ನ್ಯೂಸ್ ಮಲ್ನಾಡ್ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಅದು ದಟ್ಟ ಕಾನನದ ನಡುವೆ ಇರುವ ಪುಟ್ಟ ಗ್ರಾಮ.. ಕಳೆದ ಎರಡು ವಾರದ ಹಿಂದೆ ಸುರಿದ ಭಾರೀ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಅಲ್ಲಿನ ಜನರ ಬದುಕು ಅಕ್ಷರಶಃ ನಲುಗಿಹೋಗಿತ್ತು.. ಇದೀಗ ಆ ಗ್ರಾಮ ವಿದ್ಯುತ್ ಸಂಪರ್ಕಗೊಂಡಿದ್ದು ಅಲ್ಲಿನ ಜನ ನಿಟ್ಟುಸಿರುಬಿಟ್ಟಿದ್ದಾರೆ.


ಇದನ್ನೂ ಓದಿ: ವಿದ್ಯಾರ್ಥಿಗಳ ಬಸ್​ ಪಾಸ್​ ವಿತರಣೆ ಆರಂಭ; ದರ, ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ


16 ದಿನದಿಂದ ಇರಲಿಲ್ಲ ಕರೆಂಟ್

ಕಳೆದ ಎರಡು ವಾರದ ಹಿಂದೆ ಸುರಿದ ಭಾರೀ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟ ಪಂಚಾಯತ್ ವ್ಯಾಪ್ತಿಯ ಹಿರೇಹಡ್ಲು ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ಬಿದ್ದಿದ್ದು, ಇಲ್ಲಿನ ಜನ ಬರೋಬ್ಬರಿ 16 ದಿನ ಕರೆಂಟ್ ಇಲ್ಲದೆ ಕಗ್ಗತ್ತಲಲ್ಲಿ ಬದುಕು ಸಾಗಿಸಿದ್ದಾರೆ. ಈ ಪುಟ್ಟ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಮನೆಳಗಿವೆ. ಹತ್ತಾರು ಮಕ್ಕಳು ಶಾಲಾ ಕಾಲೇಜಿಗೆ ತೆರಳುತ್ತಾರೆ. ಆದರೆ ಮಳೆ ಬಂದು ವಿದ್ಯುತ್ ಸಂಪರ್ಕ ಕಡಿತಗೊಂಡರೆ ಈ ಗ್ರಾಮದ ಜನರ ಕಷ್ಟ ಕೇಳುವರಿಲ್ಲ‌ ಎಂಬಂತಾಗಿದೆ.


ಇದನ್ನೂ ಓದಿ: ಈ ರೀತಿಯ ಆಹಾರ ಪದ್ದತಿ ಅನುಸರಿಸಿದ್ರೆ ಮೂಳೆ ಸವೆತ ಪಕ್ಕಾ!; ಎಚ್ಚರ.. ಯಾವುದೇ ಕಾರಣಕ್ಕೂ ಹೀಗೆ ಮಾಡ್ಬೇಡಿ..


ಎಇ ಗಮನಕ್ಕೆ ತಂದಿದ್ದರೂ ಆಗದ ಪ್ರಯೋಜನ

ಇತ್ತ ಇಲ್ಲಿನ ಗ್ರಾಮಸ್ಥರು ಎಇ ಗಮನಕ್ಕೆ ತಂದರೂ ಕೂಡ ನಿರ್ಲಕ್ಷ್ಯ ತೋರಿದ್ದಾರೆಂಬ ಆರೋಪವೂ ಕೇಳಿಬಂದಿದೆ. ಎರಡು ವಾರಗಳಷ್ಟು ಕಾಲ ಕರೆಂಟ್ ಇರಲ್ಲಿಲ್ಲ. ಗ್ರಾಮದ ಮನೆಯೊಂದರಲ್ಲಿ ಗರ್ಭಿಣಿಯೋರ್ವರಿದ್ದು, ಏನಾದರೂ ತುರ್ತು ಪರಿಸ್ಥಿತಿ ಸಂಭವಿಸಿದ್ದರೂ ಕನಿಷ್ಟ ಕರೆ ಮಾಡಲು ಮೊಬೈಲ್ ಗಳು ಚಾರ್ಚ್ ಇರಲಿಲ್ಲ ಎಂದು ಗ್ರಾಮದ ದಾಮೋದರ್ ಎಂಬುವವರು ಬೇಸರ ಹೊರಹಾಕಿದ್ದಾರೆ.


ಇದನ್ನೂ ಓದಿ: ರೈತರೇ ನಿಮ್ಮ ಪಶುಗಳಿಗೆ ತುರ್ತು ಚಿಕಿತ್ಸೆ ಬೇಕೆ?; ಜಾನುವಾರುಗಳ ತುರ್ತು ಚಿಕಿತ್ಸೆಗೆ ಆಂಬ್ಯುಲೆನ್ಸ್ ವ್ಯವಸ್ಥೆ!; ಹಾಗಾದ್ರೆ ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ


ನ್ಯೂಸ್ ಮಲ್ನಾಡ್ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು

ಎರಡು ವಾರಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿರೇಹಡ್ಲು ಗ್ರಾಮದ ಕುರಿತು ನ್ಯೂಸ್ ಮಲ್ನಾಡ್ ವರದಿ ಮಾಡಿತ್ತು. ಇದೀಗ ವರದಿ ಬೆನ್ನಲ್ಲೇ ಹಿರೇಹಡ್ಲು ಗ್ರಾಮಕ್ಕೆ ವಿದ್ಯುತ್ ಪೂರೈಕೆಯಾಗಿದ್ದು ಗ್ರಾಮಸ್ಥರು ನ್ಯೂಸ್ ಮಲ್ನಾಡ್ ಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದ 16 ದಿನದಿಂದ ನಮ್ಮ ಹಿರೇಹಲ್ಲುವಿನ ಸುಮಾರು 15 ಮನೆಗಳು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ನಾವು ಎಇ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರಿದ್ದರು. ನ್ಯೂಸ್ ಮಲ್ನಾಡ್ ವರದಿ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ನ್ಯೂಸ್ ಮಲ್ನಾಡ್ ಗೆ ಧನ್ಯವಾದ ತಿಳಿಸುತ್ತೇನೆ.– ಪ್ರವೀಣ್ ಹಿರೇಹಡ್ಲು, ಗ್ರಾಮಸ್ಥರು


ಎನ್. ಆರ್. ಪುರ: ಬಸ್‌ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಿಂದ ಶಿವಮೊಗ್ಗಕ್ಕೆ ಹೋಗುವ ಸರ್ಕಾರಿ ಬಸ್ ಕೆಲವು ನಿಲ್ದಾಣಗಳಲ್ಲಿ ಬಸ್ ನಿಲ್ಲಿಸುತ್ತಿಲ್ಲ ಎಂದು ಆರೋಪಿಸಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನರಸಿಂಹರಾಜಪುರದ ಬಿ.ಎಚ್.ಕೈಮರದಲ್ಲಿ ಶುಕ್ರವಾರ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: ಈ ರೈತರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಸಿಗಲಿದೆ 10 ಸಾವಿರ; ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು? ಇಲ್ಲಿದೆ ಡಿಟೈಲ್ಸ್


ಶೃಂಗೇರಿಯಿಂದ ಶಿವಮೊಗ್ಗಕ್ಕೆ ಹೋಗುವ ಸರ್ಕಾರಿ ಬಸ್ ಗಳು ತಲಮಕ್ಕಿ, ಗುಡ್ಡೆಹಳ್ಳ, ಚಿಟ್ಟುಕೊಡಿಗೆ, ವಗಡೆ ಕಲ್ಲು, ಸಿಂಸೆ, ಮೆಣಸೂರು ಕಾಲೇಜು, ಸೌತಿಕೆರೆ ಮುಂತಾದ ಕಡೆಗಳಲ್ಲಿ ನಿಲ್ಲಿಸುತ್ತಿಲ್ಲ. ಇದರಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಗ್ರಾಮೀಣ ಭಾಗದ ಬಸ್ ನಿಲ್ದಾಣಗಳಲ್ಲೂ ಬಸ್ ನಿಲುಗಡೆ ನೀಡಬೇಕು. ಅಲ್ಲದೆ ಹೆಚ್ಚುವರಿಯಾಗಿ 2 ರಿಂದ 3 ಬಸ್ ಗಳನ್ನು ಇದೇ ಮಾರ್ಗದಲ್ಲಿ ಬಿಡಬೇಕೆಂದು ಒತ್ತಾಯಿಸಿದರು.


ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮ ಜಾರಿ


ಸ್ಥಳಕ್ಕೆ KSRTC ಅಧಿಕಾರಿ ಭೇಟಿ ನೀಡಿ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿ ಶುಕ್ರವಾರ ಸಂಜೆಯಿಂದಲೇ ಬಸ್ ನಿಲುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು.


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.