ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಸ್ವೆಟರ್ ವಿತರಣೆ:
ಜಯಪುರ: 78ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ನಕ್ಸಲ್ ನಿಗ್ರಹ ಪಡೆ ಜಯಪುರ ವತಿಯಿಂದ ಕವನಹಳ್ಳ, ಮಣ್ಣಿನಪಾಲ್ ಸರ್ಕಾರಿ ಪ್ರಾಥಮಿಕ ಹಾಗೂ ಅಂಗನವಾಡಿ ಶಾಲೆಯ ಮಕ್ಕಳಿಗೆ ಜಯಪುರ ಎ.ಎನ್.ಎಫ್ ಕ್ಯಾಂಪ್ ನ ಉಸ್ತುವಾರಿ ಅಧಿಕಾರಿಯಾದ ಇನ್ಸ್ಪೆಕ್ಟರ್ ಪಾರ್ಶ್ವನಾಥ ಅವರು ಮಕ್ಕಳಿಗೆ ಸ್ವೆಟರ್ ಮತ್ತು ಸಿಹಿ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಎ.ಎನ್.ಎಫ್ ಕ್ಯಾಂಪ್ ನ ಸಬ್ ಇನ್ಸ್ಪೆಕ್ಟರ್ ಸಂಗಮೇಶ ಹಾಗೂ ಸಿಬ್ಬಂದಿ ವರ್ಗದವರು, ಶಾಲಾ ಶಿಕ್ಷಕರು, ಮಕ್ಕಳು ಇದ್ದರು.


ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿಗಳಿಗೆ 10,000 ಸ್ಕಾಲರ್ ಶಿಪ್; ಈ ಅರ್ಹತೆ ಕಡ್ಡಾಯ! ಏನದು ಇಲ್ಲಿದೆ ನೋಡಿ
ಶಾಲಾ ಹಳೆ ವಿದ್ಯಾರ್ಥಿಗಳಿಂದ ಟೈ ಹಾಗೂ ಬೆಲ್ಟ್ ವಿತರಣೆ:
ಮೆಣಸಿನಹಾಡ್ಯ: 78 ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಮೆಣಸಿನಹಾಡ್ಯದ ಹಳೆ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಈ ಕಾರ್ಯಕ್ರಮದ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಗೋಪಾಲ ಕೆ.ಎಮ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರೇಮಾ, ಹಾಗೂ ಲ್ಯಾಂಪ್ಸ್ ನಿರ್ದೇಶಕರಾದ ಯೋಗೀಶ್ ಎಮ್. ಸಿ, ಹಾಗೂ ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳಾದ ಶಶಾಂಕ್ ಜಿ, ಅಶ್ವಥ್ ಜಿ. ಎಮ್, ಮಧುರಾಜ್ ಜೆ, ರಾಕೇಶ್ ಜಿ. ಎ ಇದ್ದರು.

ಇದನ್ನೂ ಓದಿ: KSB ಯಿಂದ ಇಂತಹ ವಿದ್ಯಾರ್ಥಿಗಳಿಗೆ 25,000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
200 ಅಡಿ ಟವರ್ ಮೇಲೇರಿ ಧ್ವಜ ಹಾರಿಸಿದ ವ್ಯಕ್ತಿ:
ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಎನ್.ಆರ್.ಪುರ ತಾಲ್ಲೂಕಿನ ಶೆಟ್ಟಿಕೊಪ್ಪದ ಕಡಹಿನಬೈಲು ಗ್ರಾಮ ಪಂಚಾಯಿತಿ ಹಿಂಭಾಗದ 200 ಅಡಿ ಎತ್ತರದ ಬಿಎಸ್‌ಎನ್‌ಎಲ್ ಟವರ್ ಮೇಲೇರಿ ತುತ್ತ ತುದಿಯಲ್ಲಿ ಹಿರೇಬೀಸು ಜೋಯಿ ಎಂಬುವವರು ಧ್ವಜವನ್ನು ಹಾರಿಸಿದ್ದಾರೆ. ಕಳೆದ 13 ವರ್ಷಗಳಿಂದ ಗ್ರಾ.ಪಂ ಪಕ್ಕದಲ್ಲಿರುವ ಟವರ್ ಮೇಲೇರಿ ಧ್ವಜಾರೋಹಣ ಮಾಡಿ, ನಂತರ ಸಂಜೆ ಧ್ವಜವನ್ನು ಇಳಿಸುವ ಕಾರ್ಯ ಮಾಡುತ್ತಾ ಬಂದಿದ್ದೇನೆ. ಧ್ವಜಕ್ಕೆ ಗೌರವ ಕೊಡುವುದು, ರಾಷ್ಟ್ರ ಪ್ರೇಮ ಮೆರೆಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಕೂಡ ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ನಮ್ಮ ರಾಷ್ಟ್ರ ಸದೃಢರಾಗಲು ಇಂದಿನ ಯುವಕರು ಪಣತೊಡಬೇಕೆಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಹೊಸ ಆದೇಶ; ಈ ಕೆಲಸ ಮಾಡಲು ಡೆಡ್ ಲೈನ್ ಫಿಕ್ಸ್ ಮಾಡಿದ ಸರ್ಕಾರ; ಏನದು? ಇಲ್ಲಿದೆ ನೋಡಿ












