ಜಯಪುರ: ಕಾಡು ಪ್ರಾಣಿಯ ಮಾಂಸ ಶೇಖರಣೆ : ಆರೋಪಿಗಳ ಬಂಧನ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಕಾಡು ಪ್ರಾಣಿಯ ಮಾಂಸ ಶೇಖರಣೆ ಮಾಡಿಟ್ಟಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಎಲೆಮಡಲು ಗ್ರಾಮದಲ್ಲಿ ನಡೆದಿದೆ. ವಿಜೇಂದ್ರ ನಾಯ್ಕ(44), ವಿಶ್ವನಾಥ(37) ಬಂಧಿತ ಆರೋಪಿಗಳು.

 

ಇದನ್ನೂ ಓದಿ;  ರೈತರೇ ಗಮನಿಸಿ; ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ; ಯಾವುದೆಲ್ಲಾ ಸೌಲಭ್ಯ, ಎಲ್ಲಿ ಅರ್ಜಿ ಸಲ್ಲಿಕೆ?

ಎಲೆಮಡಲು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದ ಕಾಡುಕುರಿಯ ಮಾಂಸವನ್ನು ತಯಾರಿಸಿ, ಮನೆಯಲ್ಲಿ ಶೇಖರಣೆ ಮಾಡಿರುವುದರ ಹಿನ್ನೆಲೆ ಆರೋಪಿಗಳಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ 1.055 ಕೆ.ಜಿ ಕಾಡುಕುರಿಯ ಮಾಂಸವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇದನ್ನೂ ಓದಿ; ಸೇನೆ ಸೇರಲು ಆಸಕ್ತ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ, ಆಯ್ಕೆ ವಿಧಾನ ಹೇಗೆ?

ಮಗ ಮಾಡಿದ ತಪ್ಪಿಗೆ ತಾಯಿ-ಮಗಳಿಗೆ ಸಾಮಾಜಿಕ ಬಹಿಷ್ಕಾರ! ಇದೆಂಥ ಶಿಕ್ಷೆ?

 

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ತಮ್ಮನ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಕನ ಕುಟುಂಬಕ್ಕೆ ಗ್ರಾಮದಲ್ಲಿರುವ ಕೆಲ ಮುಖಂಡರು ಬಹಿಷ್ಕಾರ ಹಾಕಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡೆದಿದೆ.

ಇದನ್ನೂ ಓದಿ; ರೈತ ಸಿರಿ ಯೋಜನೆ; ಪ್ರತಿ ಹೆಕ್ಟೇರ್‌ ಗೆ 10,000 ಪ್ರೋತ್ಸಾಹ ಧನ; ಯೋಜನೆಯ ಉದ್ದೇಶ, ಅರ್ಹತೆ, ಬೇಕಾಗುವ ದಾಖಲೆ ಏನು?

 

ಎರಡು ವರ್ಷಗಳ ಹಿಂದೆ ಭೂಮಿ ಹುಣ್ಣಿಮೆ ದಿನ ಸೊರಬದ ಕುರುವಳ್ಳಿ ಗ್ರಾಮದಲ್ಲಿ ಅಪಘಾತ ನಡೆದು ಟಿವಿಎಸ್ ಸವಾರ ಮಂಜುನಾಥ್ ಸಾವನ್ನಪ್ಪಿದ್ದರು. ಆದರೆ ತನಿಖೆಯ ವೇಳೆ ಪ್ರಕರಣ ತಿರುವು ಪಡೆದು ಅದು ಅಪಘಾತವಲ್ಲ ಕೊಲೆ ಎಂಬುದು ಸಾಬೀತಾಗಿತ್ತು. ಪ್ರಕರಣದಲ್ಲಿ ಮಂಜುನಾಥ್ ಅಳಿಯ ಪ್ರವೀಣ್ ಶಿಕ್ಷೆಗೆ ಒಳಗಾಗಿದ್ದಾನೆ.

ಇದನ್ನೂ ಓದಿ; ಆನೆ ದಾಳಿ: ಕೇರಳ ವ್ಯಕ್ತಿಯ ಸಾವಿಗೆ ರಾಜ್ಯದಿಂದ ಪರಿಹಾರ; ರಾಜ್ಯ ಸರ್ಕಾರ ಮಾನ-ಮರ್ಯಾದೆ ಎಲ್ಲ ಬಿಟ್ಟಿದೆ

ಇದೇ ಘಟನೆಯನ್ನು ಮುಂದೆ ಇಟ್ಟುಕೊಂಡು ಗ್ರಾಮದಲ್ಲಿರುವ ಮುಖಂಡರು ಸರೋಜಮ್ಮಳ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಮನೆಗೆ ನೀಡಿದ ವಿದ್ಯುತ್, ನೀರಿನ ಸಂಪರ್ಕ, ಯಾರು ಜೊತೆ ಮಾತನಾಡದಂತೆ ಯಾವುದೇ ಶುಭ ಕಾರ್ಯಗಳಿಗೆ ಇವರನ್ನು ಆಹ್ವಾನಿಸದಂತೆ ಮುಖಂಡರು ಸೂಚಿಸಿದ್ದಾರೆ. ಇವರ ಜೊತೆ ಯಾರಾದ್ರೂ ಮಾತನಾಡಿದ್ರೆ ಅವರಿಗೆ 1000 ಸಾವಿರ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರಂತೆ.

ಜಿಲ್ಲಾಧಿಕಾರಿಗಳಿಗೆ ಮನವಿ:
ಇದರಿಂದ ಕಂಗಾಲಾಗಿರುವ ಕುಟುಂಬವು ವಾಪಸ್ ತಮ್ಮ ಮನೆಗೆ ಹೋಗಿ ಬದುಕಬೇಕು. ಈ ಬಹಿಷ್ಕಾರದಿಂದ ತಮ್ಮನ್ನು ಮುಕ್ತಗೊಳಿಸಿ ಎಂದು ಶಿವಮೊಗ್ಗ ಡಿಸಿ ಗುರುದತ್ತ ಹೆಗ್ಗಡೆ ಅವರಿಗೆ ಸರೋಜಮ್ಮ ಮನವಿ ಮಾಡಿದ್ದಾಳೆ. ತಾಯಿಗೆ ಮಗಳು ಕೂಡಾ ಸಾಥ್ ಕೊಟ್ಟಿದ್ದಾರೆ.

ಸದ್ಯ ಈ ಬಹಿಷ್ಕಾರದಿಂದ ತಮ್ಮನ್ನು ರಕ್ಷಣೆ ಮಾಡಬೇಕೆಂದು ಡಿಸಿಗೆ ಮನವಿ ಮಾಡಿದ್ದಾರೆ. ಡಿಸಿ ಅವರು ತತಕ್ಷಣ ಸ್ಥಳೀಯ ಪೊಲೀಸರಿಗೆ ಮತ್ತು ತಹಸೀಲ್ದಾರ್ ಅವರಿಗೆ ಬಹಿಷ್ಕಾರ ಕುರಿತು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಕುಟುಂಬಕ್ಕೆ ಬಹಿಷ್ಕಾರ ಹಾಕುವ ಕಾನೂನು ಹಕ್ಕು ಗ್ರಾಮಸ್ಥರಿಗೆ ಇಲ್ಲ. ಮಾನಸಿಕವಾಗಿ ಬಹಿಷ್ಕಾರದ ಅಸ್ತ್ರದ ಮೂಲಕ ಕುಟುಂಬಕ್ಕೆ ಚಿತ್ರಹಿಂಸೆ ನೀಡಲಾಗುತ್ತಿದೆ. ಸದ್ಯ ನೊಂದ ಕುಟುಂಬಸ್ಥರು ಶಿವಮೊಗ್ಗ ಡಿಸಿ ಕಚೇರಿ ಬಾಗಿಲು ತಟ್ಟಿದ್ದಾರೆ. ಈ ಬಹಿಷ್ಕಾರದಿಂದ ಕುಟುಂಬವನ್ನು ಮುಕ್ತಗೊಳಿಸುವುದಕ್ಕೆ ಡಿಸಿ ಏನೆಲ್ಲಾ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.