ಶೃಂಗೇರಿ: ಕೆಟ್ಟು ನಿಂತಿರುವ ಆಡಳಿತ ವ್ಯವಸ್ಥೆ: ಪಟ್ಟಣ ಪಂಚಾಯಿತಿ ಸದಸ್ಯನ ಏಕಾಂಗಿ ಪ್ರತಿಭಟನೆ

ಶೃಂಗೇರಿ ವಾರ್ಡ್‌ ನಂಬರ್‌ 1 ರಲ್ಲಿ ಹೆದ್ದಾರಿ ಕಾಮಗಾರಿಯಿಂದ ಸಿಕ್ಕಪಟ್ಟೆ ಧೂಳಿನ ಮಾಯವಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್‌ ಅಹಮ್ಮದ್‌ ಆರೋಪಿಸಿ ತಾಲೂಕು ಕಚೇರಿ ಮುಂಬಾಗ ಪ್ರತಿಭಟನೆ ನಡೆಸಿದಾರೆ.


ಇದನ್ನೂ ಓದಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಜಾಬ್‌ ಆಫರ್‌; ಪಿಯುಸಿ ವಿದ್ಯಾರ್ಹತೆ, ಆಕರ್ಷಕ ಸಂಬಳ


ಆರೋಪದಲ್ಲಿ ಏನಿದೆ?;
ಶೃಂಗೇರಿ ವಾರ್ಡ್‌ ನಂಬರ್‌ 1 ರಲ್ಲಿ ಸಿಕ್ಕಪಟ್ಟೆ ಧೂಳಾಗಿದೆ. ಹೈವೇ ಅವರನ್ನು ಕೇಳಿದಾಗ ಒಂದು ಬಾರಿ ನೀರು ಹಾಕುತ್ತಾರೆ. ಆದರೆ, ಈ ಬಗ್ಗೆ ತಾಲೂಕು ಕಚೇರಿಯಲ್ಲಿ ವಿಚಾರಿಸಿದಾಗ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಕಾಮಗಾರಿಯ ಧೂಳಿನ ಬಗ್ಗೆ ಕಂಪ್ಲೇಂಟ್‌ ಮಾಡುವವರಿಗೆ ಹೆದುರಿಸುತ್ತಿದ್ದಾರೆ, ಆದರೆ, ಹೈವೆ ಕಾಮಗಾರಿಯವರಿಗೆ ಹೇಳುತ್ತಿಲ್ಲ.

ಶೃಂಗೇರಿ ತಾಲೂಕು ಆಸ್ಪತ್ರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪಟ್ಟಣ ಪಂಚಾಯಿತಿ ಸದಸ್ಯ:
ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರಾಗಲಿ ಅಥವಾ ಮಕ್ಕಳು ವೈದ್ಯರಾಗಲಿ ಇಲ್ಲ. ಕೊಪ್ಪ ಅಥವಾ ತೀರ್ಥಹಳ್ಳಿಗೆ ಹೋಗಬೇಕು. ಈ ಆಸ್ಪತ್ರೆಗೆ ವೈದ್ಯರೇ ಬರುವುದಿಲ್ಲ ಅನ್ನುವ ಪರಿಸ್ಥಿತಿ ಆಗಿದೆ. ಈ ಎಲ್ಲಾ ಸಮಸ್ಯೆ ಬಗ್ಗೆ ತಾಲೂಕು ಕಚೇರಿಯಲ್ಲಿ ಹೇಳಲು ಬಂದರೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ.


ಇದನ್ನೂ ಓದಿ: ಈ ಯೋಜನೆಯಲ್ಲಿ ಶೇ. 60% ರಷ್ಟು ಸಹಾಯಧನ; ಜಸ್ಟ್‌ ಈ ರೀತಿ ಅರ್ಜಿ ಸಲ್ಲಿಸಿ


ಸರ್ಕಾರದ ಹಣ ಹಾಕಿ ಮಾಡಿದ ಸಂತೆಯ ಮಾರುಕಟ್ಟೆ, ಕುರುಬಗೇರಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವೂ ಹಾಳಾಗಿದೆ.

ಹಾಗೆಯೇ ಹೈವೆ ಕಾಮಗಾರಿಯಿಂದ ಬಡವರ ಜಾಗವನ್ನು ನೆಲಸಮ ಮಾಡುತ್ತಿದ್ದಾರೆ. ಆದರೆ, ಪ್ರಭಾವಿಯವರ ಜಾಗವನ್ನು ಏನು ಮಾಡುತ್ತಿಲ್ಲ ಅವರು ಸರ್ಕಾರದ ಜಾಗವನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.


ಇದನ್ನೂ ಓದಿ: SBI ಯಲ್ಲಿ ಜಾಬ್‌ ಆಫರ್‌; 17,900 ಸಂಬಳ, ವಿದ್ಯಾರ್ಹತೆ, ಅರ್ಜಿ ಲಿಂಕ್‌ ಇಲ್ಲಿದೆ


ಹೀಗಾಗಿ ಎಲ್ಲಾ ವ್ಯವಸ್ಥೆ ಸರಿ ಆಗಬೇಕು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್‌ ಅಹಮ್ಮದ್‌ ಪ್ರತಿಭಟನೆ ನಡೆಸಿದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.