
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಐದು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂಸಿ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೌಂಟ್ ಬ್ಯಾಟನ್ ಪುತ್ರಿ ಏಂಜಲಿನಾ (5) ಬೀದಿ ನಾಯಿಗೆ ಒಳಗಾದ ಬಾಲಕಿ.
ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ

ಶಾಲೆಯಿಂದ ಮನೆಗೆ ಬರುವಾಗ ಮನೆಯ ಮುಂಭಾಗ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಬಾಲಕಿಯ ತುಟಿಯ ಭಾಗಕ್ಕೆ ಕಚ್ಚಿದ್ದು, ಸದ್ಯ ಬಾಲಕಿಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂತಹದೇ ಘಟನೆವೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಡಿ.19 ರಂದು ನಡೆದಿತ್ತು. ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಯ ಕಾಲಿಗೆ ಹುಚ್ಚು ನಾಯಿ ಕಚ್ಚಿತ್ತು. ಅಲ್ಲದೆ ಈ ಹಿಂದೆಯೂ ಕೂಡ ಕೊಪ್ಪ ಪಟ್ಟಣದಲ್ಲಿ ಕೆಲಸಕ್ಕೆಂದು ಹೊರಟಿದ್ದ ಕೂಲಿ ಕಾರ್ಮಿಕ ಮೇಲೆ ಏಕಾಏಕಿ ಹುಚ್ಚು ನಾಯಿ ದಾಳಿ ಮಾಡಿತ್ತು. ಜೊತೆಗೆ ಮೂರು ವರ್ಷದ ಮಗುವಿನ ಮೇಲೆ ಕೂಡ ದಾಳಿ ಮಾಡಿತ್ತು.
ಇದನ್ನೂ ಓದಿ; ಇ-ಖಾತಾ ಕುರಿತು ಬಿಗ್ ಅಪ್ಡೇಟ್; ಮಿಸ್ ಮಾಡ್ದೆ ಈ ಸುದ್ದಿ ಓದಿ
ಇದರಿಂದ ಹುಚ್ಚು ನಾಯಿ ದಾಳಿಗೊಳಗಾದವರು ಪಂಚಾಯಿತಿಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಬೀದಿ ನಾಯಿಗಳ ಹಾವಳಿ ತಡೆಯಲು ವಿಫಲವಾದ ಪಟ್ಟಣ ಪಂಚಾಯಿತಿ:
ಪಟ್ಟಣದಲ್ಲಿ ಮಹಿಳೆಯರು, ಶಾಲಾ ಮಕ್ಕಳು, ವಯೋವೃದ್ಧರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿದೆ. ಬೀದಿ ನಾಯಿಗಳ ನಿಯಂತ್ರಣ ಮಾಡಬೇಕಾದ ಪಟ್ಟಣ ಪಂಚಾಯಿತಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; HSRP ಅಳವಡಿಸದ ವಾಹನ ಮಾಲೀಕರಿಗೆ ಬಿಗ್ ರಿಲೀಫ್; ಹೈಕೋರ್ಟ್ ನಿಂದ ಮಹತ್ವದ ಸೂಚನೆ; ಏನಿದೆ ಗೊತ್ತಾ? ಇಲ್ಲಿದೆ ನೋಡಿ













