ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಹಸಿ ಅಡಿಕೆ ಮೂಟೆ ಸಾಗಿಸುತ್ತಿದ್ದಾಗ ಟ್ರಾಕ್ಟರ್ ನಲ್ಲಿ ಕುಳಿತಿದ್ದ ಕೃಷ್ಣಮೂರ್ತಿ (35) ಎಂಬುವರು ಆಕಸ್ಮಿಕವಾಗಿ ಕೆಳಗೆ ಉರುಳಿ ಬಿದ್ದು ಮೃತ ಪಟ್ಟ ಘಟನೆ ಶುಕ್ರವಾರ ಸಂಜೆ ಗುಡ್ಡೇಹಳ್ಳ ಸಮೀಪದ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಚಿಟ್ಟಿಕೊಡಿಗೆ ತೋಟ ಒಂದರಲ್ಲಿ ಅಡಿಕೆ ಕೊನೆ ತೆಗೆದು ಉದುರು ಮಾಡಿ ಮೂಟೆ ಕಟ್ಟಿ ಟ್ರಾಕ್ಟರ್ ಮೂಲಕ ಕುದುರೆಗುಂಡಿ ಕಡೆಗೆ ಸಾಗಿಸುತ್ತಿದ್ದಾಗ ಟ್ರಾಕ್ಟರ್ ಮೇಲೆ ಕುಳಿತಿದ್ದ ಕೂಲಿ ಕಾರ್ಮಿಕ ಕೃಷ್ಣಮೂರ್ತಿ ಆಕಸ್ಮಿಕವಾಗಿ ಉರುಳಿ ಬಿದ್ದಿದ್ದಾರೆ. ತಕ್ಷಣ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ನಂತರ ಶಿವಮೊಗ್ಗಕ್ಕೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ.
ಮೃತಪಟ್ಟ ಕೃಷ್ಣಮೂರ್ತಿ ಹೊಳಲ್ಕೆರೆ ತಾಲೂಕಿನವರಾಗಿದ್ದು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ












