ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೊಬ್ಬರು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ಮಮತಾ ಮೃತ ದುರ್ದೈವಿ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿದವರಿಗೆ ಬಂತು ಮತ್ತೊಂದು ಸುದ್ದಿ; RC, ವಿಮೆ ಕುರಿತು ಬಿಗ್ ಅಪ್ಡೇಟ್

ಏನಿದು ವರದಕ್ಷಿಣೆ ಕಿರುಕುಳ:
4 ವರ್ಷದ ಹಿಂದೆ ಮದುವೆಯಾದ ಮಮತಾಗೆ ಮದುವೆ ವೇಳೆ 110 ಗ್ರಾಂ ಚಿನ್ನ ನೀಡಿ ಪೋಷಕರು ಮದುವೆ ಮಾಡಿಸಿ ಕೊಟ್ಟಿದ್ದರು. ಮದುವೆಯ ಬಳಿಕ ಹೆಚ್ಚಿನ ಹಣ ಕೊಡುವಂತೆ ಗಂಡನ ಮನೆಯವರು ಮಮತಾಳಿಗೆ ಮಾನಸಿಕ-ದೈಹಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಹಿಂಸೆ ತಾಳಲಾರದೆ ಮಮತಾ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದು, ಈ ನಡುವೆ ಕುಟುಂಬದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯತಿ ಮೂಲಕ ಮತ್ತೆ ಗಂಡನ ಮನೆ ಸೇರಿದ್ದರು.
ಕಳೆದ ವರ್ಷ ತೋಟದ ನಿರ್ವಹಣೆಗೆಂದು ಮಮತಾ ಪತಿ ಅವಿನಾಶ್ ಮಮತಾ ಪೋಷಕರಿಂದ 50 ಸಾವಿರ ಪಡೆದುಕೊಂಡಿದ್ದ. ಇದಾದ ಬಳಿಕ ಜನವರಿ 25 ರಂದು ಮಮತಾಗೆ ಪಿಡ್ಸ್ ಬಂದಿದೆ ಎಂದು ಗಂಡ ಅವಿನಾಶ್ ಆಸ್ಪತ್ರೆಗೆ ಸೇರಿಸಿದ್ದ. ಆದರೆ, ಅವಿನಾಶ್ ಚಿಕ್ಕಪ್ಪ ಮಮತಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಮಮತಾ ಪೋಷಕರಲ್ಲಿ ಹೇಳಿಕೆ ನೀಡಿದ್ದಾರೆ. ಎರಡು ತಿಂಗಳಿಂದ ಫಾದರ್ ಮುಲ್ಲರ್, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದ ಗಂಡನ ಮನೆಯವರು ಆಕೆ ಹುಷಾರಾಗುವ ಮುನ್ನವೇ ಮನೆಗೆ ಕರೆದುಕೊಂಡು ಬಂದಿದ್ದು ಇದಾದ ಕೆಲ ದಿನದಲ್ಲೇ ಮಮತಾ ಕೊನೆಯುಸಿರು ಎಳೆದಿದ್ದಾರೆ.
ಇದನ್ನೂ ಓದಿ: ಬಿಜೆಪಿಯಿಂದ 6 ವರ್ಷ ಕಾಲ ಬಸನಗೌಡ ಪಾಟೀಲ್ ಉಚ್ಚಾಟನೆ!
ಇತ್ತ ಗಂಡ ಮಮತಾಗೆ ಪಿಡ್ಸ್ ಬಂದಿದೆ ಎಂದಿದ್ದರೆ, ಅವಿನಾಶ್ ಚಿಕ್ಕಪ್ಪ ಮಮತಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಿರುವ ಆಧಾರದ ಮೇಲೆ ಅನುಮಾನ ಗೊಂಡ ಮಮತಾ ಅಣ್ಣ ಮಂಜುನಾಥ್ ಮಮತಾ ಗಂಡ, ಅತ್ತೆ-ಮಾವನ ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ತನ್ನ ಸಹೋದರಿಗೆ ಚಿತ್ರ ಹಿಂಸೆ ನೀಡಿ ಆಕೆಯನ್ನು ನೇಣಿಗೆ ಹಾಕಿ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮಮತಾ ಪೋಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ವಿತರಣೆ!; ಸರ್ಕಾರದಿಂದ ಮಹತ್ವದ ನಿರ್ಧಾರ












