ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ತುಂಗಾ ನದಿ ತೀರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಗೆ ಬ್ರೇಕ್ ಹಾಕಲು ಪೊಲೀಸರು ನದಿ ಬಳಿ ಹೋಗೋ ದಾರಿಗೆಲ್ಲಾ ಜೆಸಿಬಿ ಮೂಲಕ ಟ್ರಂಚ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಮನೆಗೆ ಜೈವಿಕ ಅನಿಲ ಘಟಕ ಸೇರಿದಂತೆ ಸಬ್ಸಿಡಿ; ಯಾರಿಗೆ ಸಬ್ಸಿಡಿ? ಎಷ್ಟು ಸಹಾಯಧನ?

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ತುಂಗಾನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ನದಿಯಿಂದ ರಾತ್ರಿ ಹೊತ್ತು ವಾಹನದಲ್ಲಿ ಮರಳು ಸಂಗ್ರಹಿಸಿ ಸಾಗಣೆ ಮಾಡಲಾಗುತ್ತಿದೆ. ಅಕ್ರಮ ದಂಧೆ ಕುರಿತಂತೆ ಪೊಲೀಸ್ ಇಲಾಖೆಗೆ ಸಾರ್ವಜನಿಕರು ನಿರಂತರ ದೂರು ನೀಡಿದ ಹಿನ್ನೆಲೆಯಲ್ಲಿ ಇದೀಗ ಕೊಪ್ಪ DYSP ಬಾಲಾಜಿ ಸಿಂಗ್ ನೇತೃತ್ವದಲ್ಲಿ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ ಪಡೆದಿದ್ದಾರೆ.

ಮಾಹಿತಿ ನೀಡಲು ಸ್ಥಳಿಯ ಯುವಕರ ಬಳಕೆ:
ತುಂಗಾ ನದಿ ತಟದಲ್ಲಿ ನಿತ್ಯ ಲಾರಿ, ಟಿಪ್ಪರ್, ಟ್ರ್ಯಾಕ್ಟರ್ ನಲ್ಲಿ ಹತ್ತಾರು ಲೋಡ್ ಮರಳು ಸಾಗಾಟ ಮಾಡುತ್ತಿದ್ದಾರೆ. ಈ ಅಕ್ರಮ ಮರಳು ದಂಧೆಯನ್ನು ರಾತ್ರಿ ವೇಳೆ ಮಾಡುತ್ತಿದ್ದು, ಪಕ್ಷಾತೀತವಾಗಿ ಎಲ್ಲರೂ ಹೊಂದಾಣಿಕೆಯಲ್ಲಿ ಕೋಟ್ಯಾಂತರ ಮೌಲ್ಯದ ಮರಳನ್ನು ರಾತ್ರಿ ವೇಳೆ ಕಾಡಿನ ದಾರಿಯಲ್ಲಿ ಸಾಗಿಸಿ ಸರ್ಕಾರಿ ಜಾಗದಲ್ಲಿ ಶೇಖರಿಸಿ ಬಳಿಕ ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಟೆಸ್ಲಾ ಪ್ರಿಯರಿಗೆ ಬಂಪರ್ ಸುದ್ದಿ; ಭಾರತಕ್ಕೆ ಬರುತ್ತಿದೆ ಎರಡು ಹೊಸ ಕಾರುಗಳು, ಮಾರಾಟ ಯಾವಾಗ?
ಇನ್ನು ವಾಹನಗಳಿಗ ಮರಳು ತುಂಬುವ ವೇಳೆ ಯಾರದ್ದರೂ ಬಂದಲ್ಲಿ ಮಾಹಿತಿ ನೀಡಲು ರಸ್ತೆಯುದ್ದಕ್ಕೂ ಅಲ್ಲಲ್ಲೇ ಇಬ್ಬರು ಹುಡುಗರನ್ನ ದಂಧೆಕೋರರು ನಿಲ್ಲಿಸುತ್ತಾರೆ ಎನ್ನಲಾಗಿದೆ.
ಜೆಸಿಬಿ ಮೂಲಕ ಟ್ರೆಂಚ್ ಮಾಡಿಸಿದ ಪೊಲೀಸರು:
ಅಕ್ರಮ ಮರಳು ಸಾಗಾಟದ ಕುರಿತು ನಿರಂತರ ದೂರು ಬಂದ ಹಿನ್ನೆಲೆ ಪೊಲೀಸರು ನದಿ ಬಳಿ ಹೋಗೋ ದಾರಿಗೆಲ್ಲಾ ಜೆಸಿಬಿ ಮೂಲಕ ಟ್ರಂಚ್ ನಿರ್ಮಿಸಿದ್ದು, ಈ ಕುರಿತು ಪೊಲೀಸರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿ ನೀಡಿದ್ದಾರೆ.













