ಕಡೂರು: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಮಚೇರಿಯಿಂದ ಉಡುಗೆರೆ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಹಿಂಬದಿ ಸವಾರ ಮಹಿಳೆ ಮೃತಪಟ್ಟ ಘಟನೆ ಕಡೂರು-ಬೆಲಗೂರು ರಸ್ತೆಯಲ್ಲಿ ನಡೆದಿದೆ. ಉಡುಗೆರೆ ಗ್ರಾಮದ ಶಾರದಮ್ಮ (64) ಮೃತಪಟ್ಟವರು.
ಮಚ್ಚೇರಿಯಲ್ಲಿರುವ ತಂಗಿಯ ಮಗಳ ಮನೆಗೆ ಕಳೆದ ಭಾನುವಾರ ತೆರಳಿದ್ದ ಶಾರದಮ್ಮ, ಬುಧವಾರ ಅಳಿಯ ಮಹಾಂತೇಶ್ ಅವರೊಂದಿಗೆ ಬೈಕ್ನಲ್ಲಿ ಉಡುಗೆರೆ ಗ್ರಾಮಕ್ಕೆ ವಾಪಸಾಗುತ್ತಿದ್ದರು. ಕಡೂರು-ಬೆಲಗೂರು ರಸ್ತೆಯಲ್ಲಿ ಹಸು ಅಡ್ಡಬಂದಾಗ ಅದನ್ನು ತಪ್ಪಿಸಲು ಚಾಲಕ ಯತ್ನಿಸಿದ ವೇಳೆ ಬೈಕ್ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ತಲೆಗೆ ತೀವ್ರ ಪೆಟ್ಟಾಗಿದ್ದ ಶಾರದಮ್ಮ ಅವರನ್ನು ಆಂಬುಲೆನ್ಸ್ನಲ್ಲಿ ಕಡೂರು ಸಾರ್ವಜನಿಕ ಆಸ್ಪತ್ರೆಗೆ ಒಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












