ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ವೈದ್ಯಾಧಿಕಾರಿ ಡಾ. ಎಲ್ಡೋಸ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದು, ಇಂದು ಬೆಳಗ್ಗೆ ಮಹಿಳೆಯ ಕುಟುಂಬಸ್ಥರಿಗೆ ರೆಡ್ ಹ್ಯಾಂಡ್ ಆಗಿ ಬಾಳೆಹೊನ್ನೂರು ವಸತಿಗೃಹದಲ್ಲಿ ಸಿಕ್ಕಿಬಿದ್ದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.
ವರ್ಗೀಸ್ ಗೆ ಗೇಟ್ ಪಾಸ್ ಆದೇಶ

ಈ ಸಂಬಂಧ ಡಾ. ವರ್ಗೀಸ್ ಅನ್ನು ನರಸಿಂಹರಾಜಪುರ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಹುದ್ದೆಯಿಂದ ವಜಾ ಮಾಡಲಾಗಿದೆ. ಪೊಲೀಸರ ಕ್ರಮದ ನಂತರ ಉಳಿದ ಇಲಾಖಾ ಕ್ರಮ ವಹಿಸಲಾಗುವುದು ಎಂದು ಡಿ ಎಚ್ಓ ಆಸ್ವತ್ ಬಾಬು ನ್ಯೂಸ್ ಮಲ್ನಾಡ್ ಗೆ ತಿಳಿಸಿದ್ದಾರೆ. ಡಾ. ಎಲ್ಡೋಸ್ ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354 ಅನ್ವಯ ಕೇಸ್ ದಾಖಲಾಗಿತ್ತು. ಸದ್ಯ ಆರೋಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಘಟನೆಯ ವಿವರ:
ನೊಂದ ಮಹಿಳೆಯೂ ಇಲಾಖೆಯ ಡಿ ದರ್ಜೆ ಸಿಬ್ಬಂದಿ ಆಗಿದ್ದು ಬಾಳೆಹೊನ್ನೂರು ವಸತಿ ಗೃಹಕ್ಕೆ ಬರಲು ಹೇಳಿದ್ದನು, ಈತನ ಬಗ್ಗೆ ತಿಳಿದಿದ್ದ ಮಹಿಳೆ ತನ್ನ ಗಂಡ ಹಾಗೂ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು, ಬಾಳೆಹೊನ್ನೂರು ಪಟ್ಟಣದ ಸರ್ಕಾರಿ ವೈದ್ಯರ ವಸತಿಗೃಹದಲ್ಲಿ ಮಹಿಳೆಯೊಂದಿಗೆ ಏಕಾಂತ ಸಮಯ ಕಳೆಯಲು ತಯಾರಾಗಿದ್ದಾಗ ಮಹಿಳೆಯ ಪತಿ ಹಾಗೂ ಸಂಬಂಧಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು, ಈತನ ಘನಂದಾರಿ ಕೆಲಸಕ್ಕೆ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮಹಿಳೆಯ ಜೊತೆ ರೂಮ್ ನಲ್ಲಿ ಏಕಾಂತದಲ್ಲಿದ್ದಾಗ ಸಿಕ್ಲಿ ಬಿದ್ದ ಡಾಕ್ಟರ್ – ವೀಡಿಯೋ ನೋಡಲು ಕ್ಲಿಕ್ ಮಾಡಿ
ಈತನ ವಿರುದ್ಧ ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ಸಂಬಂಧ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿದ್ದವು, ನಾಯಿ ಬಾಲ ಡೊಂಕು ಎಂಬಂತೆ ತನ್ನ ಬುದ್ಧಿಯನ್ನು ಬಿಡದ ಕಾರಣ ಇಂದು ಸಾರ್ವಜನಿಕವಾಗಿ ಧರ್ಮದೇಟು ಬೀಳುವಂತಾಗಿದೆ.
ಹಾಲಶ್ರೀ ಅರೆಸ್ಟ್ ಮಾಡಲು ಶೃಂಗೇರಿ ಅರ್ಚಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು
ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ. ಹಾಲಾಶ್ರೀ ಕಾರ್ಯಾಚರಣೆಯೇ ರಣ ರೋಚಕವಾಗಿದೆ. 8 ದಿನದಿಂದ ತಲೆಮರೆಸಿಕೊಂಡಿದ್ದ ಹಾಲಶ್ರೀ ಬೇಟೆಗೆ ಸಿಸಿಬಿ ಹೇಗೆಲ್ಲಾ ಪ್ಲಾನ್ ಮಾಡಿತ್ತು ಗೊತ್ತಾ?
8 ದಿನ ಹಾಲಶ್ರೀ ನಿಂತಲ್ಲಿ ನಿಂತಿರಲಿಲ್ಲ., ಟ್ರೈನ್ ನಲ್ಲೇ ಅಡ್ಡಾಡುತ್ತಿದ್ದರು, ಖಾವಿ ಕಳಚಿ ಟೀ ಶರ್ಟ್ ಪ್ಯಾಂಟ್ ಧರಿಸಿ ಮೈಸೂರಿನಿಂದ ಹಾಲಶ್ರೀ ಎಸ್ಕೇಪ್ ರೂಟ್ ಶುರುವಾಗಿತ್ತು, ಅವರು ಏಕಾಂಗಿಯಾಗಿ ಟ್ರಾವೆಲ್ ಮಾಡುತ್ತಿದ್ದರು. ಹೈದ್ರಾಬಾದ್, ಪುಣೆ, ಗಂಜಂ, ಕಟಕ್ ಕಡೆಗೆ ಪ್ರಯಾಣಿಸಿದ್ದರು. ಒಡಿಶಾದ ಭುವನೇಶ್ವರದಿಂದ ಬಿಹಾರದ ಬುದ್ಧ ಗಯಾಗೆ ತೆರಳಬೇಕಿತ್ತು. ಸಿಸಿಬಿ ಕಟಕ್ ಬಳಿ ರೈಲಲ್ಲಿ ಹೋಗ್ತಿದ್ದಾಗಲೇ ಲಾಕ್ ಮಾಡಿದ್ದಾರೆ. ಸಿಸಿಬಿ ಪೊಲೀಸರಿಗೆ ಒಡಿಶಾ ಪೊಲೀಸರು, ರೈಲ್ವೆ ಪೊಲೀಸರ ಸಾಥ್ ನೀಡಿದರು. ಸಿಸಿಬಿ ಟೀಂ ಬೆಳಗ್ಗೆ 10.15 ರ ಸುಮಾರಿಗೆ ಹಾಲಶ್ರೀ ಲಾಕ್ ಮಾಡಿದ್ದಾರೆ. ಕಟಕ್ ನಲ್ಲಿ ಬಂಧನ ಪ್ರಕ್ರಿಯೆ ಮುಗಿಸಿ ರಾತ್ರಿ ಕರೆತಂದಿದ್ದಾರೆ.
ಸಾಕ್ಷ್ಯ ಸಿಗದಂತೆ ಚಾಲಾಕಿತನ ಮೆರೆದಿದ್ದ ಹಾಲಶ್ರೀ:
ಸ್ವಾಮೀಜಿ 8 ದಿನದಿಂದ ಟೆಕ್ನಿಕಲ್ ಎವಿಡೆನ್ಸ್ ಸಿಗದಂತೆ ಚಾಲಾಕಿತನ ಮೆರೆದಿದ್ದರು, ಹೈದ್ರಾಬಾದ್ ಕಡೆಯಿಂದ ಉತ್ತರ ಭಾರತದ ಕಡೆ ಹೋಗಿರೋ ಮಾಹಿತಿ ಸಿಕ್ಕಿತ್ತು. ಹಾಲಶ್ರೀಗೆ ಮಠ, ದೇವಸ್ಥಾನಗಳ ಬಗ್ಗೆ ಚೆನ್ನಾಗಿ ಮಾಹಿತಿ ಇದ್ದುದರಿಂದ ಆಶ್ರಯ ಪಡೆಯಲು ಮಠ, ದೇವಸ್ಥಾನಗಳಿಗೇ ಹೋಗಿರುವ ಅನುಮಾನ ಮೂಡಿಬಂದಿತ್ತು.
ಸಿಸಿಬಿಯ ಶಿವಕುಮಾರ್, ರಾಘವೇಂದ್ರ, ಸುರೇಶ್, ಅಣ್ಣಪ್ಪ ಅರ್ಚಕರ ವೇಷ ಹಾಕಿ ಪ್ರಮುಖ ದೇವಸ್ಥಾನ, ಮಠಗಳಿಗೆ ತೆರಳಿ ಪರಿಶೀಲನೆ ಮಾಡಿದ್ದರು ಅದರಂತೆ ಟೀಂ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನಕ್ಕೆ ಬಂದಿತ್ತು.
ಶೃಂಗೇರಿ ಅರ್ಚಕರ ಪೋಷಾಕಿನಲ್ಲಿ ಹೋಗಿದ್ದ ಸಿಸಿಬಿ ಟೀಂ:
ಹಾಲಶ್ರೀ ಪುರಿ ದೇಗುಲದ ಬಳಿಯೇ ಇರೋದು ಕನ್ಫರ್ಮ್ ಆಗಿ ಸಿಸಿಬಿ ಟೀಂ, ಗಣೇಶ ಹಬ್ಬದ ವಿಶೇಷ ಪೂಜೆಗೆಂದು ಶೃಂಗೇರಿಯಿಂದ ಬಂದಿದ್ದೇವೆ ಎಂದಿದ್ದರು. ಈ ಮಾತನ್ನು ಕೇಳಿಸಿಕೊಂಡ ಹಾಲಶ್ರೀ ಅಲ್ಲಿಂದ ಕಾಲ್ಕಿತ್ತಿದ್ದರು. ಭುವನೇಶ್ವರದಿಂದ ಬಿಹಾರದ ಬುದ್ಧಗಯಾಗೆ ರೈಲು ಟಿಕೆಟ್ ಬುಕ್ ಮಾಡಿದ್ದರು. ರೈಲು ನಿಲ್ದಾಣಕ್ಕೆ ಪೊಲೀಸರು ಬರುವ ಅನುಮಾನ ಹಾಲಶ್ರೀಗೆ ಬಂದಿತ್ತು. ಅದಕ್ಕಾಗಿ ಹಾಲಶ್ರೀ ರೈಲು ಬಿಟ್ಟು 25 ಕಿ.ಮೀ.ದೂರದ ಕಟಕ್ ವರೆಗೆ ಬಸ್ ನಲ್ಲಿ ಹೋಗಿದ್ದರು, ಅಷ್ಟರಲ್ಲಾಗಲೇ ಹಾಲಶ್ರೀ ಟಿಕೆಟ್ ಡೀಟೇಲ್ಸ್ ಒಡಿಶಾ ಪೊಲೀಸರ ಕೈಸೇರಿತ್ತು. ಕಟಕ್ ರೈಲು ನಿಲ್ದಾಣದಲ್ಲಿ ಸಿಸಿಬಿ ಟೀಂ ಕೂಡ ಕಾದು ಕುಳಿತಿತ್ತು, ಎಕ್ಸ್ ಪ್ರೆಸ್ ಹತ್ತಿದ್ದ ಹಾಲಶ್ರೀಯನ್ನು ಮೂವಿಂಗ್ ಟ್ರೈನ್ ನಲ್ಲಿ ರೌಂಡಪ್ ಮಾಡಿದ್ದರು.
ಹಾಲಶ್ರೀ ಅರೆಸ್ಟ್ ಆಗಲಿ ಎಲ್ಲಾ ಬಯಲಾಗುತ್ತೆ ಎಂದಿದ್ದ ಚೈತ್ರಾ:
ಚೈತ್ರಾ ಹೇಳಿಕೆಯಂತೆ ಸ್ವಾಮೀಜಿ ಅರೆಸ್ಟ್ ಆಗಿದ್ದಾಯ್ತು. ಈಗ ಸ್ವಾಮೀಜಿ ವಿಚಾರಣೆಯಲ್ಲಿ ಡೀಲ್ ಸತ್ಯ ಬಯಲಾಗಲಿದೆ. 5 ಕೋಟಿ ಯಾರ್ಯಾರಿಗೆ ಹೋಯ್ತು.. ಯಾವ ವಿಚಾರಕ್ಕೆ ಡೀಲ್ ಆಯ್ತು, ಇಂದಿರಾ ಕ್ಯಾಂಟೀನ್ ಬಿಲ್ ರಹಸ್ಯವೋ.. ಇಲ್ಲಾ ಬೈಂದೂರು ಬಿಜೆಪಿ ಟಿಕೆಟ್ ರಹಸ್ಯವೋ.. ಯಾಕೆ ಹಣ ಪಡೆದಿದ್ರು.. ಸ್ವಾಮೀಜಿಯೇ ಹೇಳ್ಬೇಕು. ಈ ಎಲ್ಲಾ ವಿಚಾರದ ಬಗ್ಗೆ ಸಿಸಿಬಿ ಚೈತ್ರಾ -ಸ್ವಾಮೀಜಿ ಮುಖಾಮುಖಿ ಕೂರಿಸಿ ವಿಚಾರಣೆ ಮಾಡಲಿದೆ.












