ಕಳಸ:(ನ್ಯೂಸ್ ಮಲ್ನಾಡ್ ವರದಿ) ಕಳಸ ತಾಲೂಕಿನ ಬಾಳೆಹೊಳೆ ಸಮೀಪ ಇರುವ ಕೆಳಭಾಗದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಿಸಿರುವ ಗೋಪುರ ಶಿಖರದ ಉದ್ಘಾಟನೆಯು ಫೆ 20 ರಂದು ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಸ್ವಾಮೀಜಿಗಳು ಲೋಕಾರ್ಪಣೆಗೊಳಿಸಲಿದ್ದಾರೆ. ಹಾಗೆ ದುರ್ಗಾಪರಮೇಶ್ವರಿ ಜಾತ್ರೆ ಅಂಗವಾಗಿ ಫೆ. 19 ರಿಂದ 24 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಜರುಗಲಿರುವ ಕಾರ್ಯಕ್ರಮಗಳು:
* ಫೆ.19: ಜಗನ್ಮಾತೆಯ ಸನ್ನಿಧಿಯಲ್ಲಿ ಫಲಾನ್ಯಾಸ, ರಾಕ್ಷೋಘ್ನ ಹೋಮ ಹಾಗೂ ಶಿಖರ ಪ್ರತಿಷ್ಠಾನ ಕಾರ್ಯಕ್ರಮಗಳು ನೆರವೇರಲಿದೆ.
* ಫೆ.20: ಚಂಡಿಕಾ ಹೋಮ, ಶ್ರೀಗಳಿಂದ ಗೋಪುರ ಶಿಖರ ಲೋಕಾರ್ಪಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.
* ಫೆ.21: ಗುರು ಗಣಪತಿ ಪ್ರಾರ್ಥನೆ, ಸಿಂಹಾಧಿವಾಸ ಹೋಮ ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
* ಫೆ.22: ಜಗನ್ಮಾತೆಗೆ ಮಹಾಪೂಜೆ, ಉತ್ಸವ ಬಲಿ, ಬ್ರಹ್ಮರಥೋತ್ಸವ ಹಾಗೂ ರಾತ್ರಿ ಭೂತ ಬಲಿ ಕಾರ್ಯಕ್ರಮಗಳು ನೆರವೇರಲಿದೆ.
* ಫೆ.23: ಪ್ರಬೋಧೋತ್ಸವ, ವಾರುಣ ಹೋಮ, ಪೂರ್ಣಾಹುತಿ ಹೋಮ ಹಾಗೂ ಅವಭೃತ ಹೋಮ ಮತ್ತು ಇನ್ನಿತರೆ ಕಾರ್ಯಕ್ರಮಗಳು ನೆರವೇರಲಿದೆ.
* ಫೆ.24: ಶುದ್ಧ ಸಂಪ್ರೋಕ್ಷಣೆ ಹಾಗೂ ಕಲಾತತ್ವ ಹೋಮ ನೆರವೇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.












