ತೀರ್ಥಹಳ್ಳಿಯ ಗಾಯತ್ರಿ ಜ್ಯುವೆಲ್ಲರ್ಸ್ ವತಿಯಿಂದ ರಾಜ್ಯಕ್ಕೆ ಹಾಗೂ ತಾಲೂಕಿಗೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಇದನ್ನೂ ಓದಿ: ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್; ಸರ್ಕಾರದ ಈ ಆದೇಶ ನೋಡಿ

ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ದೀಕ್ಷಾ ರಾಘವೇಂದ್ರ ಕಲ್ಕೂರ್ ಹಾಗೆಯೇ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕನ್ನಿಕಾ ಜಿ ಶೆಟ್ಟಿ, ಪ್ರೇಕ್ಷ ಪೂಜಾರಿ, ಉತ್ತಮ ಸಾಧನೆ ಮಾಡಿದ ಅವಳಿ ಮಕ್ಕಳಾದ ಸಂಕೇತ್ ಪಿ ಭಟ್, ಸಮರ್ಥ್ ಪಿ ಭಟ್ ಸೇರಿದಂತೆ ಅನೇಕ ಸಾಧಕ ವಿದ್ಯಾರ್ಥಿಗಳನ್ನು ಪಟ್ಟಣದ ಗಾಂಧಿ ಚೌಕದಲ್ಲಿರುವ ಗಾಯತ್ರಿ ಜ್ಯುವೆಲ್ಲರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಇದನ್ನೂ ಓದಿ: 10th ಹಾಗೂ PUC ವಿದ್ಯಾರ್ಥಿಗಳ ಗಮನಕ್ಕೆ; 40,000 ಸ್ಕಾಲರ್ ಶಿಪ್ ಗೆ ಹೀಗೆ ಅರ್ಜಿ ಸಲ್ಲಿಸಿ
ಈ ಸಂದರ್ಭದಲ್ಲಿ ಗಾಯತ್ರಿ ಜ್ಯುವೆಲ್ಲರ್ಸ್ ಮಾಲೀಕರಾದ ಅನಂತ ಪದ್ಮನಾಭ ಆಚಾರ್ಯ ಹಾಗೂ ಮೋಹಿನಿ ಆಚಾರ್ಯ ಎಲ್ಲಾ ಸಿಬ್ಬಂದಿಗಳು ಇದ್ದರು.













