ಬಣಕಲ್: ರಸ್ತೆ ಮಧ್ಯೆ ಕೆಟ್ಟು ನಿಂತ ಕೆ.ಎಸ್.ಆರ್.ಟಿ.ಸಿ ಬಸ್ | ಪರದಾಡಿದ ಪ್ರಯಾಣಿಕರು

ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಬೆಂಗಳೂರಿನಿಂದ ಹೊರನಾಡಿಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ತುಂಬಿದ ಪ್ರಯಾಣಿಕರ ಘನ ಭಾರದಿಂದ ಬಸ್ ನ ಪರ್ಚ್ ಕಟ್ ಆಗಿ ಜಾವಳಿ ಕೆಳಗೂರು ಮಾರ್ಗ ಮಧ್ಯೆ ಕೆಟ್ಟು ನಿಂತು ಪ್ರಯಾಣಿಕರು ಪರದಾಡಿದರು.

 

ಇದನ್ನೂ ಓದಿ; ಕೊನೆಗೂ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಹಾಲಶ್ರೀ; ಹಾಲಶ್ರೀ ಲಾಕ್ ಗಾಗಿ ಅರ್ಚಕರ ವೇಷ; ಶೃಂಗೇರಿ ಅರ್ಚಕರ ಪೋಷಾಕಿನಲ್ಲಿ ಹೋಗಿದ್ದ ಸಿಸಿಬಿ ಟೀಂ

ಶಕ್ತಿ ಯೋಜನೆಯ ಹಿನ್ನಲೆಯಲ್ಲಿ ಬಸ್ ನಲ್ಲಿ 90 ಕ್ಕೂ ಅಧಿಕ ಮಂದಿ ಗಂಡಸರು ಮಹಿಳೆಯರು ಶಾಲಾ ಮಕ್ಕಳು ಸೇರಿದಂತೆ ಹಲವರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ಮಾರ್ಗ ಮಧ್ಯೆ ಸುಂಕಸಾಲೆಯಲ್ಲಿ ಕಾರ್ಯಕ್ರಮ ಮುಗಿಸಿ ಬರುವಾಗ ಬಸ್ ಕೆಟ್ಟು ನಿಂತಿರುವುದು ನೋಡಿದ ಶಾಸಕಿ ನಯನಾ ಮೋಟಮ್ಮ ಕಾರು ನಿಲ್ಲಿಸಿ ಪ್ರಯಾಣಿಕರ ಯೋಗ ಕ್ಷೇಮ ವಿಚಾರಿಸಿದರು. ಬಳಿಕ ಬಸ್ ಬಗ್ಗೆ ಚಾಲಕರಲ್ಲಿ ವಿಚಾರಿಸಿದಾಗ ಕೆಟ್ಟು ನಿಂತಿರುವುದು ಗಮನಕ್ಕೆ ಬಂದು ಕೂಡಲೇ ಶಾಸಕಿ ನಯನಾ ಮೋಟಮ್ಮ ಕೆ.ಎಸ್.ಆರ್.ಟಿ ಸಿ ಅಧಿಕಾರಿಗಳಿಗೆ ಪೋನ್ ಮಾಡಿ ಬೇರೆ ಬಸ್ ವ್ಯವಸ್ಥೆಯನ್ನು ಮಾಡಿ ಪ್ರಯಾಣಿಕರಿಗೆ ನೆರವಾದರು.

 

NR Pura: ತಾಲ್ಲೂಕು ವೈದ್ಯಾಧಿಕಾರಿ ಹುದ್ದೆಯಿಂದ ಡಾ. ಎಲ್ಡೋಸ್ ಗೆ ಗೇಟ್ ಪಾಸ್

ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ವೈದ್ಯಾಧಿಕಾರಿ ಡಾ. ಎಲ್ಡೋಸ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದು, ಇಂದು ಬೆಳಗ್ಗೆ ಮಹಿಳೆಯ ಕುಟುಂಬಸ್ಥರಿಗೆ ರೆಡ್ ಹ್ಯಾಂಡ್ ಆಗಿ ಬಾಳೆಹೊನ್ನೂರು ವಸತಿಗೃಹದಲ್ಲಿ ಸಿಕ್ಕಿಬಿದ್ದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

 

ವರ್ಗೀಸ್ ಗೆ ಗೇಟ್ ಪಾಸ್ ಆದೇಶ

ಈ ಸಂಬಂಧ ಡಾ. ವರ್ಗೀಸ್ ಅನ್ನು ನರಸಿಂಹರಾಜಪುರ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಹುದ್ದೆಯಿಂದ ವಜಾ ಮಾಡಲಾಗಿದೆ. ಪೊಲೀಸರ ಕ್ರಮದ ನಂತರ ಉಳಿದ ಇಲಾಖಾ ಕ್ರಮ ವಹಿಸಲಾಗುವುದು ಎಂದು ಡಿ ಎಚ್ಓ ಆಸ್ವತ್ ಬಾಬು ನ್ಯೂಸ್ ಮಲ್ನಾಡ್ ಗೆ ತಿಳಿಸಿದ್ದಾರೆ. ಡಾ. ಎಲ್ಡೋಸ್ ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354 ಅನ್ವಯ ಕೇಸ್ ದಾಖಲಾಗಿತ್ತು. ಸದ್ಯ ಆರೋಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-20.09.2023

 

ಘಟನೆಯ ವಿವರ:
ನೊಂದ ಮಹಿಳೆಯೂ ಇಲಾಖೆಯ ಡಿ ದರ್ಜೆ ಸಿಬ್ಬಂದಿ ಆಗಿದ್ದು ಬಾಳೆಹೊನ್ನೂರು ವಸತಿ ಗೃಹಕ್ಕೆ ಬರಲು ಹೇಳಿದ್ದನು, ಈತನ ಬಗ್ಗೆ ತಿಳಿದಿದ್ದ ಮಹಿಳೆ ತನ್ನ ಗಂಡ ಹಾಗೂ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು, ಬಾಳೆಹೊನ್ನೂರು ಪಟ್ಟಣದ ಸರ್ಕಾರಿ ವೈದ್ಯರ ವಸತಿಗೃಹದಲ್ಲಿ ಮಹಿಳೆಯೊಂದಿಗೆ ಏಕಾಂತ ಸಮಯ ಕಳೆಯಲು ತಯಾರಾಗಿದ್ದಾಗ ಮಹಿಳೆಯ ಪತಿ ಹಾಗೂ ಸಂಬಂಧಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು, ಈತನ ಘನಂದಾರಿ ಕೆಲಸಕ್ಕೆ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮಹಿಳೆಯ ಜೊತೆ ರೂಮ್ ನಲ್ಲಿ ಏಕಾಂತದಲ್ಲಿದ್ದಾಗ ಸಿಕ್ಲಿ ಬಿದ್ದ ಡಾಕ್ಟರ್ – ವೀಡಿಯೋ ನೋಡಲು ಕ್ಲಿಕ್ ಮಾಡಿ

ಈತನ ವಿರುದ್ಧ ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ಸಂಬಂಧ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿದ್ದವು, ನಾಯಿ ಬಾಲ ಡೊಂಕು ಎಂಬಂತೆ ತನ್ನ ಬುದ್ಧಿಯನ್ನು ಬಿಡದ ಕಾರಣ ಇಂದು ಸಾರ್ವಜನಿಕವಾಗಿ ಧರ್ಮದೇಟು ಬೀಳುವಂತಾಗಿದೆ.

ಮಹಿಳೆಯೊಂದಿಗೆ ಸಿಕ್ಕಿಬಿದ್ದ ವೈದ್ಯಾಧಿಕಾರಿ ಡಾ. ಎಲ್ಡೋಸ್ ಗೆ ಹಿಗ್ಗಾಮುಗ್ಗಾ ಗೂಸಾ!

ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ವೈದ್ಯಾಧಿಕಾರಿ ಹಾಗೂ ಜಿಲ್ಲಾ ವೈದ್ಯರ ಸಂಘದ ಅಧ್ಯಕ್ಷ ಡಾ. ಎಲ್ಡೋಸ್ ಮಹಿಳೆಯೊಂದಿಗೆ ಇದ್ದಾಗ ಆಕೆಯ ಕುಟುಂಬಸ್ಥರಿಗೆ ರೆಡ್ ಹ್ಯಾಂಡ್ ಆಗಿ ಬಾಳೆಹೊನ್ನೂರು ವಸತಿಗೃಹದಲ್ಲಿ ಸಿಕ್ಕಿಬಿದ್ದಿದ್ದು ಹಿಗ್ಗಾಮುಗ್ಗಾ ಗೂಸಾ ತಿಂದು ತಾನೇ ಪೇಷಂಟ್ ಆಗಿದ್ದಾನೆ.

ಮಹಿಳೆಯೂ ಇಲಾಖೆಯ ಸಿಬ್ಬಂದಿ ಆಗಿದ್ದು ಬಾಳೆಹೊನ್ನೂರು ವಸತಿ ಗೃಹಕ್ಕೆ ಬರಲು ಹೇಳಿದ್ದನು, ಈತನ ಬಗ್ಗೆ ತಿಳಿದಿದ್ದ ಮಹಿಳೆ ತನ್ನ ಗಂಡ ಹಾಗೂ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು,
ಬಾಳೆಹೊನ್ನೂರು ಪಟ್ಟಣದ ಸರ್ಕಾರಿ ವೈದ್ಯರ ವಸತಿಗೃಹದಲ್ಲಿ ಮಹಿಳೆಯೊಂದಿಗೆ ಏಕಾಂತ ಸಮಯ ಕಳೆಯಲು ತಯಾರಾಗಿದ್ದಾಗ ಮಹಿಳೆಯ ಪತಿ ಹಾಗೂ ಸಂಬಂಧಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ, ಈತನ ಘನಂದಾರಿ ಕೆಲಸಕ್ಕೆ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈತನ ವಿರುದ್ಧ ಈ ಹಿಂದೆಯೂ ಹಲವು ಆರೋಪಿಗಳು ಕೇಳಿಬಂದಿದ್ದವು, ಆದರೆ ಕಾನೂನಿನ ಕಣ್ಣಿನಿಂದ ಬಚಾವಾಗಿದ್ದನು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.