ಚಿಕ್ಕಮಗಳೂರು: ಫೆ.16 ರಿಂದ ರೋಟರಿ ಜಿಲ್ಲಾ ಸಮ್ಮೇಳನ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಫೆ.16, 17 ಮತ್ತು 18 ರಂದು ರೋಟರಿ ಕ್ಲಬ್ ವತಿಯಿಂದ ನಗರದ ಎಐಟಿ ಕಾಲೇಜು ಆವರಣದ ಬಯಲು ರಂಗಮಂದಿರದಲ್ಲಿ ರೋಟರಿ ಸದಸ್ಯರ ನಿಸರ್ಗ ನಿನಾದ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕ್ಲಬ್ ನ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ತಿಳಿಸಿದರು.

 

ಇದನ್ನೂ ಓದಿ; ಪ್ರೊಬೆಷನರಿ ನೌಕರರನ್ನು ಏಕಾಏಕಿ ವಜಾ ಮಾಡುವಂತಿಲ್ಲ: ಹೈಕೋರ್ಟ್ ಆದೇಶ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಚುಂಚನಗಿರಿ ಸಂಸ್ಥಾನ ಶೃಂಗೇರಿ ಶಾಖಾ ಮಠದ ಗುಣನಾಥಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ರೋಟರಿ ಸಂಸ್ಥೆ ಅಂತರರಾಷ್ಟ್ರೀಯ ಮಾಜಿ ಅಧ್ಯಕ್ಷ ಕಲ್ಯಾಣ್ ಬ್ಯಾನರ್ಜಿ, ಸಂತೋಷ್ ಪ್ರಧಾನ್, ಅಭಿನಂದನ್ ಶೆಟ್ಟಿ, ಡಿ.ಎಸ್.ರವಿ ಭಾಗವಹಿಸಲಿದ್ದಾರೆ. ರೋಟರಿಯ ನಾಲ್ಕು ಜಿಲ್ಲೆಗಳಾದ ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಒಟ್ಟು 3,500 ಸದಸ್ಯರು ಭಾಗವಹಿಸಲಿದ್ದಾರೆ ಎಂದರು.

ಇದನ್ನೂ ಓದಿ; ಗಮನಿಸಿ; ಈ ಕಾರ್ಡ್ ನಲ್ಲಿ 5 ಲಕ್ಷ ಉಚಿತ ಚಿಕಿತ್ಸೆ; ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

17 ರಂದು ಬೆಂಗಳೂರು ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸುದರ್ಶನ್, ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ, ನಟ ಪ್ರಕಾಶ್ ಬೆಳವಾಡಿ, ಚಂದ್ರನ್, ಗಣೇಶ್ ಆಚಾರ್ಯ ಹಾಗೂ ನಟಿ ರೂಪಾ ಅಯ್ಯರ್ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ನಾಲ್ಕು ಜಿಲ್ಲೆಗಳ ಎಲ್ಲ ಸದಸ್ಯರು ಭಾಗವಹಿಸಲಿದ್ದು, ರೋಟರಿ ಸಂಸ್ಥೆಯ ಸೇವಾ ಕಾರ್ಯಚಟುವಟಿಕೆ, ಏಳಿಗೆ, ಹೊಸ ಆಯಾಮಗಳ ಕುರಿತು ಪರಸ್ಪರ ವಿಚಾರ ವಿನಿಮಯವಾಗಲಿದೆ. 18 ರಂದು ಜಯದೇವ ಆಸ್ಪತ್ರೆ ಹೃದ್ರೋಗ ತಜ್ಞ ಡಾ. ಸಿ.ಎನ್.ಮಂಜುನಾಥ್ ಭಾಗವಹಿಸಲಿದ್ದಾರೆ ಎಂದರು.

 

ಇದನ್ನೂ ಓದಿ; ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್; ಐಸಿಎಂಆರ್ ಒಪ್ಪಿಗೆ- ದಿನೇಶ್ ಗುಂಡೂರಾವ್

ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಚಿಕ್ಕಮಗಳೂರು ಘಟಕ ಅಧ್ಯಕ್ಷ ಶ್ರೀವತ್ಸ, ತನೋಜ್ ಕುಮಾರ್ ನಾಯ್ಡು, ಅನಂತೇಗೌಡ, ಗುರುಮೂರ್ತಿ, ವೆಂಕಟೇಶ್, ವಿವೇಕ್, ಐಶ್ವರ್ಯಾ ಇದ್ದರು.

 

ಬೈಕ್‌ ಚಲಾಯಿಸಿದ ಅಪ್ರಾಪ್ತ ಬಾಲಕ | ತಾಯಿಗೆ 30 ಸಾವಿರ ದಂಡ!

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ಕೊಟ್ಟ ಬಾಲಕನ ತಾಯಿಗೆ 30 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; ಬರಪರಿಹಾರದ ಹಣ ಜಮಾ; ನಿಮಗೂ ಬಂತಾ ಹಣ, ಹೀಗೆ ಚೆಕ್ ಮಾಡಿ

2024 ರ ಜನವರಿ 30 ರಂದು ಶಿವಮೊಗ್ಗ ಪೂರ್ವ ಸಂಚಾರಿ ಠಾಣೆ ಪಿ.ಎಸ್.ಐ ನವೀನ್ ಕುಮಾರ್ ಮಠಪತಿ ಅವರು ಶಿವಮೊಗ್ಗ ನಗರದ ಎಸ್ ಪಿ.ಎಂ ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕ ಯಾವುದೇ ಚಾಲನಾ ಪರವಾನಗಿ ಪತ್ರವಿಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದು ಕಂಡು ಬಂದಿದ್ದು, ಇದನ್ನ ಗಮನಿಸಿದ ಪಿ.ಎಸ್.ಐ ಅಪ್ರಾಪ್ತನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ಬಾಲಕನ ತಾಯಿ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣ ಸಂಬಂಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು.

ಇದೀಗ ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಓಡಿಸಲು ಅವಕಾಶ ನೀಡಿದ ಬಾಲಕನ ತಾಯಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ 30 ಸಾವಿರ ರೂ ದಂಡ ವಿಧಿಸಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.