ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ದಟ್ಟವಾದ ನಿತ್ಯ ಹರಿದ್ವರ್ಣ ಕಾಡಿನಲ್ಲಿ ಅರಣ್ಯ ಇಲಾಖೆಯಿಂದ ನೆಡುತೋಪು ಮಾಡುವುದನ್ನು ತಡೆ ಹಿಡಿಯುವುಂತೆ ಕುರಿತು ಮನವಿ ಪತ್ರ ಸಲ್ಲಿಸಿರುವುದು ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿಯ ಬೇರುಕೊಡಿಗೆಯಲ್ಲಿ ನಡೆದಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿಯ ಬೇರುಕೊಡಿಗೆ ಅರಣ್ಯ ವ್ಯಾಪ್ತಿಯ ಸರ್ವೇ ನಂಬರ್ 227 ರಲ್ಲಿ ನಿತ್ಯ ಹರಿದ್ವರ್ಣ ಕಾಡಿನಲ್ಲಿ ಬಹಳ ದೊಡ್ಡದಾದ ಮರಗಳು ಹೊಂದಿವೆ. ಈ ಕಾಡನ್ನು ಬೇರುಕೊಡಿಗೆ ಗ್ರಾಮಸ್ಥರೇ ಅರಣ್ಯವನ್ನು ರಕ್ಷಣೆ ಮಾಡುತ್ತಾ ಅರಣ್ಯವನ್ನು ಬೆಳೆಸಿದ್ದು, ಇದರಿಂದ ನಮ್ಮ ರೈತರ ಜಮೀನಿಗೆ ಅನುಕೂಲವಾಗಿದೆ. ಆದರೆ ಕಾಡಿನ ಕೆಳಗಡೆ ಅರಣ್ಯ ಇಲಾಖೆಯವರು ಗಿಡ ನೆಡುವುದನ್ನು ನಾವು ವಿರೋದಿಸುತ್ತೇವೆ.
ಅರಣ್ಯ ಒಳಗಡೆ ಗಿಡಗಳನ್ನು ನೆಡುವ ಅವಶ್ಯಕತೆ ಇಲ್ಲ. ಆದ್ದರಿಂದ ಗಿಡ ನೆಡುವ ಯೋಜನೆಯನ್ನು ಬಿಟ್ಟು ಪ್ರಾಕೃತಿಕವಾಗಿ ಬೆಳೆದ ಮರಗಳನ್ನು ಅರಣ್ಯವನ್ನು ಬೆಳೆಸಿ ಎಂದು ಶೃಂಗೇರಿ ಕ್ಷೇತ್ರದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ನವೀನ ಕರುವಾನೆ ಅವರು ಅರಣ್ಯ ಇಲಾಖೆಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.












