ಅಧಿಕಾರ ಶಾಶ್ವತವಲ್ಲ ಸಿಕ್ಕ ಅವಕಾಶವನ್ನು ಸೇವೆ ಮಾಡುವ ಮೂಲಕ ಸಾಕಾರಗೊಳಿಸಬೇಕು- ಕುಕ್ಕುಡಿಗೆ ರವಿಂದ್ರ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಅಧಿಕಾರ ಶಾಶ್ವತವಲ್ಲ, ನಮಗೆ ಸಿಕ್ಕ ಅವಕಾಶವನ್ನು ಬಡವರ, ನಾಗರೀಕರ ಸೇವೆ ಮಾಡುವ ಮೂಲಕ ಸಾಕಾರಗೊಳಿಸಬೇಕು ಎಂದು ಹೇರೂರು ಪಿಎಸಿಎಸ್ ಅದ್ಯಕ್ಷ ಕುಕ್ಕುಡಿಗೆ ರವಿಂದ್ರ ಹೇಳಿದರು.

 

ಇದನ್ನೂ ಓದಿ; ರೈತ ಸಿರಿ ಯೋಜನೆ; ಪ್ರತಿ ಹೆಕ್ಟೇರ್‌ ಗೆ 10,000 ಪ್ರೋತ್ಸಾಹ ಧನ; ಯೋಜನೆಯ ಉದ್ದೇಶ, ಅರ್ಹತೆ, ಬೇಕಾಗುವ ದಾಖಲೆ ಏನು?

ಹೇರೂರು ಗ್ರಾಮ ಪಂಚಾಯಿತಿಯ ನೂತನ ಅದ್ಯಕ್ಷರಾಗಿ ಆಯ್ಕೆಯಾದ ಅಶ್ವಥ್ ರವರ ಅಭಿನಂಧನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಜನ ವಸತಿ ರಹಿತರಿದ್ದು, ಅವರಿಗೆ ನಿವೇಶನ ನೀಡುವತ್ತ ವಿಶೇಷ ಪ್ರಯತ್ನ ವಹಿಸಬೇಕು ಎಂದರು.

ಇದನ್ನೂ ಓದಿ; ಆನೆ ದಾಳಿ: ಕೇರಳ ವ್ಯಕ್ತಿಯ ಸಾವಿಗೆ ರಾಜ್ಯದಿಂದ ಪರಿಹಾರ; ರಾಜ್ಯ ಸರ್ಕಾರ ಮಾನ-ಮರ್ಯಾದೆ ಎಲ್ಲ ಬಿಟ್ಟಿದೆ

ಕೊಪ್ಪ ತಾಲೂಕು ಕೆಡಿಪಿ ಸದಸ್ಯ ನಾಗೇಶ್ ಅಮೀನ್ ಮಾತನಾಡಿ, ಅಧಿಕಾರದ ಗದ್ದುಗೆ ಏರಿದವರು, ಜಾತಿ, ಮತ, ಪಂಥ ಹಾಗೂ ಧರ್ಮದ ಎಲ್ಲೆಯನ್ನು ಮೀರಿ ಮನುಜ ಮತದ ಭಾವನೆಯನ್ನು ಅಳವಡಿಸಿಕೊಂಡು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದರು.

 

17 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ 10 ಕಾಂಗ್ರೆಸ್ ಬೆಂಬಲಿತ ಹಾಗೂ 7 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಎರಡನೇ ಅವಧಿಯ ಅದ್ಯಕ್ಷ ಸ್ಥಾನಕ್ಕೆ ದೇವಗೋಡು ವಾರ್ಡಿನ ಸದಸ್ಯ ಅಶ್ವಥ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾದರು. ಪಕ್ಷದ ಆಂತರಿಕ ಒಪ್ಪಂದದಂತೆ ಮುಂದಿನ ಹದಿನೈದು ತಿಂಗಳ ಅದ್ಯಕ್ಷರಾಗಿ ಅಶ್ವಥ್ ಕಾರ್ಯ ನಿರ್ವಹಿಸಲಿದ್ದಾರೆ. ಉಪಾದ್ಯಕ್ಷ ಸ್ಧಾನ ಬಿಸಿಎಮ್ (ಎ) ಮಹಿಳೆಗೆ ಮೀಸಲಾಗಿದ್ದು, ನಾಮ ಪತ್ರ ಸಲ್ಲಿಸಿದ್ದ ಸದಸ್ಯೆ ಅಶ್ವಿನಿ ಗಿರೀಶ್ ರವರ ಜಾತಿ ಪ್ರಮಾಣ ಪತ್ರದ ವ್ಯಾಲಿಡಿಟಿ ಮುಗಿದ ಕಾರಣ ನಾಮ ಪತ್ರ ತಿರಸ್ಕೃತಗೊಂಡು, ಉಪಾದ್ಯಕ್ಷರ ಚುನಾವಣಾ ಪ್ರಕ್ರೀಯೆ ಮುಂದೂಡಲ್ಪಟ್ಟಿತು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಅಶೋಕ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಹೇರೂರು ಪಿಎಸಿಎಸ್ ಅದ್ಯಕ್ಷ ಕುಕ್ಕುಡಿಗೆ ರವಿಂದ್ರ, ಕೊಪ್ಪ ತಾಲೂಕು ಕೆಡಿಪಿ ಸದಸ್ಯ ನಾಗೇಶ್ ಅಮೀನ್, ಪಿಎಸಿಎಸ್ ನಿರ್ದೇಶಕ ಕೆ ಪಿ ರಂಗಪ್ಪಗೌಡ, ಗ್ರಾ ಪಂ ನಿರ್ಗಮಿತ ಅದ್ಯಕ್ಷೆ ಶೋಭ, ಮುಖಂಡರುಗಳಾದ ಸುಕುಮಾರ್, ಸಂಜೀವ, ಶಭರೀಶ್ ಇತರರಿದ್ದರು.

 

ಕೊಪ್ಪ: ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷರ ಸದಸ್ಯತ್ವ ವಜಾ!

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯ್ತಿ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷರನ್ನು 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಇಲ್ಲಿನ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷರಾದ ಶಿವಾಕರ್ ಎಸ್ ಶೆಟ್ಟಿಯವರು ಕರ್ತವ್ಯ ಲೋಪ ಹಾಗೂ ಹಣ ದುರುಪಯೋಗ ಸಾಬೀತಾದ ಹಿನ್ನೆಲೆ ಚುನಾವಣೆಗೆ ನಿಲ್ಲದಂತೆ ನಿರ್ಬಂಧಿಸಿ ಆದೇಶ ಹೊರಡಿಸಿ ಸದಸ್ಯತ್ವ ವಜಾಗೊಳಿಸಲಾಗಿದೆ.

ಇದನ್ನೂ ಓದಿ; ಕರ್ನಾಟಕ ಸರ್ಕಾರದಿಂದ ಲ್ಯಾಪ್ ಟಾಪ್ ಭಾಗ್ಯ; ಉಚಿತ ಲ್ಯಾಪ್ ಟಾಪ್ ಪಡೆಯಲು ಅರ್ಜಿ ಸಲ್ಲಿಸಿ

34 ಲಕ್ಷ ಹಣ ದುರಪಯೋಗ!
ಶಿವಾಕರ್ ಎಸ್ ಶೆಟ್ಟಿ ಶಾನುವಳ್ಳಿ ಗ್ರಾ.ಪಂ ಅಧ್ಯಕ್ಷರಾಗಿದ್ದ ಸಮಯದಲ್ಲಿ 2016-17ನೇ ಸಾಲಿನಲ್ಲಿ ಕೆಲ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸದೇ, ಎಂ ಬಿ ದಾಖಲಿಸದೇ ಸರ್ಕಾರದ ಹಣವನ್ನು ಚೆಕ್ ಮೂಲಕ ನಗದೀಕರಿಸಿದ ಆರೋಪವನ್ನು ಎದುರಿಸುತ್ತಿದ್ದರು. ಇದೀಗ ಕರ್ತವ್ಯ ಲೋಪ ಮತ್ತು ಸುಮಾರು 34 ಲಕ್ಷ ರೂ. ಹಣ ದುರುಪಯೋಗ ಸಾಬೀತಾದ ಹಿನ್ನೆಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶ ಹೊರಡಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.