ಜಯಪುರ: ಎಸ್ ಸಿ, ಎಸ್ ಟಿ ತರಬೇತಿ ಹೆಸರಲ್ಲಿ ಲಕ್ಷಾಂತರ ಅಕ್ರಮ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ರಾಜ್ಯಾದ್ಯಂತ ವಾಲ್ಮೀಕಿ ಅಭಿವೃದ್ಧಿ ನಿಗಮ ಹಣ ದುರುಪಯೋಗದ ಹಗರಣ ಸುದ್ದಿಯಲ್ಲಿದೆ. ವಾಲ್ಮೀಕಿ ನಿಗಮದ ಹೆಸರಲ್ಲಿ ಕೋಟ್ಯಾಂತರ ರೂ. ಕೊಳ್ಳೆ ಹೊಡೆದಿದ್ದರೆ ಇತ್ತ ಚಿಕ್ಕಮಗಳೂರಿನಲ್ಲೂ ಟ್ರೈನಿಂಗ್ ಹೆಸರಿನಲ್ಲಿ ಲಕ್ಷಾಂತರ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.


ಇದನ್ನೂ ಓದಿ: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಎಸ್ ಸಿ, ಎಸ್ ಟಿ ಅಭಿವೃದ್ಧಿ ಹೆಸರಲ್ಲಿ ಪಂಗನಾಮ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರದಲ್ಲಿ ಸಮಾಜ ಕಲ್ಯಾಣ/ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಲಕ್ಷಾಂತರ ರೂಗಳ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು. ಸುಮಾರು 7 ರಿಂದ‌ 10 ದಿನಗಳ ಕಾಲ ನಡೆಯಬೇಕಿದ್ದ ತರಬೇತಿ ಕಾರ್ಯಗಾರ ಕೇವಲ 2 ಗಂಟೆಯಲ್ಲಿ ಫೋಟೋಶೂಟ್ ನಲ್ಲಿ ಮುಗಿದು ಹೋಗಿದೆ. ಅದೂ ಸಹ ಎಸ್ ಸಿ ಎಸ್ ಟಿ ಸಮುದಾಯಕ್ಕೆ ಸೇರಿದವರು ಯಾರೂ ಇಲ್ಲದೆಯೇ ಪರಿಶಿಷ್ಟ ಪಂಗಡಗಳ ಸಮುದಾಯದ ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. ಸಾಮಾನ್ಯ ವರ್ಗಕ್ಕೆ ಸೇರಿದ ಸುಮಾರು 40 ಜನ ಮಹಿಳೆಯರನ್ನು ಕಂಪ್ಯೂಟರ್ ಹಾಗೂ ಹೊಲಿಗೆ ತರಬೇತಿ ಇದೆ.. ಒಂದು ದಿನದ ತರಬೇತಿ ಎಂದು ಹೇಳಿ ಕರೆತರಲಾಗಿದೆ. ಆದ್ರೆ ಅಲ್ಲಿ ಹೋಗಿ ನೋಡಿದ್ರೆ‌ ಗೋಡೆಯಲ್ಲಿ 200 ರೂ. ಬ್ಯಾನರ್ ಬಿಟ್ಟರೆ ಯಾವ ಕಂಪ್ಯೂಟರ್ ಗಳೂ ಇಲ್ಲ.. ಯಾವ ಹೊಲಿಗೆ ಮಷೀನ್ ಗಳೂ ಇಲ್ಲ.. ಇದನ್ನೆಲ್ಲಾ ಪ್ರಶ್ನಿಸಿದರೆ ಅಯ್ಯೋ ಅದೆಲ್ಲಾ ದೊಡ್ಡ ಸ್ಟೋರಿ ಆಮೇಲೆ ಹೇಳ್ತೀವಿ.. ನಮಗೆ ಬರೀ ಒಂದಷ್ಟು ಫೋಟೋಗಳು ಬೇಕಷ್ಟೇ ಎಂದಿದ್ದಾರಂತೆ. ಅಲ್ಲಿ ಬಂದಿದ್ದ ಮಹಿಳೆಯರು ಇದೊಂದು ಸ್ಕ್ಯಾಮ್ ಎಂದು ಆರೋಪಿಸಿದ್ದಾರೆ..


ಇದನ್ನೂ ಓದಿ: 9 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್; ತಿಂಗಳಿಗೆ ಸಿಗಲಿದೆ 1,000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಅರ್ಧ ಗಂಟೆಗೊಂದು ಡ್ರೆಸ್, ನಿಮಿಷಕ್ಕೊಂದು ಫೋಟೋ;

ಒಂದು ವಾರಗಳಷ್ಟು ಕಾಲ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸಿಗಬೇಕಾಗಿದ್ದ ಕಾರ್ಯಗಾರ ಕೇವಲ ಎರಡರಿಂದ ಮೂರು ಗಂಟೆಗಳಲ್ಲಿ ಮುಗಿದಿದೆ. ಅರ್ಧಗಂಟೆಗೊಮ್ಮೆ ಬೇರೆ ಬೇರೆ ಡ್ರೆಸ್ ಹಾಕಿಕೊಂಡು ಬಂದು ವಾರಕ್ಕಾಗುವಷ್ಟು ಫೋಟೋಶೂಟ್ ಮಾಡಿಸಿದ್ದರು. ತರಬೇತಿಗೆಂದು ಬಂದಿದ್ದ ಮಹಿಳೆಯರಿಗೆ ಟಿ-ಶರ್ಟ್ ಜೊತೆಗೆ ತಲೆಗೆ ಟೋಪಿ ಹಾಕಿದ್ದಾಗಲೇ ಗೊತ್ತಾಗಿದ್ದು, ಇದು ಸಮಾಜ ಕಲ್ಯಾಣ ಇಲಾಖೆಗೆ ಹಾಕಿರುವ ಟೋಪಿ ಎಂದು!!

ಪ್ರಶ್ನಿಸಿದ ಮಹಿಳೆಯರ ಬಾಯಿಮುಚ್ಚಿಸಲು 250 ರೂ.!

ಇನ್ನು ಬಂದಿದ್ದ ಮಹಿಳೆಯರಿಗೆ ಎರಡೇ ಗಂಟೆಯಲ್ಲಿ ಇದೆಲ್ಲಾ ತಿಳಿದಿದ್ದು ಇದನ್ನು ಪ್ರಶ್ನಿಸಲು ಹೋದವರಿಗೆ ಬಿಳಿ ಕಾಗೆ ಹಾರಿಸಿದ್ದಾರೆ, ಕೊನೆಯಲ್ಲಿ 250ರೂ. ಲಂಚ (ಶೃಂಗೇರಿ ಭಾಷೆಯ ಟಿಪ್ಸ್) ಕೂಡ ಕೊಟ್ಟಿದ್ದಾರಂತೆ.


ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 6000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಕಣ್ಣುಮುಚ್ಚಿ ಕುಳಿತಿರುವ ಅಧಿಕಾರಿಗಳು:

ಇನ್ನು ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ‘ನಮಗೆ ವಿಷಯಾನೇ ಗೊತ್ತಿಲ್ಲ ಸಾರ್’ ಎಂದು ನುಣುಚಿಕೊಂಡಿದ್ದಾರೆ. ಒಂದು ನಿರ್ಧಿಷ್ಟ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯ, ತರಬೇತಿಯನ್ನು ವ್ಯವಸ್ಥಿತವಾಗಿ ಕೊಳ್ಳೆ ಹೊಡೆಯುವುದರ ಕುರಿತು ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎಲ್ಲಾ ಅಧಿಕಾರಿಗಳ ಮುಖವಾಡವನ್ನೂ ನ್ಯೂಸ್ ಮಲ್ನಾಡ್ ಕಳಚಲಿದೆ.

ಒಂದು ದಿನದ ಹೊಲಿಗೆ ಹಾಗೂ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವಿದೆ ಎಂದು ತಿಳಿಸಿದ್ದರು. ಇದನ್ನು ನಂಬಿಕೊಂಡು ನಾವು ಕೊಪ್ಪ ಹಾಗೂ ಶೃಂಗೇರಿ ಭಾಗದ ಸುಮಾರು 15-20 ಮಂದಿ ಮಹಿಳೆಯರು ಬಂದಿದ್ದೆವು. ಆದರೆ ನಮಗೆ ಯಾವುದೇ ತರಬೇತಿ‌ ನೀಡಿಲ್ಲ ಬದಲಾಗಿ ಮುಖ ಕಾಣದಂತೆ ಕುಳಿತುಕೊಳ್ಳಿ ಎಂದು ಹೇಳಿ ಫೋಟೋ ತೆಗೆದಿದ್ದಾರೆ. ಇದು ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸೇರಿದ ಕಾರ್ಯಕ್ರಮವಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಯೊಬ್ಬರಿಗೂ ತಲಾ 250 ರೂ. ನಂತೆ ಹಣ ನೀಡಿದ್ದಾರೆ. ಇದರ ಹಿಂದೆ ಲಕ್ಷಾಂತರ ಹಣ ವಂಚನೆ ನಡೆದಿದೆ‌ ಎಂಬ ಅನುಮಾನ‌ ಮೂಡುತ್ತಿದೆ.‌ – ಹೆಸರು ಹೇಳಲಿಚ್ಚಿಸಿದ ಮಹಿಳೆ

ಈ ಕುರಿತು ಸುದ್ಧಿ ಪ್ರಕಟವಾಗುತ್ತಿದ್ದಂತೆ ಟ್ರೈನಿಂಗ್ ಸೆಂಟರ್ ನಡೆಸಿದವರು ನ್ಯೂಸ್ ಮಲ್ನಾಡ್ ಅನ್ನು ಸಂಪರ್ಕಿಸಿ ಎಸ್ ಸಿ, ಎಸ್ ಟಿ ಮಹಿಳೆಯರ ಜೊತೆಗೆ ಉಳಿದವರಿಗೂ ಬಂದವರಿಗೆ ಟ್ರೈನಿಂಗ್ ನೀಡಿದ್ದೇವೆ. ಆದರೆ, ಅವರ ಹೆಸರಿನಲ್ಲಿ ಯಾವುದೇ ಬಿಲ್ ಮಾಡಿಸಿಲ್ಲ. ಬಂದವರಿಗೆ ಬಸ್ ಚಾರ್ಜ್ ಶುಲ್ಕವನ್ನು ನೀಡಿದ್ದೇವೆ. ಹೊರತು ಯಾವುದೇ ಅಕ್ರಮ ನಡೆಸಿಲ್ಲ, ಅಲ್ಲಿ ಬಂದವರಿಗೆ ತಪ್ಪು ಕಲ್ಪನೆ ಉಂಟಾಗಿ ಹೀಗಾಗಿದೆ, ಈ ಕುರಿತು ಯಾವುದೇ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.