ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಮಾನಗಾರು ಬಡಾವಣೆಯಲ್ಲಿರುವ ಜ್ಞಾನಭಾರತಿ ವಿದ್ಯಾಕೇಂದ್ರವು ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಮನೆಯಲ್ಲಿ ಪಾಲಿಶ್ ಅಕ್ಕಿ ಬಳಸೋ ಮುನ್ನ ಹುಷಾರ್; ಹೊರಬಿತ್ತು ಅಘಾತಕಾರಿ ಅಂಶ!

ವಿದ್ಯಾಕೇಂದ್ರದ 19 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕಗಳಿಸಿದ್ದಾರೆ. ಒಂದೇ ಕ್ಯಾಂಪಸ್ ನಲ್ಲಿ 19 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳಿಸಿರುವುದು ಚಿಕ್ಕಮಗಳೂರು ಜಿಲ್ಲೆಯಲ್ಲೇ ಒಂದು ದಾಖಲೆಯಾಗಿದೆ.
621 ಅಂಕಗಳನ್ನು ಪಡೆದ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳಾದ ಸಿರಿ ಅವಧಾನಿ ಮತ್ತು ಧನುಷ್ ತಾಲ್ಲೂಕಿಗೆ ಎರಡನೇ ಸ್ಥಾನಗಳಿಸಿರುತ್ತಾರೆ. ಇದಲ್ಲದೇ ಐಸಿರಿ ಎಂ.ಪಿ, ಅನಘ, ಸೌಜನ್ಯ ಈ ಮೂವರು ವಿದ್ಯಾರ್ಥಿಗಳು 618 ಅಂಕಗಳಿಸಿದ್ದಾರೆ. ಶ್ರೀವಾಣಿ 617, ಅಮೋಘ ಮತ್ತು ಸುಬ್ರಮಣ್ಯ 615 ಅಂಕಗಳಿಸಿ ರಾಜ್ಯಮಟ್ಟದ 5, 8, 9ನೇ ರ್ಯಾಂಕ್ ಪಡೆದಿದ್ದಾರೆ.

ಇದನ್ನೂ ಓದಿ: ಪಂಪ್ ಸೆಟ್ ಕುರಿತು ರಾಜ್ಯ ಸರ್ಕಾರದಿಂದ ಹೊಸ ಆದೇಶ; ಆದೇಶ ಪ್ರತಿ ಇಲ್ಲಿದೆ ನೋಡಿ
ಜ್ಞಾನಭಾರತಿ ವಿದ್ಯಾಕೇಂದ್ರಕ್ಕೆ ಸಂಸದ ಶ್ರೀನಿವಾಸಪೂಜಾರಿ ಭೇಟಿ:
ಜ್ಞಾನಭಾರತಿ ವಿದ್ಯಾಕೇಂದ್ರಕ್ಕೆ ನಿನ್ನೆ ಸಂಸದ ಕೋಟಾ ಶ್ರೀನಿವಾಸಪೂಜಾರಿಯವರು ಭೇಟಿ ನೀಡಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿದ್ಯಾಕೇಂದ್ರವು ಸಾಧಿಸಿದ ದಾಖಲೆಯ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಮುಕ್ತಕಂಠದಿಂದ ಅಭಿನಂದಿಸಿ ಶುಭ ಹಾರೈಸಿದರು.
ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಂಸದರು, ಶಿಕ್ಷಣದಲ್ಲಿ ಜ್ಞಾನ ಮತ್ತು ಸಂಸ್ಕಾರ ಅತಿ ಮುಖ್ಯವಾದದ್ದು. ಜ್ಞಾನಭಾರತಿ ಶಾಲೆಯು ಮಕ್ಕಳಲ್ಲಿ ಸಂಸ್ಕಾರ ದೇಶಪ್ರೇಮವನ್ನು ಬೆಳೆಸುವುದಲ್ಲದೇ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಸಾಮೂಹಿಕ ವಿವಾಹಕ್ಕೆ ಸಿಗಲಿದೆ 50000 ರೂ.; ಅರ್ಜಿ ಸಲ್ಲಿಕೆ ಹೇಗೆ?
ಸಮಾರಂಭದಲ್ಲಿ ಶಾಲಾ ಅಧ್ಯಕ್ಷರಾದ ಕೆ. ಶ್ರೀಕಾಂತ್, ಜಿ.ಎಂ. ಸತೀಶ, ವಿಶ್ವನಾಥ, ಪ್ರಕಾಶ್ ಎಂ.ಎಲ್., ವೇಣುಗೋಪಾಲ್, ಪ್ರಾಂಶುಪಾಲರಾದ ಶಂಕರನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.












