ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಜನವರಿ 22 ರಂದು ನಡೆಯಲಿರುವ ರಾಮ ಮೂರ್ತಿಯ ಪ್ರತಿಷ್ಠಾಪನೆಯ ಸಂಭ್ರಮದಲ್ಲಿ ನಾವೆಲ್ಲರೂ ಭಾಗಿಯಾಗಿ, ಸರ್ವರೂ ಸಮಾನರೂ ಎಂಬ ಶ್ರೀ ರಾಮನ ಆದರ್ಶವನ್ನು ನಾಡಿನಾದ್ಯಂತ ಪಸರಿಸೋಣ ಎಂದು ಕಾಂಗ್ರೆಸ್ ಮುಖಂಡ ಕುಕ್ಕುಡಿಗೆ ರವಿಂದ್ರ ಹೇಳಿದರು.
ಇದನ್ನೂ ಓದಿ; 6 ಸಂಸ್ಥೆಗಳ 5000 ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ; ಯಾವುದೆಲ್ಲಾ ಸಂಸ್ಥೆಗಳಲ್ಲಿ ಹುದ್ದೆ

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ರಾಮ ಹಿಂದೂಗಳ ಪಾಲಿನ ಆರಾದ್ಯ ದೈವ ಮಾತ್ರವಲ್ಲ ಮಹಾತ್ಮ ಗಾಂಧೀಜಿ ಹೇಳುವಂತೆ ರಾಮ ಇಡೀ ಭಾರತಕ್ಕೆ ಪರಮಾದರ್ಶ. ಭಾರತದ ಜನಮಾನಸದಲ್ಲಿ ಅತ್ಯುತ್ತಮ ಆಡಳಿತದೊಂದಿಗೆ ನೆನಪಾಗುವ ಮೊದಲ ಹೆಸರು ರಾಮನದ್ದೇ. ಭಗವಂತನೆಂಬ ಮಾನ್ಯತೆಗೆ ಪಾತ್ರನಾಗಿರುವ ಪುರಾಣೈತಿಹಾಸಿಕ ವ್ಯಕ್ತಿಯೂ ಆಗಿದ್ದಾನೆ ರಾಮ. ಭಾರತದಲ್ಲಷ್ಟೇ ಅಲ್ಲ, ರಾಮನ ಕತೆಗಳು ಹರಡಿರುವ ಇತರ ದೇಶಗಳಲ್ಲಿಯೂ ಈತನಿಗೆ ಉತ್ತಮ ಆಡಳಿತಗಾರನೆಂಬ ಮನ್ನಣೆ ಇದೆ. ಈ ಕಾರಣಕ್ಕಾಗಿಯೇ ಇಂದಿಗೂ ಮಲೇಶಿಯಾ ದೇಶದ ರಾಷ್ಟ್ರಾಧ್ಯಕ್ಷರು ರಾಮನ ಪಾದುಕೆಯ ಧೂಳಿನ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸುತ್ತಾರೆ.

ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ 12,000 ನೆರವು
ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯಾಗುವ ಕನಸು ಮಹಾತ್ಮಾ ಗಾಂಧೀಜಿ ಕಂಡಿದ್ದರು. ಅದನ್ನು ಸ್ವಾತಂತ್ರ‍್ಯಪೂರ್ವ ಹೋರಾಟಗಳಲ್ಲೂ ಸ್ವಾತಂತ್ರ‍್ಯಾ ನಂತರವೂ ಮತ್ತೆ ಮತ್ತೆ ಘೋಷಿಸಿದ್ದರು. ಹಾಗಾಗಿ ರಾಜಕೀಯ ಕ್ಷೇತ್ರದ ಪ್ರತಿನಿಧಿಗಳಾದ ನಾವು ರಾಮನ ಆದರ್ಶಗಳನ್ನು ಅಳವಡಿಸಿಕೊಂಡು ಜಾತಿ, ಧರ್ಮ, ಭಾಷೆಯನ್ನು ಮರೆತು ನಾವೆಲ್ಲ ಮನುಷ್ಯರು, ನಾವೆಲ್ಲರೂ ಸಮಾನರು ಎನ್ನುವ ಭಾವನೆಗಳನ್ನು ಬೆಳೆಸಿಕೊಳ್ಳೋಣ.
ಜನವರಿ 22 ರಂದು ಹೇರೂರು ಗ್ರಾ ಪಂ ವ್ಯಾಪ್ತಿಯ ಸೀಗೋಡಿನಲ್ಲಿ ಶ್ರೀ ರಾಮ ತಾರಕ ಹೋಮ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಹೇರೂರಿನ ಶ್ರೀ ರಾಮ ಭಕ್ತ ವೃಂದದ ಮೂಲಕ ನಡೆಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತಾವು ಭಾಗವಹಿಸುವ ಜೊತೆಗೆ ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರನ್ನು ಕರೆತರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ನಾಗೇಶ್ ಅಮೀನ್, ಪಿಎಸಿಎಸ್ ನಿರ್ಧೇಶಕ ಕೆ ಪಿ ರಂಗಪ್ಪಗೌಡ, ಗ್ರಾ ಪಂ ಸದಸ್ಯ ಅಶ್ವತ್, ಕಾಂಗ್ರೇಸ್ ಮುಖಂಡರುಗಳಾದ ಸುಕುಮಾರ್, ಸಂಜೀವ, ಕೆ ಪಿ ಚಂದ್ರೇಗೌಡ, ಕಿಬ್ಳಿ ರಂಗಪ್ಪಗೌಡ, ಶ¨ರೀಶ್ ಇತರರಿದ್ದರು.
ಮೂಡಿಗೆರೆ: ಕಂಠಪೂರ್ತಿ ಕುಡಿದು ರಸ್ತೆಯ ಮದ್ಯೆ ಮಲಗಿದ ಭೂಪ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಂಠಪೂರ್ತಿ ಕುಡಿದು ರಸ್ತೆಯ ಮದ್ಯೆ ವ್ಯಕ್ತಿಯೋರ್ವ ಮಲಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರಕ್ಕೆ ಹೋಗುವ ರಸ್ತೆ ಹಳಸೆ ಗ್ರಾಮದ ತಿರುವಿನಲ್ಲಿ ನಡೆದಿದೆ.
ರಸ್ತೆಯಲ್ಲಿ ವ್ಯಕ್ತಿ ಮಲಗಿರುವುದನ್ನು ನೋಡಿ ವಾಹನ ಸವಾರರು ಬೆಚ್ಚಿ ಬಿದ್ದಿದ್ದು, ವಾಹನ ಚಾಲಕರು ಎಷ್ಟೇ ಹಾರ್ನ್ ಮಾಡಿದರೂ ಮೇಲಕ್ಕೆ ಏಳದ ಭೂಪ, ಕೆಲ ಕಾಲ ಆತಂಕ ಸೃಷ್ಟಿಸಿದ್ದಾನೆ. ವಾಹನದ ಹಾರ್ನ್ ಗೆ ಕೊನೆಗೂ ಎದ್ದ ವ್ಯಕ್ತಿ, ವಾಹನ ಹೋದ ನಂತರ ಮತ್ತೆ ಅದೇ ಜಾಗದಲ್ಲಿ ಮಲಗಿದ್ದಾನೆ. ವ್ಯಕ್ತಿಯ ಹುಚ್ಚಾಟದಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.















