾಗದ ಕಟ್ಟೆಯ ಮೇಲೆ ಯಾರೋ ಒಬ್ಬ ವ್ಯಕ್ತಿಯು ಕುಳಿತು ಸಾರ್ವಜನಿಕ ಸ್ಥಳದಲ್ಲಿ ಬೀದಿ ನಾಯಿಯನ್ನು ಹಿಡಿದುಕೊಂಡು ಆದರೊಂದಿಗೆ ಅಸಭ್ಯವಾಗಿ ವರ್ತಿಸಿ ಪ್ರಾಣಿಗೆ ಹಿಂಸೆ ಹಾಗೂ ಉಪದ್ರವ ನೀಡುತ್ತಿರುವುದು ಕಂಡು ಬಂದಿದೆ. ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ವಿಳಾಸದ ಬಗ್ಗೆ ಪರಿಶೀಲನೆ ನಡೆಸಿದಾಗ ಆತ ಕಟ್ಟಿ ಮನೆ ವಾಸಿ ಶಿವರಾಜ ಎಂದು ದೃಢಪಟ್ಟಿದೆ ಎನ್ನಲಾಗಿದೆ.

ಈ ಘಟನೆ ಕುರಿತು ಸ್ವಯಂಪ್ರೇರಿತವಾಗಿ ಪೊಲೀಸರು ಕೊಪ್ಪದಲ್ಲಿ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.


ಇದನ್ನೂ ಓದಿ; ಪಾನ್-ಆಧಾರ್ ಕಾರ್ಡ್‌ ಹೊಂದಿರುವವರ ಗಮನಕ್ಕೆ;  ಈ ಸುದ್ದಿ ಮಿಸ್‌ ಮಾಡ್ದೆ ಓದಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.