ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಗಣಪತಿ ಸೇವಾ ಸಮಿತಿ ಬಾಳೆಹೊನ್ನೂರು, ಕೊಪ್ಪ ಫ್ರೆಂಡ್ಸ್ ಸರ್ಕಲ್ ಬಳಗ ಮತ್ತು ಬಣಕಲ್ ಹಾಗೂ ಕೊಟ್ಟಿಗೆಹಾರದಲ್ಲಿ ಶ್ರೀ ವಿದ್ಯಾ ಗಣಪತಿ ಪ್ರತಿಷ್ಠಾಪನೆ ಹಾಗೂ ಶಾರದಾ ಪೂಜೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಶಾಂತಿಯುತವಾಗಿ ನಡೆಸಿದ ಅಂಗವಾಗಿ ಸಮಿತಿಯ ಮುಖಂಡರಾದ ಜಿ.ವೇಣುಗೋಪಾಲ್ ಪೈ, ಸಂಜಯ್ ಗೌಡ ಅವರನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಂ ಅಮಟೆ ಫಲಪುಷ್ಪ ನೀಡಿ ಗೌರವಿಸಿದರು.
ಇದನ್ನೂ ಓದಿ; ರೇಷನ್ ಕಾರ್ಡ್ʼಗೆ ಹೆಸರು ಸೇರ್ಪಡೆ ಮಾಡ್ಬೇಕಾ?; ಹಾಗಿದ್ರೆ ಈ ಸ್ಟೆಪ್ ಫಾಲೋ ಮಾಡಿ ಅರ್ಜಿ ಸಲ್ಲಿಸಿ

ಗಣಪತಿ ಸೇವಾ ಸಮಿತಿ ಬಾಳೆಹೊನ್ನೂರು, ಕೊಪ್ಪ ಫ್ರೆಂಡ್ಸ್ ಸರ್ಕಲ್ ಬಳಗ ಹಾಗೂ ಬಣಕಲ್ ನಲ್ಲಿ ಗೌರಿಗಣೇಶ ಹಾಗೂ ಶಾರದಾ ಪೂಜೆಯನ್ನು ಶಾಂತಿಯುತವಾಗಿ ನಡೆಸಿದ ಹಿನ್ನಲೆಯಲ್ಲಿ ಸಾವರ್ಕರ್ ಪ್ರತಿಷ್ಠಾನ ಹಾಗೂ ಗಣಪತಿ ಸೇವಾ ಸಮಿತಿಯ ಪರವಾಗಿ ಮುಖಂಡ ವಿನಯ್ ಎಸ್. ಶೆಟ್ಟಿ ಪೊಲೀಸ್ ಇಲಾಖೆಯಿಂದ ಸನ್ಮಾನ ಸ್ವೀಕರಿಸಿದರು.
ಇದನ್ನೂ ಓದಿ; ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆ ನಷ್ಟ ಪರಿಹಾರ ಖಾತೆಗೆ ಜಮಾ!
ಈ ಸಂದರ್ಭದಲ್ಲಿ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮೇಗೌಡ, ಬಣಕಲ್ ಠಾಣೆ ಸಬ್ ಇನ್ ಸ್ಪೆಕ್ಟರ್ ಡಿ. ವಿ ರೇಣುಕಾ, ಪೊಲೀಸ್ ಅಧಿಕಾರಿಗಳು ಇದ್ದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?












