ಎಳನೀರು: (ನ್ಯೂಸ್ ಮಲ್ನಾಡ್ ವರದಿ) ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗಲಿ 30 ಲಕ್ಷ ರೂ. ಗಿಂತ ಅಧಿಕ ನಷ್ಟ ಸಂಭವಿಸಿರುವ ಘಟನೆ ಮಲವಂತಿಗೆ ಗ್ರಾಮದ ಎಳನೀರು ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಜಾಬ್ ಆಫರ್; ಪಿಯುಸಿ ವಿದ್ಯಾರ್ಹತೆ, ಆಕರ್ಷಕ ಸಂಬಳ

ಪ್ರಶಾಂತ್ ವೈ. ಆರ್ ಅವರ ಮನೆಯಲ್ಲಿ ಘಟನೆ ಈ ನಡೆದಿದ್ದು, ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿದ್ದ ಸುಮಾರು 2 ಲಕ್ಷ ರೂ. ಮೊತ್ತದ ಅಡಕೆ, ಒಂದು ಲಕ್ಷ ರೂ ಮೌಲ್ಯದ ಕಾಫಿ ಬೀಜ, 50 ಸಾವಿರ ರೂ. ಮೊತ್ತದ ಕಾಳು ಮೆಣಸು, ಬಟ್ಟೆ ಬರೆ, ಪಾತ್ರೆ, ದಾಖಲೆ ಇತ್ಯಾದಿಗಳು ನಾಶವಾಗಿವೆ.
ಇದನ್ನೂ ಓದಿ: ಈ ಯೋಜನೆಯಲ್ಲಿ ಶೇ. 60% ರಷ್ಟು ಸಹಾಯಧನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ
ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದು, ಪ್ರಸ್ತುತ ಇವರಿಗೆ ನೆಲೆಸಲು ಮನೆ ಇಲ್ಲದಂತಾಗಿದೆ. ಸಹೋದರನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಈ ಬಗ್ಗೆ ತಹಸೀಲ್ದಾರ್, ವಿಎ, ಪಿಡಿಒ ಇವರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಮಲವಂತಿಗೆ ಗ್ರಾಪಂ ಅಧ್ಯಕ್ಷ ಪ್ರಕಾಶ್ ಜೈನ್, ಕಳಸ ಮೆಸ್ಕಾಂ ಉಪ ವಿಭಾಗದ ಎಇ ಕೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: SBI ಯಲ್ಲಿ ಜಾಬ್ ಆಫರ್; 17,900 ಸಂಬಳ, ವಿದ್ಯಾರ್ಹತೆ, ಅರ್ಜಿ ಲಿಂಕ್ ಇಲ್ಲಿದೆ












